ESI & PF ಏಜೆನ್ಸಿಗಳಿಗೆ ಕಲಬುರಗಿ ಡಿಸಿ ಖಡಕ್ ಸೂಚನೆ

0
145

ಕಲಬುರಗಿ; ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳ ಖಾತೆಗೆ ನಿಯಮಿತವಾಗಿ ಸಂಸ್ಥೆಯಿಂದ ಮಾಸಿಕ ಇ.ಎಸ್.ಐ., ಪಿ‌.ಎಫ್. ಪಾವತಿ ಮಾಡದ ಹೊರ ಸಂಪನ್ಮೂಲ ಏಜೆನ್ಸಿಗಳನ್ನು ಮುಲಾಜಿಲ್ಲದೆ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಬುಧವಾರ ತಮ್ಮ‌ ಕಚೇರಿಯಲ್ಲಿ ಜಿಲ್ಲಾ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ನೇಮಕಾತಿ ಪ್ರತಿಬಂಧಕ ಮತ್ತು ಪುನರ್ ವಸತಿ ಅಧಿನಿಯಮ-2013 ಅನುಷ್ಠಾನ ಕುರಿತ ಸಭೆ ಅಧ್ಯಕ್ಷತೆ ವಹಿಸಿದ ಮಾತನಾಡಿದ ಅವರು, ಪೌರ ಸಂಸ್ಥೆಗಳು ಕಾರ್ಮಿಕರಿಗೆ ವೇತನ ಪಾವತಿ ಮಾಡುವುದಷ್ಟೆ ಅಲ್ಲ, ಕಾರ್ಮಿಕ ಖಾತೆಗೆ ಏಜೆನ್ಸಿಗಳು ಇ.ಎಸ್.ಐ., ಪಿ.ಎಫ್ ಪಾವತಿ ಮಾಡುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.

Contact Your\'s Advertisement; 9902492681

ಸ್ಕ್ಯಾವೆಂಜರ್ ಕೆಲಸಕ್ಕೆ‌ ಕಾರ್ಮಿಕರನ್ನು ಯಾವುದೇ ಕಾರಣಕ್ಕು ಬಳಸುವಂತಿಲ್ಲ. ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರ ಬಳಸಬೇಕು. ಮ್ಯಾನ್ ಹೋಲ್, ಒಳಚರಂಡಿ, ರೊಚ್ಚತೊಟ್ಟಿ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಕರ್ಮಚಾರಿಗಳಿಗೆ ಸುರಕ್ಷಾ ಪರಿಕರ ನೀಡಬೇಕು. ಮ್ಯಾನುವೆಲ್ ಸ್ಕ್ಯಾವೆಂಜರ್ ಗಳು ತಮ್ಮ ವೃತ್ತಿ ಬಿಟ್ಟು ಇತರೆ ವೃತ್ತಿಯಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಲು ಕೌಶಲ್ಯ ತರಬೇತಿ ನೀಡಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ಅಧಿಕಾರಿಗಳುಗೆ ಸೂಚಿಸಿದರು.

ಜಿಲ್ಲೆಯಲ್ಲಿ ಪೌರಕಾರ್ಮಿಕರಿಗೆ ನಿವೇಶನ ಇದ್ದವರಿಗೆ ಮನೆ ಭಾಗ್ಯ, ನಿವೇಶನ‌ ಇಲ್ಲದವರಿಗೆ ನಿವೇಶನದ ಜೊತೆ ಮನೆ ಭಾಗ್ಯ ಕಲ್ಪಿಸಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಪಿ.ಎಂ.-ಸ್ವನಿಧಿ ಯೋಜನೆಯಡಿ ಮೂರು‌ ಹಂತದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಇದನ್ನು‌ ಮಿಷನ್‌ ಮೋಡ್ ನಲ್ಲಿ ಆರಂಭಿಸಿ ಶ್ರಮಿಕರ ನೆರವಿಗೆ ಧಾವಿಸಬೇಕು‌ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ಯ ಭುವನೇಶ ಪಾಟೀಲ, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಪಾಲಿಕೆ ಉಪ ಆಯುಕ್ತ ಪ್ರಕಾಶ ರಜಪುತ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶರಣಬಸಪ್ಪ ಬೆಣ್ಣೂರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಜಿಲ್ಲಾ ಸಮಿತಿಯ ಸದಸ್ಯ ಅನೀಲಕುಮಾರ ಸೇರಿದಂತೆ ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here