ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗೈದವರ ಸದಾ ಸ್ಮರಿಸೋಣ; ಶಾಸಕ ಆರ್.ವಿ.ನಾಯಕ

0
17

ಸುರಪುರ: ಇಂದು ನಾವೆಲ್ಲರು ಇಂತಹ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತೇವೆ ಎಂದರೆ,ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗೈದ ಎಲ್ಲ ಮಹನಿಯರನ್ನು ಸದಾಕಾಲ ಸ್ಮರಿಸೋಣ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.

ತಾಲೂಕು ಆಡಳಿತ ದಿಂದ ನಗರದ ಶ್ರೀ ಪ್ರಭು ಮಹಾವಿದ್ಯಾಲಯದ ಆವರಣದಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ,ಇಂದು ಯುವಕರು ಹೆಚ್ಚೆಚ್ಚು ಮೊಬೈಲ್ ಕಡೆಗೆ ಆಕರ್ಷಿತರಾಗುತ್ತಿದ್ದಾರೆ,ಇಂಟರ್ನೆಟ್ ಎನ್ನುವುದನ್ನು ಒಳ್ಳೆಯದಕ್ಕಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.

Contact Your\'s Advertisement; 9902492681

ಅಲ್ಲದೆ ನಾನು ಈ ಹಿಂದೆ ಮೂರು ಬಾರಿ ಶಾಸಕನಾಗಿದ್ದಾಗ ಕ್ಷೇತ್ರದ ಸಮಗ್ರ ಅಭಿವೃಧ್ಧಿಗೆ ಶ್ರಮಿಸಿರುವೆ,ಮುಂದೆಯೂ ಕ್ಷೇತ್ರದ ಅಭಿವೃಧ್ಧಿಗೆ ನಿರಂತರವಾಗಿ ಶ್ರಮಿಸುವೆ,ತಾವೆಲ್ಲರು ಸಹಕಾರ ನೀಡಬೇಕು ಮತ್ತು ನಮ್ಮ ಸರಕಾರ ಚುನಾವಣೆ ಪೂರ್ವದಲ್ಲಿ ನೀಡಿದ ಐದು ಗ್ಯಾರಂಟಿ ಕಾರ್ಡ್‍ಗಳನ್ನು ಜಾರಿಗೊಳಿಸಿದ್ದು ಜನರು ಇದನ್ನು ಸದುಪಯೋಗ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಮಹಾತ್ಮ ಗಾಂಧಿ ಹಾಗೂ ಡಾ:ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ತಹಸೀಲ್ದಾರ್ ವಿಜಯಕುಮಾರ ಕೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಹತ್ತನೆ ತರಗತಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.ಅಲ್ಲದೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಪ್ರಶಂಸಣಾ ಪತ್ರ ವಿತರಿಸಲಾಯಿತು.

ನಂತರ ನಗರದ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು,ಶ್ರೀ ಖಾಸ್ಗತೇಶ್ವರ ನೃತ್ಯ ಕಲಾ ಸಂಸ್ಥೆ ಮಕ್ಕಳ ನಾಲ್ವಡಿ ರಾಜಾ ವೆಂಟಕಪ್ಪ ನಾಯಕ ಅವರ ಪಾತ್ರದ ಸಂಭಾಷಣೆ ಬೆರೆತ ಹಾಡಿನ ನೃತ್ಯ ಎಲ್ಲರ ಗಮನ ಸೆಳೆಯಿತು ಹಾಗೂ ಸಂಸ್ಥೆಯಿಂದ ಮಕ್ಕಳ ಕರಾಟೆ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮದ ವೇದಿಕೆ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ,ತಾ.ಪಂ ಇಓ ಬಸವರಾಜ ಸಜ್ಜನ್,ಡಿವೈಎಸ್ಪಿ ಜಾವಿದ್ ಇನಾಂದಾರ್,ಪಿ.ಐ ಆನಂದ ವಾಘಮೊಡೆ,ನಗರಸಭೆ ಪೌರಾಯುಕ್ತ ಪ್ರೇಮ್ ಚಾಲ್ರ್ಸ್,ಬಿ.ಇ.ಓ ಯಲ್ಲಪ್ಪ ಕಾಡ್ಲೂರ್,ಶಿಕ್ಷಣ ಇಲಾಖೆಯ ಪಂಡೀತ್ ನಿಂಬೂರ್,ಲೊಕೋಪಯೋಗಿ ಇಲಾಖೆ ಎಇಇ ಎಸ್.ಜಿ ಪಾಟೀಲ್,ಗೃಹರಕ್ಷಕ ದಳದ ಕಂಪನಿ ಕಮಾಂಡರ್ ಯಲ್ಲಪ್ಪ ಹುಲಿಕಲ್,ಅಬಕಾರಿ ಇಲಾಖೆ ಪಿ.ಐ ಹಾಗೂ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಸೇರಿದಂತೆ ಅನೇಕ ಜನ ನಗರಸಭೆ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ವೇದಿಕೆಯಲ್ಲಿದ್ದರು.ಶಿಕ್ಷಕ ರಾಜಶೇಖರ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು,ಪಂಡೀತ ನಿಂಬೂರ ಸ್ವಾಗತಿಸಿದರು,ಬಿ.ಆರ್.ಸಿ ಖಾದರ ಪಟೇಲ್,ಶಿಕ್ಷಕ ಲಕ್ಷ್ಮಣ ಬಿರಾದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here