ಶಹಾಪುರ: ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಅವರ ತಾಯಿಯಾದ ಬಸಮ್ಮ ಎಸ್ ಮಹಾಮನಿ ( 80) ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಕಲಬುರಗಿಯ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.
ಮೃತರಿಗೆ ಇಬ್ಬರು ಗಂಡು ಮಕ್ಕಳು ಮೊದಲನೆಯವರು ಸಿದ್ದಲಿಂಗಣ್ಣ ಮಹಾಮನಿ ಎರಡನೆಯವರು ಹಾಸ್ಯ ಕಲಾವಿದರಾದ ಬಸವರಾಜ್ ಮಹಾಮನಿ.
ನಾಳೆ ೨ ಗಂಟೆಗೆ ಹತ್ತಿಗೂಡೂರ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.