ಸೆ. 8 ರಿಂದ 10ರವರೆಗೆ ರಾಜ್ಯ ಮಟ್ಟದ 3ನೇ ರ್ಯಾಂಕಿಂಗ್ ಸ್ಕೇಟಿಂಗ್ ಸ್ಪರ್ಧೆ

0
23

ಕಲಬುರಗಿ: ಜಿಲ್ಲಾ ಒ¯ಂಪಿಕ್ಸ್ ಅಸೋಸಿಯೇಷನ್ ಮತ್ತು ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಇದೇ ಮೊದಲ ಬಾರಿಗೆ ನಗರದಲ್ಲಿ ಸೆ. 8 ರಿಂದ 10ರವರೆಗೆ ಮೂರು ದಿನಗಳ ಕಾಲ ರಾಜ್ಯ ಮಟ್ಟದ 3ನೇ ರ್ಯಾಕಿಂಗ್ ಸ್ಕೇಟಿಂಗ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಒಲಂಪಿಕ್ಸ್ ಅಸೋಷಿಯೇಷನ್ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಮತ್ತು ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಮುಖ್ಯಸ್ಥ ರವಿ ಸಂಚಾರ ಹೇಳಿದರು.

ನಗರದ ಕಪನೂರ ಕೈಗಾರಿಕಾ ಪ್ರದೇಶದಲ್ಲಿ ಮೂರು ದಿನಗಳ ಕಾಲ ಸ್ಕೇಟಿಂಗ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಮೊದಲ ರ್ಯಾಕಿಂಗ್ ಸ್ಕೇಟಿಂಗ್ ಸ್ಪರ್ಧೆಯನ್ನು ಚಿಕ್ಕಬಳ್ಳಾಪುರದಲ್ಲಿ ನಡೆಸಲಾಯಿತು. 2ನೇ ರ್ಯಾಕಿಂಗ್ ಸ್ಕೇಟಿಂಗ್ ಸ್ಪರ್ಧೆ ಬೆಂಗಳೂರಿನಲ್ಲಿ ನಡೆಸಲಾಗಿದ್ದು, ಅಲ್ಲಿ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಸ್ಕೇಟಿಂಗ್ ಸ್ಪರ್ಧಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಅದರಲ್ಲೂ ಕಲಬುರಗಿಯಲ್ಲಿ 3ನೇ ರ್ಯಾಂಕಿಂಗ್ ಸ್ಕೇಟಿಂಗ್ ಸ್ಪರ್ಧೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.

5 ವರ್ಷದಿಂದ 7, 7 ವರ್ಷದಿಂದ 9, 9 ವರ್ಷದಿಂದ 11, 11 ವರ್ಷದಿಂದ 14 ವರ್ಷ, 14 ವರ್ಷದಿಂದ 17 ವರ್ಷದವರೆಗೆ ಮತ್ತು 17 ವರ್ಷದಿಂದ ಹೆಚ್ಚಿನ ವಯಸ್ಸಿಯನವರಿಗೆ ಸ್ಪರ್ಧೆ ಆಯೋಜಿಸಲಾಗಿದೆ. ಎಲ್ಲ ಸ್ಪರ್ಧೆಗಳಿಗೆ ಪ್ರಥಮ ಸ್ಥಾನ ಪಡೆದವರಿಗೆ 8 ಪಾಯಿಂಟ್ ನೀಡಿ ನಗದು ಬಹುಮಾನವಾಗಿ 10 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 7 ಪಾಯಿಂಟ್ ನೀಡಿ ನಗದು 7,500 ರೂ., ಮೂರನೇ ಸ್ಥಾನ ಪಡೆದವರಿಗೆ 6 ಪಾಯಿಂಟ್ ನೀಡಿ ಅವರಿಗೆ 5 ಸಾವಿರ ರೂ.ನಗದು ಬಹುಮಾನ ನೀಡಿ ಪೆÇ್ರೀತ್ಸಾಹಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 300ಕ್ಕೂ ಅಧಿಕ ಸ್ಕೇಟಿಂಗ್ ಸ್ಪರ್ಧೆಗಳಿದ್ದು, ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಕಲಬುರಗಿಯಲ್ಲಿ 3ನೇ ರ್ಯಾಕಿಂಗ್ ಸ್ಕೇಟಿಂಗ್ ಸ್ಪರ್ಧೆ ಯಶಸ್ವಿಗೊಳಿಸಿದ ಬಳಿಕ ನಾಲ್ಕನೇ ರ್ಯಾಕಿಂಗ್ ಸ್ಕೇಟಿಂಗ್ ಸ್ಪರ್ಧೆ ಮೈಸೂರಿನಲ್ಲಿ ಆಯೋಜನೆ ಮಾಡಲಾಗುವುದು ಎಂದು ವಿವರಿಸಿದರು. ವಿಕ್ರಂ ದರ್ಶನಾಪುರ, ಜಯಕುಮಾರ ಮತ್ತು ಸ್ಮತಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here