ಕಲಬುರಗಿ: ವಿದ್ಯಾನಗರದ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಪುರಾಣ ಕಾರ್ಯಕ್ರಮದಲ್ಲಿ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಜನಪದ ಹಾಡಾದ “ಒಳಿತು ಮಾಡು ಮನುಸಾ ನೀ ಇರೊದು ಮೂರು ದಿವಸಾ” ಜನಪದ ಹಾಡು ಹಾಡುವ ಮೂಲಕ “ವಿಶ್ವ ಜನಪದ” ದಿನ ಅರ್ಥಪೂರ್ಣ ವಾಗಿ ಆಚರಿಸಲಾಯಿತು.
ಪುರಾಣ ಪ್ರವಚನಕಾರರಾದ ಪೂಜ್ಯ ಶ್ರೀ ಚನ್ನಮಲ್ಲ ಸ್ವಾಮಿ, ಕಲಾವಿದರಾದ ಜಗದೀಶ್ ನಗನೂರ,ಜಗದೀಶ್ ಕಲ್ಲೂರ ಸೊಸೈಟಿ ಅದ್ಯಕ್ಷ ಮಲ್ಲಿನಾಥ ದೇಶಮುಖ,ಹಾಗೂ ಮಹಾದೇವಪ್ಪ ಪಾಟೀಲ, ನಾಗರಾಜ ಹೆಬ್ಬಾಳ, ಬಸವಂತರಾವ ಜಾಬಶೇಟ್ಟಿ,ಮಲ್ಲಿಕಾರ್ಜುನ ನಾಗಶೆಟ್ಟಿ, ಗುರುಲಿಂಗಯ್ಯ ಮಠಪತ್ತಿ, ಶಾಂತಯ್ಯಬೀದಿಮನಿ, ಶಿವಪುತ್ರಪ್ಪ ದಂಡೊತಿ, ಬಸವರಾಜ ಸ್ವಾಮಿ, ಬಸವರಾಜ ಸಜ್ಜನ, ನಾಗೆಂದ್ರಪ್ಪಾ ಪಾಟೀಲ, ವಿನೊದಕುಮಾರ ಜೇನೆವರಿ,ವಿನೊದ ಗೊರೆ, ಸುಭಾಷ್ ಮಂಠಾಳೆ, ಅಶೊಕ ಬಿರಾದಾರ, ಹಾಗೂ ವಿವಿದ ಬಡಾವಣೆಯ ನೂರಾರು ಭಕ್ತರು ಉಪಸ್ಥಿತರಿದ್ದರು.