ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಶಿಕ್ಷಕರ ದಿನಾಚರಣೆ

0
21

ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಎಂ.ಬಿ.ಎ ಮುಗಿಸಿದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರªಯಿತ ಅಂಗವಾಗಿ ಡಾ:ಸರ್ವೋಪಲ್ಲಿ ರಾಧಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಶರಣಬಸಪ್ಪ ಸಾಲಿಯವರು ವಿದ್ಯಾರ್ಥಿಗಳನ್ನು ಉದ್ದೇಸಿಸಿ ಮಾತನಾಡುತ್ತ, ಎಂ.ಬಿ.ಎ ಮುಗಿಸಿದ ವಿದ್ಯಾರ್ಥಿಗಳಿಗೆ ಶುಭ ಕೋರಿದರು, ಸಣ್ಣ ವಯಸ್ಸಿನಲ್ಲೇ ವ್ಯವಹಾರದ ಜ್ಞಾನ ಹೆಚ್ಚಿಸಿಕೊಂಡು ವ್ಯಾಪಾರ ಮಾಡುವದರ ಜೊತೆಗೆ ಉದ್ಯಮಶಿಲತೆಯನ್ನು ಅಳವಡಿಸಿಕೊಂಡು ಉದ್ಯಮಶೀಲಾರಿ ಎಂದು ಕರೆಕೊಟ್ಟರು ಜೊತೆಗೆ ಮಾನವೀಯ ಗುಣಗಳು ಅತೀ ಅವಶ್ಯಕ ಆದಕಾರಣ ವಿದ್ಯಾರ್ಥಿಗಳು ಒಳ್ಳೆಯ ಮಾನವೀಯ ಗುಣಗಳ ಜೊತೆಗೆ ಗುಣಮಟ್ಟದ ಜೀವನವನ್ನ ಕಟ್ಟಿಕೊಳ್ಳಿ ಜೊತೆಗೆ ಹೆತ್ತವರ, ಸಮಾಜದ ದೃಷ್ಟಿಯಲ್ಲಿ ಒಳ್ಳೆಯ ನಾಗರೀಕರಾಗಲು ಪ್ರೆರೇಪಿಸಿದರು.

Contact Your\'s Advertisement; 9902492681

ಎಂ.ಬಿ.ಎ ವಿಭಾಗದ ಮುಖ್ಯಸ್ಥರಾದ ಪ್ರೊ.ಶಿವನಗೌಡ ಪಾಟೀಲರವರು ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಶುಭಕೋರುತ್ತಾ ಈಗಿನ ಯುಗದಲ್ಲಿ ಅವಕಾಶಗಳು ಜ್ಞಾನವಿರುವ ವಿದ್ಯಾರ್ಥಿಗಳತ್ತ ಹೂಡಿಕಿಕೊಂಡು ಬರುತ್ತೇವೆ ಮತ್ತು ತುಂಬಾ ಅವಕಾಶಗಳು ಲಬ್ಬವಿವೇ ಅದರ ಉಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿದರು ಜೊತೆಗೆ ಶರಬಸವೇಶ್ವರ ಸಂಸ್ಥೆಯ ಮತ್ತು ನಿಷ್ಠಿ ಮನೆನತನದವರ ಅಪಾರ ಶಿಕ್ಷಣ ಕೊಡುಗೆಗಳನ್ನು ಕೊಂಡಾಡಿದರು.

ಎಂ.ಬಿ.ಎ ಮುಗಿಸಿದ ವಿದ್ಯಾರ್ಥಿಗಳು ತಮ್ಮ ಸಿಹಿ ವಿಚಾರಗಳು ಹಾಗೂ ಸಂಸ್ಥೆಯ ಅಪಾರ ಕೊಡುಗೆಗಳನ್ನು ಹಂಚಿಕೊಂಡರು ಮತ್ತು ಜೂನಿಯರ್ ವಿದ್ಯಾರ್ಥಿಗಳಿಗೆ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ಡಾ.ಅಶೋಕ ಪಾಟೀಲ ಪರೀಕ್ಷಾ ವಿಭಾಗದ ಮುಖ್ಯಸ್ಥರು ಹಾಗೂ ಪ್ರೊ. ಶರಣಾಗೌಡ ಪಾಟೀಲ ಶೈಕ್ಷಣಿಕ ವಿಭಾಗದ ಮುಖ್ಯಸ್ಥರು ಮತ್ತು ಇತರ ವಿಭಾಗದ ಮುಖ್ಯಸ್ಥರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದರು. ಕಾರ್ಯಕ್ರಮವನ್ನು ವೈಷ್ಣವಿ, ನಿಂಗಯ್ಯ, ದಿವಾಕರ, ಪದ್ಮಾವತಿ, ವಿನುತಾ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here