ಹಟ್ಟಿ: CITU ಸಂಯೋಜಿತ ಆಟೋ ಯೂನಿಯನ್ ರಚನೆ

0
227

ಹಟ್ಟಿ: ಪಟ್ಟಣದಲ್ಲಿ ಫೆಡರೇಶನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ (ಎಫ್ ಕೆಎಆರ್ ಡಿಯು) ವಿಲ್ಹೆಜ್ ಬಸ್ ಸ್ಟ್ಯಾಂಡ್ ಘಟಕವನ್ನು ರಚನೆ ಮಾಡಲಾಯಿತು.

ಬುಧವಾರ ದಂದು ಪಟ್ಟಣದ ಕೋಠಾ ರಸ್ತೆಯಲ್ಲಿರುವ ಸಿಐಟಿಯು ಕಛೇರಿಯಲ್ಲಿ ಆಟೋ ರಿಕ್ಷಾ ಚಾಲಕರ ಸಭೆ ನಡೆಸಿ ಸರ್ವಾನುಮತದಿಂದ ಒಟ್ಟು 12 ಸದಸ್ಯರ ಘಟಕವನ್ನು ಘಟಕ ರಚನೆ ಮಾಡಲಾಯಿತು.

Contact Your\'s Advertisement; 9902492681

ಅಧ್ಯಕ್ಷರಾಗಿ ಮಹಿಬೂಬ್ ಖುರೇಷಿ, ಪ್ರಧಾನ ಕಾರ್ಯದರ್ಶಿಯಾಗಿ ಬಸವಲಿಂಗಯ್ಯ ಖಜಾಂಚಿಯಾಗಿ ಮಹಿಬೂಬ್ ಲಾಲ್ ಗಡಿ ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಸಲೀಂ ಪಾಷಾ, ಹುಸೇನ್ ಪಾಷಾ, ಸಹ ಕಾರ್ಯದರ್ಶಿಯಾಗಿ ಚಂದ್ರಶೇಖರ್, ಸದ್ದಾಂ ಹುಸೇನ್ ಆಯ್ಕೆಯಾಗಿದ್ದಾರೆ. ಘಟಕದ ಸದಸ್ಯರಾಗಿ ಇಸ್ಮಾಯಿಲ್ ಸಾಬ್, ಅಜ್ಮೀರ್ ಪಾಷಾ, ಇಬ್ರಾಹಿಂ, ಮುನ್ನಾ, ಪಾಷಾ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಮಾತನಾಡಿ, ಹೊಟ್ಟೆಪಾಡಿಗಾಗಿ ಆಟೋ ಓಡಿಸಿ ಜೀವಿಸುತ್ತಿರುವ ಆಟೋ ಚಾಲಕರಿಗೆ ಸರ್ಕಾರ ಯಾವುದೇ ಹೇಳಿಕೊಳ್ಳುವ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಬದಲಾಗಿ ಪೊಲೀಸ್ ಮತ್ತು ಆರ್ ಟಿ ಓ ಗಳ ಮೂಲಕ ಚಾಲಕರಿಂದ ಹಣ ಪೀಕುವ ಕೆಲಸ ನಡೆಯುತ್ತಿದೆ. ಕೇವಲ ಆಟೋ ಅಪಘಾತ ಆದಾಗ ಚಾಲಕ ಸಾವನ್ನಪ್ಪಿದ್ರೆ ಮಾತ್ರ 5 ಲಕ್ಷ ಪರಿಹಾರ ಮಾತ್ರ ಘೋಷಣೆ ಮಾಡಿದೆ. ಈ ಯೋಜನೆ ಜೊತೆಗೆ ಆಟೋ ಚಾಲಕರಿಗೆ ಜೀವನ ಮಟ್ಟ ಸುಧಾರಿಸಲು ಯೋಜನೆಗಳ ಜಾರಿಗಾಗಿ ಹೋರಾಟ ರೂಪಿಸಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಿಐಟಿಯು ತಾಲೂಕು ಸಂಚಾಲಕ ಮಹಮ್ಮದ್ ಹನೀಫ್, ತಾಲೂಕ ಸಮಿತಿ ಸದಸ್ಯರಾದ ಅಲ್ಲಾಭಕ್ಷ, ನಿಂಗಪ್ಪ ಎಂ., ವೆಂಕಟೇಶ್ ಹಟ್ಟಿ ಚಿನ್ನದಗಣಿ ಘಟಕದ ಕಾರ್ಯದರ್ಶಿ ಬಾಬು ಸಾಗರ್ ಸೇರಿದಂತೆ ವಿಲ್ಹೇಜ್ ಬಸ್ ಸ್ಟ್ಯಾಂಡ್ ನ ಹತ್ತಿರದ ಆಟೋ ರಿಕ್ಷಾ ಸ್ಟ್ಯಾಂಡ್ ನ ಅನೇಕ ಆಟೋ ಚಾಲಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here