ಗ್ರಂಥಾಲಯಗಳು ಜನಸಾಮಾನ್ಯರಿಗೆ ವಿಶ್ವವಿದ್ಯಾಲಯಗಳಿದ್ದಂತೆ: ಬಸನಗೌಡ ಹುಣಸಗಿ

0
61

ಸುರಪುರ: ಗ್ರಂಥಾಲಯಗಳು ಜನಸಾಮಾನ್ಯರಿಗೆ ಜ್ಞಾನದ ತವನಿಧಿಯಾಗಿದ್ದು ಶ್ರೀ ಸಾಮಾನ್ಯರ ವಿಶ್ವವಿದ್ಯಾಲಯಗಳಿದ್ದಂತೆ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹಾಯಕ ಅಧಿಕಾರಿಗಳಾದ ಪಾಟೀಲ್ ಬಸನಗೌಡ ಹುಣಸಗಿ ಹೇಳಿದರು.

ಸುರಪುರ ತಾಲೂಕಿನ ಕನ್ನೆಳ್ಳಿ ಗ್ರಾಮದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಸಗರನಾಡು ಸಾರ್ವಜನಿಕ ಗ್ರಂಥಾಲಯದ ೩ನೇ ವಾರ್ಷೀಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಸರಕಾರದ ಮೂಲಕ ಗ್ರಂಥಾಲಯ ಇಲಾಖೆ ರಾಜ್ಯದ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಕೇಂದ್ರಗಳನ್ನು ಹೊಂದಿದ್ದು ಸರಕಾರದ ಸಹಕಾರವಿಲ್ಲದೆ ಖಾಸಗಿಯಾಗಿ ಸಗರನಾಡು ಸೇವಾ ಪ್ರತಿಷ್ಠಾನ ಗ್ರಾಮಿಣ ಪ್ರದೇಶದಲ್ಲಿ ಗ್ರಂಥಾಲಯ ಪ್ರಾರಂಭಿಸಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ ಇತರೆ ಸಂಘ ಸಂಸ್ಥೆಗಳಿಗೆ ಇದು ಮಾದರಿಯ ಕಾರ್ಯವಾಗಿದೆ ಸರಕಾರದ ಜೊತೆಗೆ ಸಂಘ ಸಂಸ್ಥೆಗಳು ಕೈ ಜೊಡಿಸಿದಾಗಮಾತ್ರ ಇಂತಹ ರಚನಾತ್ಮಕ ಚಟುವಟಿಕೆಗಳು ಅನುಷ್ಠಾನಕ್ಕೆ ಬರಲು ಸಾಧ್ಯಾವಾಗುತ್ತದೆ ಎಂದು ಹೆಳಿದ ಅವರು ಇಗಾಗಲೆ ಜಿಲ್ಲೆಯ ಬಹುತೆಕ ಸಾಹಿತಿಗಳಿಂದ ಹತ್ತು ಸಾವಿರಕ್ಕುಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದು ಬರುವದಿನಗಳಲ್ಲಿ ಜಿಲ್ಲೆಯ ಸಾಹಿತಿಗಳ ಸಮಗ್ರ ಸಾಹಿತ್ಯ ಪರಿಚಯಿಸುವ ಗ್ರಂಥಾಲಯವಾಗಲಿ ಎಂದು ಶುಭ ಹಾರೈಸಿದರು.

Contact Your\'s Advertisement; 9902492681

ಕೆಂಭಾವಿ ಹಿರೆಮಠದ ಪೂಜ್ಯ ಶ್ರೀ ಚನ್ನಬಸವ ಶಿವಾಚಾರ್ಯರು ಮಾತನಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗ ಪಡೆದು ಉತ್ತಮ ಉದ್ಯೋಗ ಸೃಷ್ಠಿಸಿಕೊಳ್ಳುವಲ್ಲಿ ಪಾತ್ರವಹಿಸಬೇಕು ಜೊತೆಗೆ ಇಲ್ಲಿ ದೊರೆಯುವ ಅನೇಕ ಪುಸ್ತಕಗಳನ್ನು ಅಭ್ಯಾಸಿಸಿ ಉತ್ತಮ ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅತಿಥಿಗಳಾಗಿ ಪತ್ರಕರ್ತರಾದ ರಾಜೇಶ ಪಾಟೀಲ್, ವೀರಣ್ಣ ಕಲಿಕೇರಿ, ಪ್ರಮುಖರಾದ ಶಿವಶರಣಪ್ಪ ಹೆಡಿಗಿನಾಳ, ಅಂಬ್ರೇಶ ಕುಂಬಾರ ಸೇರಿದಂತೆ ಇತರರು ಇದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ವಹಿಸಿದ್ದರು, ಶಿಕ್ಷಕಿ ಪ್ರೀತಿ ಸಂಗಡಿಗರು ಪ್ರಾರ್ಥಿಸಿದರು, ಮೌನೇಶ ಐನಾಪೂರ ನಿರೂಪಿಸಿದರು, ಬಸವರಾಜ ಚನ್ನಪಟ್ನ ಸ್ವಾಗತಿಸಿದರು, ಮಹೇಶ ಬಿಶೆಟ್ಟಿ ಪರಿಚಯಿಸಿದರು, ಸಂತೋಶ ಬಿಶೆಟ್ಟಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here