ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಕುಲಕರ್ಣಿ ಟಾಂಗ್

0
26

ಕಲಬುರಗಿ: ಒಬ್ಬರ ಯೋಗ್ಯತೆ ಬಗ್ಗೆ ಮಾತನಾಡುವ ಮೊದಲು ತಮ್ಮ ಯೋಗ್ಯತೆ ತಿಳಿದುಕೊಳ್ಳಬೇಕು ಎಂದು ಶ್ರೀರಾಮ ಸೇನಾ ರಾಜ್ಯಧ್ಯಕ್ಷ ಗಂಗಾಧರ ಕುಲಕರ್ಣಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಗೆ ಟಾಂಗ್ ನೀಡಿದರು.

ಆಂದೋಲ ಮಠದ ಶ್ರೀಸಿದ್ಧಲಿಂಗ ಸ್ವಾಮಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಮೊದಲು ತಮ್ಮ ಯೋಗ್ಯತೆ ಬಗ್ಗೆ ತಿಳಿದುಕೊಳ್ಳಬೇಕು. ಆಂದೋಲ ಮಠದ ಪರಂಪರೆಯ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ ಖರ್ಗೆ ಅವರಿಗೆ ಈ ಹೇಳಿಕೆ ಶೋಭೆ ತರುವಂತಹದಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

Contact Your\'s Advertisement; 9902492681

ಒಂದು ಜವಾಬ್ದಾರಿಯುತ ಹುದ್ದೆಯಲ್ಲಿ ಇರುವ ಪ್ರಿಯಾಂಕ್ ಖರ್ಗೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಒದ್ದು ಒಳಗೆ ಹಾಕಿ ಎಂದು ಹೇಳುವ ಸಚಿವರು ಭ್ರμÁ್ಟಚಾರಿಗಳನ್ನು ಯಾಕೆ ಒಳಗೆ ಹಾಕಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಶ್ರೀರಾಮ ಸೇನಾ ಖಂಡಿಸುತ್ತದೆ. ಸ್ಟಾಲಿನ್ ಕ್ಷಮೆ ಯಾಚಿಸುವವರೆಗೂ ಹೋರಾಟ ನಿಲ್ಲವುದಿಲ್ಲ. ಸನಾತನ ಧರ್ಮ ವೈರಸ್ ಆದರೆ, ಸ್ಟಾಲಿನ್  ಅವರ ತಂದೆ ತಾಯಿ ಹಿಂದೂ ದೇವಸ್ಥಾನಗಳಿಗೆ ಹೋಗಿ ಪೂಜಿಸುವುತ್ತಾರೆ. ಹಾಗಾದರೆ ಸ್ಟಾಲಿನ್ ದೃಷ್ಟಿಯಲ್ಲಿ ಅವರ ತಂz Éತಾಯಿ ವೈರಸ್ ಅಲ್ಲವೇ ಎಂದು ಸವಾಲು ಹಾಕಿದರು.

ತಮಿಳುನಾಡಿನಲ್ಲಿ 3625 ಹಿಂದೂ ಧರ್ಮದ ದೇವಸ್ಥಾನಗಳಿವೆ. 4 ಲಕ್ಷ ಎಕರೆ ದೇವಸ್ಥಾನಗಳ ಹೆಸರಿನಲ್ಲಿ ಜಮೀನು ಇದೆ. ತಮಿಳುನಾಡು ಸರಕಾರದ ಲಾಂಛನವು ಹಿಂದೂ ಧರ್ಮದ ಗೋಪುರ ಇದೆ ಸನಾತನ ಧರ್ಮದ ದೇವಸ್ಥಾನದ ಲಾಭ ಪಡೆಯುವ  ತಮಿಳುನಾಡು ಸರಕಾರದ ಸಚಿವ ಸ್ಟಾಲಿನ್ ಈ ರೀತಿಯಲ್ಲಿ ಅವಹೇಳನ ಹೇಳಿಕೆ ನೀಡಿರುವುದು ಮೂರ್ಖತನದ ಪರಮಾವಧಿ ಎಂದು ಟೀಕಿಸಿದರು.

ಮಹೇಶ್ ಗೊಬ್ಬುರ,  ವಿಜಯಕುಮಾರ್ ಪಾಟೀಲ,  ಮಹೇಶ ಯಾದವ, ಅಂಬಾರಾಯ ಇತರರಿದ್ದರು.

ಆಂದೋಲದ ಸಿದ್ದಲಿಂಗ ಸ್ವಾಮೀಜಿ ಅವರು ಶ್ರೀರಾಮ ಸೇನಾ ರಾಜ್ಯಾಧ್ಯಕ್ಷರಾಗಿ ಉತ್ತುಮ ಕಾರ್ಯ ನಿರ್ವಹಿಸಿದ್ದಕ್ಕೆ ಈಗ ರಾಷ್ಟ್ರೀಯ ಗೌರವಾಧ್ಯಕ್ಷನ್ನಾಗಿ ಅವರನ್ನು ನೇಮಕ ಮಾಡಲಾಗಿದೆ. ಅವರ ಮಾರ್ಗದರ್ಶನದಲ್ಲಿ ರಾಜ್ಯ ಘಟಕವು ಮುಂದು ವರಿಯಲಿದೆ. – ಗಂಗಾಧರ ಕುಲಕರ್ಣಿ, ರಾಜ್ಯಾಧ್ಯಕ್ಷ, ಶ್ರೀರಾಮ ಸೇನೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here