ಕಾನ್ಪುರದಲ್ಲಿ ರೈಲು ಬೋಗಿಗಳು ಪಲ್ಟಿ,15ಕ್ಕೂ ಹೆಚ್ಚು ಮಂದಿಗೆ ಗಾಯ

0
116

ಉತ್ತರ ಪ್ರದೇಶ, ಕಾನ್ಪುರಉತ್ತರಪ್ರದೇಶದ ಕಾನ್ಪುರದಲ್ಲಿರುವ ರೂಮಾ ರೈಲ್ವೆ ನಿಲ್ದಾಣದ ಸಮೀಪ ಪೂರ್ವಾ ಎಕ್ಸ್ಪ್ರೆಸ್ ರೈಲಿನ 12 ಬೋಗಿಗಳು ಹಳಿತಪ್ಪಿ ಪಲ್ಟಿಯಾಗಿದ ಘಟನೆ ರಾತ್ರಿ 1 ಗಂಟೆ ಸುಮಾರಾಗಿ ಸಂಭವಿಸಿದೆ.

ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರಿಗೆ ಸ್ಥಳಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ, ಸಮಿಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಹೌರಾ ಮತ್ತು ಹೊಸದಿಲ್ಲಿ ನಡುವೆ ಸಂಚರಿಸುತ್ತಿರುವ ಈ ರೈಲು ಅಲ್ಲಹಾಬಾದ್ (ಪ್ರಯಾಗರಾಜ್) ನಿಂದ ನವದೆಹಲಿಗೆ ಹೊರಡಿತ್ತು.  ವೇಳೆ ರಾತ್ರಿ 1ಗಂಟೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದ್ದು, ಹಲವರಿಗೆ ಗಾಯಗಳಾಗಿವೆ, ಯಾವುದೇ ಸಾವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

Contact Your\'s Advertisement; 9902492681

ಈ ಘಟನೆ ಕಾನ್ಪುರದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿ ನಡೆದಿದ್ದು, ರೈಲು ವೇಗವಾಗಿ ಚಲಿಸುವ ಸಮಯದಲ್ಲಿ. ಕಂಪ್ಲಿಂಗ್ ಮುರಿದಿದ್ದ ಚಲಿಸುತ್ತಿದ್ದ ರೈಲಿನ ಇಂಜಿನ್ ಹಾಗೂ ಮುಂದಿನ 5 ಬೋಗಿಗಳು ಮುಂದೆ ಸಾಗಿ 12 ಬೋಗಿಗಳು ಸಂಪರ್ಕ ಕಳೆದುಕೊಂಡ ಪರಿಣಾಮ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದ್ದು ನೀಖರವಾಗಿ ಕಾರಣ ತಿಳಿದುಬಂದಿಲ್ಲ.

ಅಪಘಾತದ ಮಾಹಿತಿ ಪಡೆದ ಸ್ಥಳೀಯ ಆಡಳಿತ ಮತ್ತು ರೈಲ್ವೆ ಆಡಳಿತವು ತಕ್ಷಣ ಸ್ಥಳಕ್ಕೆ ಧಾವಿಸಿದರವು. ರಕ್ಷಣಾ ಕಾರ್ಯಕ್ಕಾಗಿ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಈ ಅಪಘಾತದಲ್ಲಿ ಯಾವುದೇ ಸಾವು ಸಂಭವಿಸಲಿಲ್ಲ. 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು  ಹತ್ತಿರದ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಸಹಾಯವಾಣಿ ಸಂಖ್ಯೆ;
ಪ್ರಯಾಣಿಕರ ಬಗ್ಗೆ ವಿವರ ಮಾಹಿತಿ ಪಡೆಯಲು ಸಹಾಯವಾಗಿ ರೈಲ್ವೇ ಇಲಾಖೆ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಹೆಲ್ಪ್ಲೈನ್ ಸಂಖ್ಯೆ (033) 26402241, 26402242, 26402243, 26413660.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here