ಚಿಂಚೋಳಿ ತಾಲ್ಲೂಕಿನಲ್ಲಿ ಕಿಟನಾಶಕ ಸೇವಿಸಿ ರೈತ ಆತ್ಮಹತ್ಯೆ

0
52

ಚಿಂಚೋಳಿ: ಇಂದು ಬೆಳಿಗ್ಗೆ ತಾಲ್ಲೂಕಿನ ದೊಟೀಕೊಳ ಗ್ರಾಮದ ರೈತ ಒರ್ವ ಸಾಲ ಬಾದೆ ತಾಳಲಾರದೆ ಮನೆಯಲ್ಲಿ ಹೆಸರಿಗೆ ಬೆಳೆಗೆ ಬಳಸುವ ಕಿಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣರಾಗಿರುವ ಘಟನೆ ಸುಲೆಪೇಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪದ್ಮಣ್ಣಾ ಮಲ್ಲಪ್ಪ ಪೂಜಾರಿ (35) ಆತ್ಮಹತ್ಯೆಗೆ ಶರಣಾದ ರೈತ, 2 ಎಕರೆ ಕೃಷಿ ಜಮೀನು ಹೊಂದಿರುವ ಪದ್ಮಣ್ನಾ, ಚಿಮ್ಮನಚೊಡ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ 2 ಲಕ್ಷ ಮತ್ತು ಖಾಸಗಿ 1.5, ಒಟ್ಟು ಮೂರು ವರೆ ಲಕ್ಷ ಸಾಲ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

Contact Your\'s Advertisement; 9902492681

ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅಗಲಿದ ಅವರು, ಮಳೆ, ಬೆಳೆ ಇಲ್ಲದ ಕಾರಣ ಬೆಳೆ ನಾಟಿಕಿ ಎದ್ದಿರುವದಿಲ್ಲಾ ಕಾರಣ ಸಾಲದ ಬಾದೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣರಾಗಿದ್ದಾರೆಂದು ತಿಳಿದುಬಂದಿದೆ.

ಸರ್ಕಾರ ತಕ್ಷಣವೇ ಮೃತ ಪದ್ಮಣ್ಣಾ ಅವರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ ಮೃತ ರೈತನ ಕುಟುಂಬಕ್ಕೆ ಪರಿಹಾರ ಒದಗಿಸಿ, ರೈತನ ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಶಿಕ್ಷಣ  ಕಲ್ಪಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಶರಣಬಸಪ್ಪ ಮಮಶೇಟಿ ಅವರು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here