ವಾಡಿ; ನಾಗರ ಪಂಚಮಿ ಹಬ್ಬ ಆಚರಣೆ

0
49

ವಾಡಿ; ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಶ್ರಾವಣ ಮಾಸದ ಮೊದಲ ನಾಗರ ಪಂಚಮಿ ಹಬ್ಬವನ್ನು ಜನರು ಕುಟುಂಬ ಸಮೇತ ನಾಗರ ಕಟ್ಟೆ, ನಾಗರ ಹಾವಿನ ಮೂರ್ತಿ ಹಾಗೂ ಹಾವಿನ ಹುತ್ತಕ್ಕೆ ಹಾಲೆರೆಯುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಿದರು.

ಬೆಳಗ್ಗೆ ಯಿಂದ ವಿವಿಧ ದೇವಸ್ಥಾನದಲ್ಲಿರುವ ನಾಗರಕಟ್ಟೆಗಳಿಗೆ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ನಗರದ ಹೊರವಲಯದಲ್ಲಿರುವ ಹುತ್ತಗಳಿಗೆ ಕೆಲವರು ಹಾಲೆರೆದು ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸಿದರು.

Contact Your\'s Advertisement; 9902492681

ಹಾವನ್ನು ದೇವ,ದೇವತೆ ಎಂದು ಪರಿಗಣಿಸಿ, ಇಂದು ಅನೇಕ ಕಾರಣಗಳಿಂದ ನಾಗ‌ ದೇವರನ್ನು ಪೂಜಿಸಲಾಗುತ್ತದೆ.ಈ ದಿನ ಹಾವಿಗೆ ಹಾಲೆರೆದು ಪೂಜಿಸಿ ಸಕಲ ಇಷ್ಟಾರ್ಥಗಳು ಪ್ರಾಪ್ತಿಯಾಗುವಂತೆ ನಾಗದೇವನನ್ನ ಬೇಡುವುದು ವಾಡಿಕೆ.

ಕಮರವಾಡಿ ಗ್ರಾಮದ ಹೊರವಲಯದಲ್ಲಿ ನಾಗರ ಪಂಚಮಿ ಯಂದು ಸುಮಾರು ವರ್ಷಗಳಿಂದ ಪೂಜಿಸಲ್ಪಡುತ್ತಿರುವ ಹುತ್ತಕ್ಕೆ ವಿಶಿಷ್ಟವಾಗಿ ಅಲಂಕರಿಸಿ,ಪೂಜೆ ಯನ್ನು ಸಲ್ಲಿಸಲಾಗಿತ್ತು,ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳ ಸಾವಿರಾರು ಭಕ್ತರು ಪಾಲ್ಗೊಂಡು ಹುತ್ತದ ದರ್ಶನ ಪಡೆದರು.
ನಾಗದೇವರ ಆರಾಧಕರಾದ ಶಾಂತಪ್ಪ ಇಂದೂರ,ಬಸವರಾಜ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here