ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮಾರ್ಗವೇ ಈ ಗೋಡೆ ಪತ್ರಿಕೆ: ಹಿರಿಯ ಪತ್ರಕರ್ತ ಯಡ್ರಾಮಿ

0
71

ಕಲಬುರಗಿ: ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮಾರ್ಗವೇ ಈ ಗೋಡೆ ಪತ್ರಿಕೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಬುರಾವ ಯಡ್ರಾಮಿ ಯವರು ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದವರು ಆರಂಭಿಸಿರುವ ‘ಖುಲೆ ಮನ್’ ಗೋಡೆ ಪತ್ರಿಕೆಯನ್ನು ಉದ್ಘಾಟಿಸಿ ಮಾತನಾಡಿದರು.

ಮುಂದುವರೆದು ಹಿಂದಿ ವಿಭಾಗದವರು ಆರಂಭಿಸಿರುವ ಗೋಡೆ ಪತ್ರಿಕೆಯ ಶೀರ್ಷಿಕೆ “ಖುಲೆ ಮನ್” ಮುಕ್ತ ಮನಸ್ಸು ಹಂಚಿಕೊಳ್ಳುವ ವೇದಿಕೆ. ಈ ಯಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳ ಸುತ್ತಲೂ ಲಭ್ಯವಿರುವ ಹಲವಾರು ಸಂಗತಿಗಳು ಮತ್ತು ಅಂಕಿಅಂಶಗಳಿಂದ ಅಗತ್ಯವಿರುವ ಮಾಹಿತಿಯನ್ನು ಶೋಧಿಸಲು ಇದು ಅವರಿಗೆ ಸಹಾಯ ಮಾಡುತ್ತದೆ. ಅಲ್ಲದೆ, ಅವರು ನಿಯಮಿತವಾಗಿ ವೃತ್ತಪತ್ರಿಕೆಗಳು, ನಿಯತಕಾಲಿಕೆಗಳು ಓದುವ ಹವ್ಯಾಸವನ್ನು ರೂಡಿಸಿಕೊಳುತ್ತಾರೆ ಎಂದು ಹೇಳಿದರು.

Contact Your\'s Advertisement; 9902492681

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ವಹಿಸಿಕೊಂಡು ವಿದ್ಯಾರ್ಥಿಗಳು ಇಂದಿನ ಇಂಟರ್ನೆಟ್ ಸರ್ಫಿಂಗ್ ಯುಗದಲ್ಲಿ ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಈ ವೇದಿಕೆ ಪ್ರಮುಖವಾಗಿದೆ ಹಾಗೂ ಈ ವೇದಿಕೆಯನ್ನು ಮಹಾವಿದ್ಯಾಲಯದಲ್ಲಿ ಆರಂಭಿಸಿರುವ ಹಿಂದಿ ವಿಭಾಗದ ಈ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಬರುವ ದಿನಗಳಲ್ಲಿ ಮಹಾವಿದ್ಯಾಲಯದ ವತಿಯಿಂದ ನ್ಯೂಸ್ ಬುಲೆಟಿನ ಮತ್ತು ಸಂಶೋಧನೆಯನ್ನು ಪ್ರೋತ್ಸಾಹಿಸಲು ಒಂದು ಅಂತರಾಷ್ಟ್ರೀಯ ಮಟ್ಟದ ಆನ್ಲೈನ್ ಜರ್ನಲ್ ಸಹ ಆರಂಭಿಸಲಾಗುವುದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರೇಮಚಂದ ಚವ್ಹಾಣ ಅವರು ಪ್ರಾಸ್ತಾವಿಕ ಮತ್ತು ಸ್ವಾಗತ ಭಾಷಣ ಮಾಡಿದರು. ಕವಿತಾ ಠಾಕೂರ ವಂದಿಸಿದರು. ಶ್ರೀಮತಿ ಸುಷ್ಮಾ ಕುಲಕರ್ಣಿಯವರು ಕಾರ್ಯಕ್ರಮವನ್ನು ನಿರೂಪಿಸಿದ್ದರು.

ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯರಾದ ಡಾ. ವೀಣಾ ಎಚ್.,ಐಕ್ಯೂಎಸಿ ಸಂಯೋಜಕರಾದ ಡಾ. ಶಿವರಾಜ ಗೌನಳ್ಳಿ, ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ, ಡಾ. ಮಹೇಶ ಗಂವ್ಹಾರ, ಪ್ರೊ. ವಾಯ್. ಎನ್. ರವೀಂದ್ರ, ಡಾ. ನಾಗೇಂದ್ರ ಮಸೂತಿ, ಡಾ. ಶಿವರಾಜ ಮುಲಗೆ, ಡಾ. ವಿಜಯಕುಮಾರ ಪರುತೆ, ಡಾ. ಸುಭಾಷ ದೊಡ್ಡಮನಿ, ಡಾ. ಜ್ಯೋತಿಪ್ರಕಾಶ, ಡಾ. ವಿಶ್ವನಾಥ ದೇವರಮನಿ, ಕು. ಅಂಜಲಿ ಯಾದವ, ಕು. ಅಂಜಲಿ ರಾಜಪೈರೊಹಿತ, ಕು. ಹೆಜಲ ಠಕ್ಕರ, ಕು. ಧನ್ಯ ಆನಾಗುಂದಿ ಹಲವಾರು ಬೋಧಕ ಮತ್ತು ಬೋಧಕೇತ್ತರ ಸಿಬ್ಬಂದಿ ವರ್ಗದವರು ಮತ್ತು ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here