ವಾಡಿ (ಜಂ); ಪಟ್ಟಣದ ಬಿಜೆಪಿ ಕಚೇರಿಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

0
52

ವಾಡಿ (ಜಂ); ಪಟ್ಟಣದ ಬಿಜೆಪಿ ಕಚೇರಿಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಭಗವತ್ ಸುಳೆ ಅವರು ಧ್ವಜಾರೋಹಣ ನೇರವೇರಿಸಿದರು.

ಮುಖಂಡರಾದ ದೇವಿಂದ್ರ ಕರದಳ್ಳಿ ಮಾತನಾಡುತ್ತಾ ಮೋದಿ ಅವರ ನೇತೃತ್ವದಲ್ಲಿ ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ತ್ವರಿತಗತಿಯಲ್ಲಿ ಸಾಗುತ್ತಿದೆ ಮತ್ತು ಬಡವರ ಉನ್ನತಿಗೆ ಸರ್ಕಾರ ಪ್ರಾಮಾಣಿಕವಾಗಿ ಬದ್ಧವಾಗಿದೆ. ಅವರ ಅಪ್ರತಿಮ ಅಭಿವೃದ್ಧಿಯ ಜೊತೆಗೆ ಇಂದು ನಾವು ಸ್ವಾತಂತ್ರ್ಯದ ಅಮೃತಮೊತ್ಸವ ಆಚರಿಸುತ್ತಿದ್ದೇವೆ ಎಂದರು.

Contact Your\'s Advertisement; 9902492681

ತಾಲ್ಲೂಕ ಎಸ್ ಸಿ ಮೂರ್ಚಾ ಅಧ್ಯಕ್ಷ ರಾದ ರಾಜು‌ ಮುಕ್ಕಣ್ಣ ಮಾತನಾಡಿ ದೇಶಾಭಿಮಾನ,ಸಮಾಜ ಹಿತದ ಕಾಯಕದೊಂದಿಗೆ ಬದುಕಿದಂತ ಮಹಾತ್ಮರ ಭೂಮಿ ಇದು. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಮಹನೀಯರನ್ನು ಇಂದು ನೆನೆಯುತ್ತಾ,
ಅವರು ನೀಡಿದಂತ ಈ ನಮ್ಮ ಸ್ವಾತಂತ್ರ್ಯದ ಬದುಕು ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರಲಿ, ನಮ್ಮ ಕೇಂದ್ರದ ಮೋದಿ ಸರ್ಕಾರವು ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿದೆ ಮತ್ತು ದೇಶವು ಶೀಘ್ರದಲ್ಲೇ ವಿಶ್ವ ಗುರುವಾಗಲಿದೆ ಎಂದು ಹೇಳಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಬಸವರಾಜ ಪಂಚಾಳ ಅವರು ಮಾತನಾಡಿ ದೇಶಕ್ಕಾಗಿ ದೇಶದ ಪ್ರತಿಯೊಬ್ಬ ನಾಗರಿಕರ ಹಿತಕ್ಕಾಗಿ ಕೇಂದ್ರದಲ್ಲಿ ನಮ್ಮ ನರೇಂದ್ರ ಮೋದಿಯವರು ದುಡಿಯುತ್ತಿದ್ದಾರೆ. ಇಂದಿನ 76ನೇ ಸ್ವಾತಂತ್ರ್ಯ ದಿನಾಚರಣೆಗೆ ಮೆರಗು ನೀಡಲು ಈ ಆಜಾದಿ ಕಾ ಅಮೃತ್ ಮಹೋತ್ಸವ ಎಂದರು.

75 ವರ್ಷಗಳ ಸ್ವಾತಂತ್ರ್ಯ,ಜನರ ಜೀವನ, ಸಂಸ್ಕೃತಿ ಮತ್ತು ಸಾಧನೆಗಳ ವೈಭವದ ಇತಿಹಾಸವನ್ನು ಆಚರಿಸಲು ಮತ್ತು ಸ್ಮರಿಸುವ
ಕಾರ್ಯಕ್ರಮ ಇದಾಗಿದೆ, ಇದು ನಮ್ಮಲಿ ದೇಶಾಭಿಮಾನ ಹೆಚ್ಚಿಸಿದೆ ಎಂದು ಹೇಳಿದರು.

ಸಂದರ್ಭದಲ್ಲಿ ಭಗವತ್ ಸುಳೆ,ಬಸವರಾಜ ಪಂಚಾಳ, ವಿಠಲ ನಾಯಕ,ರಾಮಚಂದ್ರ ರಡ್ಡಿ,ಸಿದ್ದಣ್ಣ ಕಲ್ಲಶೆಟ್ಟಿ,ಭೀಮಶಾ ಜೀರೋಳ್ಳಿ,ರಾಜು ಮುಕ್ಕಣ್ಣ,ದೇವೇಂದ್ರ ಕರದಳ್ಳಿ, ಅಶೋಕ ಹರನಾಳ,ಗಿರಿಮಲ್ಲಪ್ಪ ಕಟ್ಟಿಮನಿ,ಹರಿ ಗಲಾಂಡೆ,ಸುಭಾಷ್ ವರ್ಮಾ,ಶಿವಶಂಕರ ಕಾಶೆಟ್ಟಿ,ಗಣಪತ್ ಸುತ್ರಾವೆ,ರಾಜು ಕೊಳಿ,ಯಮನಪ್ಪ ನವನಳ್ಳಿ,ರವಿ ನಾಯಕ,ಆನಂದ ಇಂಗಳಗಿ,ಆನಂದ ಡೌಳೆ, ಬಸವರಾಜ ಕಿರಣಗಿ,ಅಯ್ಯಣ ದಂಡೋತಿ,ಚಂದ್ರಶೇಖರ ಬೆಣ್ಣೂರ,ಗೋಪಾಲ ರಾಠೊಡ,ದೌಲತರಾವ ಚಿತ್ತಾಪುರಕರ್,ಹೀರಾ ನಾಯಕ,ರವಿ ಸಿಂದಗಿ, ಮಲ್ಲಿಕಾರ್ಜುನ ಸಾತಖೇಡ,ರಿಚರ್ಡ್‌ ಮಾರೆಡ್ಡಿ,ಪ್ರೇಮ ರಾಠೊಡ.ಶ್ರಾವಣ ಕುಮಾರ ರಾಠೋಡ,ಅಶೋಕ ರಾಠೊಡ, ಕುಮಾರ ಚವ್ಹಾಣ,ಸಂಜಯ ಕಾನಕುರ್ತೆ ಸೇರಿದಂತೆ ಅನೇಕರು ಇದ್ದರು. ತಾಲ್ಲೂಕ ಉಪಾಧ್ಯಕ್ಷ ವೀರಣ್ಣ ಯಾರಿ ಸ್ವಾಗತಿಸಿ, ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here