ನೀರು ಸರಬರಾಜು ಮತ್ತು ಒಳಚರಂಡಿ ಹೊರ ಗುತ್ತಿಗೆ ನೌಕರರ ಸಂಘದಿಂದ ಸಚಿವರಿಗೆ ಮನವಿ

0
22

ಕಲಬುರಗಿ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೊರಗುತ್ತಿಗೆ ನೌಕರರು/ಸಿಬ್ಬಂದಿ ಪಾಲಿಕೆ ಅಥವಾ ಜಲ ಮಂಡಳಿಯಲ್ಲಿ ಉಳಸಿಕೊಳ್ಳಬೇಕು ಎಂದು ನೀರು ಸರಬರಾಜು ಮತ್ತು ಒಳಚರಂಡಿ ಹೊರ ಗುತ್ತಿಗೆ ನೌಕರರ ಸಂಘ ಸಚಿವರಿಗೆ ಮನವಿ ಸಲ್ಲಿಸಿತು.

ನಗರದ ಆಗಮಿಸಿ ಸಚಿವ ಬೈರತಿ ಸುರೇಶಗೆ ಮನವಿ ಸಲ್ಲಿಸಿದ ಸಂಘದ ಸದಸ್ಯರು, ಸುಮಾರು 10-15 ವರ್ಷಗಳಿಂದ ನೌಕರರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

Contact Your\'s Advertisement; 9902492681

ಆದರೀಗ ನೌಕರನ್ನು ಎಲ್ ಆಂಡ್ ಟಿ ಕಂಪನಿಗೆ ಹಸ್ತಾಂತರಿಸಬಾರದು. ನೌಕರರಿಗೆ ನೇರ ಪಾವತಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು. ಪ್ರಸ್ತುತ 2 ವರ್ಷದಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ನೀರು ಸರಬರಾಜು ನಿರ್ವಹಣೆ ಜವಾಬ್ದಾರಿಯನ್ನು ಎಲ್ ಆಂಡ್ ಟಿ ಕಂಪನಿಗೆ ನೀಡುವ ವಹಿಸಿಕೊಡುವ ಬಗ್ಗೆ ಸರಕಾರದ ಆದೇಶವಾಗಿದೆ. ಇದರಿಂದ ನೌಕರರಿಗೆ ಅನ್ಯಾಯ ಆಗುತ್ತದೆ ಎಂದು ಹೇಳಿದರು.

ನೀರು ಸರಬರಾಜು ಹೊರಗುತ್ತಿಗೆ ನೌಕರರ ವೇತನವು ಸ್ಥಳೀಯ ಸಂಪನ್ಮೂಲವಾದ ನೀರಿನ ಕರವಸೂಲ ಮೂಲಕ ಸಂಗ್ರಹಿಸಿದ ಹಣದಿಂದ ವೇತನ ನೀಡುತ್ತಿದ್ದು, ಇದರಿಂದ ಸರಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ. ಮಧ್ಯವರ್ತಿ ಗುತ್ತೇದಾರರಿಗೆ ನೀಡುವ ಶೇ.18 ಕಮಿಷನ ಸರಕಾರಕ್ಕೆ ಉಳಿತಾಯವಾಗುತ್ತದೆ. ಆದ್ದರಿಂದ ನೇರವಾಗಿ ಮಹಾನಗರ ಪಾಲಿಕೆ ಅಥವಾ ಮಂಡಳಿಯಿಂದ ವೇತನ ನೀಡಬಹುದಾಗಿದೆ. ನೀರು ಸರಬರಾಜು ನೌಕರರನ್ನು ಪಾಲಿಕೆ ಅಥವಾ ಜಲ ಮಂಡಳಿಯಲ್ಲಿ ಉಳಿಸಿಕೊಂಡು ನೇರ ಪಾವತಿ ಸೇವಾ ಭದ್ರತೆ ಒದಗಿಸಬೇಕು. ನೌಕರರ ಮೇಲೆ ಹೂಡಿರುವ ಪೆÇಲೀಸ್ ದೂರನ್ನು ವಾಪಸ್ ಪಡೆಯಲು ಕ್ರಮಕೈಗೊಳ್ಳಬೇಕು.

ಪ್ರಧಾನ ಕಾರ್ಯದರ್ಶಿ ನಾಗರಾಜ ಗೋಗಿ, ಉಪಾಧ್ಯಕ್ಷ ಥಾವರು ರಾಠೋಡ, ಖಜಾಂಚಿ ನಾರಾಯಣ ರಂಗದಾಳ, ಗೌರವ ಅಧ್ಯಕ್ಷ ಸುನೀಲ್ ಮಾರುತಿ ಮಾನಪಡೆ, ಅಶೋಕ ಪಂಚಾಳ, ಸಮೀರ್ ಪಾಪ್, ಅಬ್ದುಲ್ ರಶೀದ್, ರಂಜಿತ್ ಸಿಂದೆ, ಲತಾಮಂಗೇಷ್ಕರ್, ಶೋಭಾ, ಜ್ಯೋತಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here