ಕಲಬುರಗಿ: ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಸಿದ್ಧತೆ ನಡೆಸಿದ್ದು, ಕರ್ನಾಟಕದ ಪ್ರಮುಖ ಎಡಗೈ ದಲಿತ ನಾಯಕರಾಗಿ ಹೊರ ಹೊಮ್ಮುತ್ತಿರುವ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಪಕ್ಷ ನೀಡಿದ್ದು, ಸಂಘಟನೆಯಲ್ಲಿ ತೊಡಗಿ, ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ತೆಲಂಗಾಣದ ಕರೀಂ ನಗರ ಜಿಲ್ಲೆಯ ಚೊಪ್ಪದಂಡಿ ವಿಧಾನಸಭಾ ಕ್ಷೇತ್ರದ ಪ್ರವಾಸಿ ಉಸ್ತುವಾರಿಯಾಗಿರುವ ಶಾಸಕ ಮತ್ತಿಮಡು ಕಳೆದ ನಾಲ್ಕೈದು ದಿನದಿಂದ ಪಕ್ಷದ ವಿವಿಧ ಸ್ಥರದ ಸಭೆ, ಭೇಟಿ ಮಾಡಿದ್ದಾರೆ.
ಚೊಪ್ಪದಂಡಿ ವಿಧಾನಸಭಾ ಕ್ಷೇತ್ರದ ಗಂಗಾಧರ, ಘರ್ಷಾಕುರ್ತಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪಕ್ಷ ಸಂಘಟನೆಯ ಸಭೆ ನಡೆಸಿದರು.
ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಗಳು, ಕಾರ್ಯಕರ್ತರು, ಪ್ರಮುಖರು, ಬೂತ್ ಪದಾಧಿಕಾರಿಗಳು, ವಿವಿಧ ಮೋರ್ಚಾ ಪದಾಧಿಕಾರಿಗಳ ಸಭೆ ನಡೆಸಿ, ಮಾಹಿತಿ ಪಡೆದರು.
ಸಂಘ ಪರಿವಾರದ ಪ್ರಮುಖರ ಮನೆಗೆ ಭೇಟಿ ನೀಡಿ, ಸ್ಥಳೀಯವಾಗಿ ಪಕ್ಷದ ಸ್ಥಿತಿಗತಿ ಕುರಿತು ಚರ್ಚಿಸಲಾಯಿತು. ಕಾರ್ಯಕರ್ತರ ಮನೆಯಲ್ಲಿ ಕಾರ್ಯಕರ್ತರೊಂದಿಗೆ ಸಹಭೋಜನ ನಡೆಸಿದರು.
ಸಾಮಾಜಿಕ ಜಾಲತಾಣ, ಬೂತ್ ಸಮಿತಿ ಸಭೆ ನಡೆಸಿ, ಗೋಡೆ ಬರಹ ಅಭಿಯಾನ, ಸಂಪರ್ಕ್ ಸೇ ಸಮರ್ಥನ ಅಭಿಯಾನ ನಡೆಸಿ, ಚುನಾವಣೆ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಪ್ರಮುಖರಾದ ಪ್ರಭಾಕರ ಯಾಧವ್, ತೆಲಂಗಾಣದ ಮಾಜಿ ಸಚಿವರಾದ ಸುಧಾಳ ದೇವಯ್ಯ, ಪ್ರಮುಖರಾದ ಜಂಗಮಪಿಲ್ಲಿ ಶಂಕರ್, ಲಕ್ಷ್ಮೀ ನಾರಾಯಣ್, ಪ್ರಭಾಕರ ಯಾಧವ್, ಶ್ರವಣಕುಮಾರ, ಸಿಂಗಿರೆಡ್ಡಿ ಕೃಷ್ಣಾರೆಡ್ಡಿ, ವೈದ್ಯ ರಾಮಾನುಜಮ್, ಅಕುಲ್ ಮನೋಹರ್, ವಿನಯ ಸಾಗರ, ರಾಮ ಇ, ಲಕ್ಷ್ಮಣ, ನಿಖಿಲ್, ಕಾಲಾ ಅಶೋಕ, ಶಶಿಧರ ರೆಡ್ಡಿ, ಪ್ರಜ್ಞಾ, ಅನೀಲ, ಶ್ರೀನಿವಾಸ್ ಎಸ್, ಡಿ.ಶ್ರೀನಿವಾಸ್, ರಾಮಾನುಜಮ್ ಸೇರಿದಂತೆ ಪಕ್ಷದ ಮುಖಂಡರು, ಯುವ ಕಾರ್ಯಕರ್ತರು, ಸೋಷಿಯಲ್ ಮೀಡಿಯಾ ಕಾರ್ಯಕರ್ತರು ಜೊತೆಗಿದ್ದರು.