ಕಲಬುರಗಿ: ಸೆ.17 ರಂದು ನಡೆಯುವ 75ನೇ ವರ್ಷದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅದ್ದೂರಿಯಾಗಿ ಆಚರಣೆವಾಗಬೇಕು. ಈ ಭಾಗದಲ್ಲಿರುವ ಐತಿಹಾಸಿಕ ಕೋಟೆಗಳಿಗೆ ದೀಪಾಲಂಕಾರಗೊಳ್ಳಬೇಕು. ಅಲ್ಲದೇ ಕಲಬುರಗಿ ನಗರದಲ್ಲಿ ಹಬ್ಬದ ವಾತಾವಾರಣ ಸೃಷ್ಟಿಸಬೇಕು ಎಂದು ಒತ್ತಾಯಿಸಿ ಸೆ. 11ರಂದು ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ನಿಯೋಗವು ಡಿಸಿ ಹಾಗೂ ಕೆಕೆಆರ್‍ಡಿಬಿ ಅಧ್ಯಕ್ಷರಿಗೆ ಭೇಟಿ ನೀಡಿ ಚರ್ಚಿಸಲಾಗುವುದು ಎಂದು ಒಕ್ಕೂಟದ ಸಂಚಾಲಕ ಮಂಜುನಾಥ ನಾಲವಾರಕರ್ ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ 75ನೇ ವರ್ಷದ ಕಲ್ಯಾಣ ಕರ್ನಾಟಕ ಉತ್ಸವು ಆಚರಣೆ ಮಾಡುತ್ತಿದ್ದು, ಅಲ್ಲದೇ ಕಲ್ಯಾಣ ಕರ್ನಾಟಕ ಭಾಗವು ಸಂವಿಧಾನ 371(ಜೆ) ತಿದ್ದುಪಡೆಗೊಂಡು 10 ವರ್ಷದ ಸಂಭ್ರಮ ಆಚರಣೆ ಆಯೋಜಿಸುತ್ತಿದ್ದು ಒಕ್ಕೂಟ ಸ್ವಾಗತಿಸುತ್ತದೆ. ಈ ಉತ್ಸವಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಆಹ್ವಾನಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಇತಿಹಾಸ ಸಮಿತಿ ರಚಿಸಿ ಈ ಭಾಗದಲ್ಲಿರುವ ತಜ್ಞರು, ಹಿರಿಯ ಪತ್ರಕರ್ತರು, ಸಾಹಿತಿಗಳು, ಉಪನ್ಯಾಸಕರ ಒಳಗೊಂಡತೆ ಸಮಿತಿಯನ್ನು ರಚಿಸಿ 1 ವರ್ಷದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಇತಿಹಾಸವನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿ ಮುಂದಿನ ಪೀಳಿಗೆಗೆ ನಮ್ಮ ಭಾಗದ ಇತಿಹಾಸ ಪಠ್ಯ ಪುಸ್ತಕ ಮುದ್ರಣಕ್ಕೆ ಮುಂದಾಗಬೇಕು. ನಗರದ ಪಟೇಲ್ ವೃತ್ತವನ್ನು ಅಭಿವೃದ್ಧಿಗಾಗಿ ಕಳೆದ ಕೆಕೆಆರ್‍ಡಿಬಿಯಿಂದ ಈಗಾಗಲೇ ಡಾ. ಬಿ.ಆರ್.ಅಂಬೇಡ್ಕರ್, ವಚನಕಾರ ಬಸವಣ್ಣ, ಡಾ. ಬಾಬೂ ಜಗಜೀವನರಾಂ ಪ್ರತಿಮೆ ಸುತ್ತಮುತ್ತಲು ಅಭಿವೃದ್ಧಿಗೆ ಮಂಡಳಿಯಿಂದ ಹಣ ಬಿಡುಗಡೆ ಮಾಡಲಾಗಿದ್ದು, ಈಗಲೇ ಅಭಿವೃದ್ಧಿ ಕಾರ್ಯಚಟುವಟಿಕೆ ಪ್ರಗತಿಯಲ್ಲಿದ್ದು, ಆದರೆ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತವು ಅಭಿವೃದ್ಧಿಯಾಗಬೇಕು. ಕಲ್ಯಾಣ ಕರ್ನಾಟಕ ಉತ್ಸವದ ಬಗ್ಗೆ ಶಾಲಾ ಕಾಲೇಜಿನಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕು ಎಂದು ಒತ್ತಾಯಿಸಿದರು.
ಸಚಿನ ಫರಹತಾಬಾದ್, ಮನೋಹ ಬೀರನೂರ, ಶರಣು ಹೊಸಮನಿ, ನಾಗರಾಜ ಸ್ವಾದಿ, ವಿ.ಎಚ್.ವಾಲಿಕಾರ್, ಸಿದ್ದು ಜಮಾದಾರ, ಮುತ್ತಣ್ಣ, ಪ್ರಲ್ಹಾದ್ ಹಡಗಿಲಕರ್, ಸಂತೋಷ ಚೌಧರಿ, ಆನಂದ ತೆಗನೂರ ಇತರರಿದ್ದರು.