ಪ್ರಜ್ವಲ್,ಧೀರಜ್ ಸೋಲಿಸಿ ಗೆದ್ದು ಬೀಗಿದ ಬೊಬ್ರೋಬ್ ಹಾಗೂ ಸುಲ್ತಾನೋವ್
ಕಲಬುರಗಿ, ನವೆಂಬರ್ ೨೧ : ಐಟಿಎಫ್ ಕಲಬುರಗಿ ಓಪನ್ ಟೆನಿಸ್ ಪಂದ್ಯದಲದಲಿ ಪ್ರಮುಖ ಜೋಡಿ ಎನಿಸಿದ್ದ ರಷ್ಯಾದ ಬೊಗ್ಡಾನ್ ಬೊಬ್ರೊವ್ ಹಾಗೂ ಎಸ್ ಡಿ ಪ್ರಜ್ವಲ್ ದೇವ್ ನಡುವಿನ ಪಂದ್ಯ ರೋಚಕವಾಗಿತ್ತು, ತಮ್ಮ ಆಟದ ಕೌಶಲದೊಂದಿಗೆ ಬೊಬ್ರೊವ್ ಪ್ರಜ್ವಲ್ ಅವರನ್ನು ಮಣಿಸಿದರು.
ಆಟದ ಜೊತೆಗೆ ವಿಶೇಷ ಕೇಶ ವಿನ್ಯಾಸದ ಮೂಲಕವೇ ಅಭಿಮಾನಿಗಳನ್ನು ಹೊಂದಿರುವ ೨೭ ವರ್ಷದ ರಷ್ಯನ್ ಆಟಗಾರ ಎರಡನೇ ಸುತ್ತಿನ ಪಂದ್ಯದಲ್ಲಿ ೬-೨,೬-೩ ಅಂತರದಲ್ಲಿ ಪ್ರಜ್ವಲ್ ಹಿಮ್ಮಟ್ಟಿಸಿದರು ಈ ಮೂಲಕ ಕ್ವರ್ಟರ್ ಫೈನಲ್ ಪ್ರವೇಶ ಪಡೆದುಕೊಂಡರು.
ಐಟಿಎಫ್ ಕಲಬುರಗಿ ಪುರುಷರ ಓಪನ್ ಟೆನಿಸ್ ಟೂರ್ನಿಯ ೨೫,೦೦೦ ಡಾಲರ್ ಮೊತ್ತದ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಗುರುವಾರ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಭಾರತೀಯ ಎದುರಾಳಿಗೆ ಸತತ ಒಂದು ಗಂಟೆ ಹನ್ನೇರಡು ನಿಮಿಷ ಪರೀಕ್ಷೆ ಒಡ್ಡಿದರೂ, ಫಿಟ್ಸ್ ಮತ್ತು ಸ್ಟಾರ್ಟ್ಗಳಲ್ಲಿ ಶಕ್ತಿ ಪ್ರದರ್ಶಿಸಿದ ಬೊಬ್ರೋವ್ ಪ್ರಜ್ವಲ್ ಅವರಿಗೆ ಸೋಲಿನ ರುಚಿ ತೋರಿಸಿದರು.
ಬೊಬ್ರೋವ್ ಎರಡನೇ ಗೇಮ್‌ನಲ್ಲಿ ವಿರಾಮದೊಂದಿಗೆ ೩-೦ ಮುನ್ನಡೆ ಆರಂಭಿಸಿದರು. ಭಾರತೀಯ ಆಟಗಾರ ೨೮ ವರ್ಷದ ಪ್ರಜ್ವಲ್ ಲೋಪಗಳಲ್ಲೇ ಸವಾಲು ಹಾಕಿ ಹೆಚ್ಚಿನ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.
ಕುತೂಹಲದ ಪಂದ್ಯದಲ್ಲಿ ಎಚ್ಚೆತ್ತ ಪ್ರಜ್ವಲ್ ಗ್ರೌಂಡ್ ಸ್ಟ್ರೋಕ್ ಮೂಲಕ ಲಯಕ್ಕೆ ಮರಳಿದರು, ನಾಲ್ಕನೇ ಮತ್ತು ಐದನೇ ಗೇಮ್ ನಲ್ಲಿ ಸರ್ವ್ ಮೂಲಕ ರಷ್ಯಾದ ಆಟಗಾರನನ್ನು ಸೋಲಿನ ಬಳಿ ಕರೆದೊಯ್ದರು.
ಮೈಸೂರಿನ ಪ್ರಜ್ವಲ್ ತಮ್ಮ ಲಯವನ್ನು ಮುನ್ನಡೆಸಲು ವಿಫಲರಾದಾಗ ಬೊಬ್ರೋವ್ ಆರು ಮತ್ತು ಒಂಬತ್ತನೇ ಗೇಮ್ ನಲ್ಲಿ ಪ್ರಜ್ವಲ್ ಅವರನ್ನು ಮಣಿಸಿ ಆರಂಭಿಕಸೆಟ್ ಪೂರ್ಣಗೊಳಿಸಿ ಗೆಲುವಿಗೆ ಹತ್ತಿರವಾದರು.
ಮೊದಲ ಸೆಟ್‌ನಲ್ಲಿ ರಷ್ಯಾದ ಬೊಬ್ರೊವ್ ನಾಲ್ಕನೇ ಗೇಮ್ ನಲ್ಲಿ ವಿರಾಮದೊಂದಿಗೆ ೩-೧ ಅಂಕಗಳ ಮುನ್ನಡೆ ಸಾಧಿಸಿದರು. ಪ್ರಜ್ವಲ್ ಎರಡು ದೊಡ್ಡ ಫೋರ್‌ಹ್ಯಾಂಡ್ ವಿನ್ನರ್‌ಗಳೊಂದಿಗೆ ರೈಟ್ ಬ್ಯಾಕ್ ಅನ್ನು ಮುರಿದರು ಮತ್ತು ಬೊಬ್ರೋವ್ ತಮ್ಮ ಸಿಡೊತದ ಬ್ಯಾಕ್ ಹ್ಯಾಂಡ್ ಲಾಂಗ್ ಹಿಟ್ ಮೆಚ್ಚುಗೆ ಮೂಡಿಸಿತು.
ರಷ್ಯಾದ ಆಟಗಾರನ ರಾಕೆಟ್ ಆರ್ಭಟಕ್ಕೆ ಸವಲಾಒಡ್ಡಲು ಪ್ರಜ್ವಲ್ ವಿಫಲರಾದಾಗ ಆರನೇ ಗೇಮ್‌ನಲ್ಲಿ ಬೊಬ್ರೋವ್ ಲಾಭ ಪಡೆದರು ಮುಂದುವರೆದು ಒಂಬತ್ತನೇ ಗೇಮ್‌ನಲ್ಲಿ ಏಸ್‌ನೊಂದಿಗೆ ಪಂದ್ಯವನ್ನು ಮುಕ್ತಾಯಗೊಳಿಸಿದರು. ಬೊಬ್ರೋವ್ ಅವರು ಮುಂದೆ ಐದನೇ ಶ್ರೇಯಾಂಕದ ಆರ್ಯನ್ ಶಾ ಅವರನ್ನು ಎದುರಿಸಲಿದ್ದಾರೆ.
ಗೆಲುವಿನ ಹಾದಿಗೆ ಹತ್ತಿರವಾದ ಸುಲ್ತಾನೋವ್: ಅಗ್ರ ಶ್ರೇಯಾಂಕದ ಉಜ್ಬೇಕಿಸ್ಥಾನ ಪ್ರತಿಭೆ ಖುಮೋಯುನ್ ಸುಲ್ತಾನೋವ್ ಪ್ರತಿಸ್ಪರ್ಧಿ ಭಾರತೀಯ ಆಟಗಾರ ಧೀರಜ್ ಕೊಡಂಚಾ ಶ್ರೀನಿವಾಸನ್ ವಿರುದ್ಧ ಭಾರೀ ಹೋರಾಟ ನಡೆಸಬೇಕಾಯಿತು, ಕೆಲ ಆತಂಕದ ಕ್ಷಣಗಳನ್ನು ದಾಟಬೇಕಾಯಿತು. ಕ್ವಾಲಿಫೈಯರ್ ಸುಲ್ತಾನೋವ್ ಅವರನ್ನು ಶಾಟ್‌ಗಾಗಿ ಶಾಟ್‌ಗೆ ಹೊಂದಿಸುವ ಮೂಲಕ ಆಚ್ಚರಿ ಮೂಡಿಸಿದರು ಜೊತೆಗೆ ಆರಂಭಿಕ ಸೆಟ್‌ನಲ್ಲಿ ೪-೩ ಮುನ್ನಡೆ ಸಾಧಿಸಿದರು.
೨೫ ವರ್ಷದ ಧೀರಜ್ ತಮ್ಮ ಆಟದಲ್ಲಿ ನಿರ್ಧಿಷ್ಟ ವೇಗ ಕಾಪಾಡಿಕೊಳ್ಳಲು ವಿಫಲರಾದರು, ಧೀರಜ್ ಅಸಹಾಯಕತೆ ಅರಿತ ಸುಲ್ತಾನೋವ್ ವೇಗವಾಗಿ ಮೊದಲಸೆಟ್ ಅನ್ನು ಯಶಸ್ವಿಗೊಳಿಸಿ ದಾಪುಗಾಲಿರಿಸಿದರು. ಉಜ್ಬೇಕ್ ಆಟಗಾರನ ಎದುರು ಸುಸ್ತಾದ ಧೀರಜ್ ಏದುಸಿರು ಬಿಡುತ್ತಿದ್ದಾದ ಎರಡನೇ ಸೆಟ್ ನಲ್ಲಿ ಕೊರ್ಟ್ ಗೆ ವೈದ್ಯರನ್ನು ಕರೆಯಬೇಕಾಯಿತು. ಆದಾಗ್ಯೂ ಮೈಕೊಡವಿ ಆಡಿದ ಧೀರಜ್ ವಿರುದ್ಧ ಸುಲ್ತಾನೋವ್ ಎರಡನೇ ಸೆಟ್ ಅನ್ನು ೬-೦ ಅಂತರದಲ್ಲಿ ಕೈವಶ ಮಾಡಿಕೊಂಡರು.
ಭಾರತದ ನಾಲ್ಕನೇ ಶ್ರೇಯಾಂಕದ ಕರಣ್ ಸಿಂಗ್, ದೇವ್ ಜಾವಿಯಾ, ಹುಟ್ಟುಹಬ್ಬದ ಹುಡುಗ ಆರ್ಯನ್ ಶಾ ಮತ್ತು ಸಿದ್ಧಾರ್ಥ್ ರಾವತ್ ಕೊನೆಯ-ಎಂಟರ ಹಂತಕ್ಕೆ ಪ್ರವೇಶಿಸುವಲ್ಲಿ ಪ್ರಮುಖರಾದರು.
ಫಲಿತಾಂಶಗಳು (ಉಲ್ಲೇಖಿಸದ ಹೊರತು ಭಾರತೀಯರು):ಸಿಂಗಲ್ಸ್ ಸುತ್ತು ೨: ೬-ನಿಕ್ ಚಾಪೆಲ್ (ಯುಎಸ್ಎ) ಎದುರಾಳಿ ಆಂಥೋನಿ ಸುಸಾಂಟೊ (ಇಂಡೋನೇಷ್ಯಾ) ಅವರನ್ನು ೬-೩, ೬-೨ ಅಂತರದಲ್ಲಿ ಮಣಿಸಿದರು. ೮-ಮ್ಯಾಕ್ಸಿಮ್ ಝುಕೋವ್ (ರಷ್ಯಾ) ಪ್ರತಿಸ್ಪರ್ಧಿ ರಿಷಭ್ ಅಗರ್ವಾಲ್ ಅವರನ್ನ ೬-೨, ೬-೧ ಅಂತರದಲ್ಲಿ ಸೋಲಿನ ಉಡುಗೊರೆ ನೀಡಿದರು. ೭-ದೇವ್ ಜಾವಿಯಾ ಅವರು ಎಂ ರಿಫ್ಕಿ ಫಿಟ್ರಿಯಾಡಿ (ಇಂಡೋನೇಷ್ಯಾ) ಅವರನ್ನು ೫-೭, ೬-೨, ೬-೨ ಅಂತರದಲ್ಲಿ ಮಣಿಸಿದರು. ೨-ಬೊಗ್ಡಾನ್ ಬೊಬ್ರೊವ್ (ರಷ್ಯಾ) ಮೈಸೂರಿನ ಎಸ್‌ಡಿ ಪ್ರಜ್ವಲ್ ದೇವ್ ಅವರನ್ನು ೬-೨, ೬-೩ ಅಂತರದಲ್ಲಿ ಸೋಲಿಸಿದರು. ೪-ಕರಣ್ ಸಿಂಗ್ ಅವರು ಎದುರಾಳಿ ನಿತಿನ್ ಕುಮಾರ್ ಸಿನ್ಹಾ ಅವರನ್ನು ೬-೪, ೬-೩ ಅಂತರದಲ್ಲಿ ಸೋಲಿಸಿದರು. ಸಿದ್ಧಾರ್ಥ್ ರಾವತ್ ನೇರ ಎದುರಾಳಿ ಅಧಿತ್ಯ ಗಣೇಶನ್ (ಯುಎಸ್ಎ) ವಿರುದ್ಧ ೬-೩, ೭-೬ ( ೭-೦) ಅಂತರದ ಗೆಲುವು ಸಾಧಿಸಿದರು.
೧-ಖುಮೋಯುನ್ ಸುಲ್ತಾನೋವ್ (ಉಜ್ಬೇಕಿಸ್ಥಾನ) ಬೆಂಗಳೂರಿನ ಧೀರಜ್ ಕೊಡಂಚ ಶ್ರೀನಿವಾಸನ್ ವಿರುದ್ಧ ೬-೪, ೬-೦ ಅಂತರದ ಜಯ ದಾಖಲಿಸಿದರು, ೫-ಆರ್ಯನ್ ಶಾ ಅವರು ಮನೀಶ್ ಸುರೇಶ್‌ಕುಮಾರ್ ವಿರುದ್ಧ ೬-೩, ೬-೩ ಅಂತರದ ಗೆಲುವು ಸಾಧಿಸಿ ಮುನ್ನಡೆದರು.
ಮೊದಲ ಸುತ್ತಿನಲ್ಲಿ ಆರ್ಯನ್ ಷಾ ಅವರು ಎದುರಾಳಿ ಆಟಗಾರ ಕಬೀರ್ ಹನ್ಸ್ ವಿರುದ್ಧ ೭-೫, ೨-೬, ೬-೨ ಅಂತರದಲ್ಲಿ ಜಯ ಪಡದರು.
ಡಬಲ್ಸ್ (ಕ್ವಾರ್ಟರ್ಸ್): ಅಮೆರಿಕದ ನಿಕ್ ಚಾಪೆಲ್ ಹಾಗೂ ನಿತಿನ್ ಕುಮಾರ್ ಸಿನ್ಹಾ ಜೋಡಿ ಯಶ್ ಚೌರಾಸಿಯಾ ಹಾಗೂ ಕರಣ್ ಸಿಂಗ್ ಅವರನ್ನು ೬-೨, ೭-೫ ಅಂತರದಲ್ಲಿ ಸೋಲಿಸಿದರು. ಸಿದ್ದಾಂತ್ ಬಂಥಿಯಾ ಹಾಗೂ ವಿಷ್ಣುವರ್ಧನ್ ಜೋಡಿ ಇಂಡೋನೇಷ್ಯಾದ ಎಂ ರಿಫ್ಕಿ ಪಿಟ್ರಾಡಿಯೊಹಾಗೂ ರಿಷಿ ರೆಡ್ಡಿ ವಿರುದ್ಧ ೪-೬, ೬-೨ ಮತ್ತು ೧೦-೭ ಅಂತರದಲ್ಲಿ ಗೆದ್ದು ಬೀಗಿದರು. ೧- ಎಗೋರ್ ಆಗಾಪೋನೋವ್ ಹಾಗೂ ರಷ್ಯಾದ ಬೊಗ್ಡಾನ್ ಬೊಬ್ರೋವ್ ಜೋಡಿ ಅಮೆರಿಕ ಪ್ರತಿನಿಧಿಸಿದ ಆಧಿತ್ಯ ಗಣೇಶನ್ ಹಾಗೂ ಆರ್ಯನ್ ಷಾ ಜೋಡಿಯನ್ನು ೧-೬, ೭-೬ (೮-೬), ೧೦-೭ ಅಂತರದ ಮೂಲಕ ಮಣಿಸಿದರು. ರಿಷಬ್ ಅಗರ್ವಾಲ್ ಹಾಗೂ ಕಬೀರ್ ಹನ್ಸ್ ಜೋಡಿ ೪- ಮನೀಶ್ ಸುರೇಶ್ ಕುಮಾರ್ ಹಾಗೂ ಪರೀಕ್ಷಿತ್ ಸೋಮಾನಿ ಜೋಡಿಯನ್ನು ೭-೫, ೬-೩ ಅಂಕಗಳಲ್ಲಿ ಸೋಲಿಸಿ ವಿಜಯಮಾಲೆ ಧರಿಸಿದರು.