ಕರಣ್ ಸುಬೇದಾರ್ ಅವರಿಂದ ಒತ್ತಡ ರಹಿತ ಮನಸ್ಸು ರೋಗ ರಹಿತ ದೇಹ ಕಾರ್ಯಾಗಾರ

0
15

ಕಲಬುರಗಿ: ಮಾನಸಿಕ ಒತ್ತಡದಿಂದಾಗಿ ರೋಗಗಳು ದೇಹಕ್ಕೆ ಬಾಧಿಸುತ್ತವೆ. ಸುಬೇದಾರ್ ಕೇರ್ ಆಸ್ಪತ್ರೆ ಪೊಲೀಸ್ ಸಿಬ್ಬಂದಿಗಳ ಆರೋಗ್ಯದ ಹಿತ ಕಾಪಾಡುವ ದೃಷ್ಟಿಯಿಂದ ಒತ್ತಡ ರಹಿತ ಮನಸ್ಸು ರೋಗ ರಹಿತ ದೇಹ ವೈಜ್ಞಾನಿಕ ಹಾಗೂ ಅನುಭವಾತ್ಮಕ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಸುಬೇದಾರ್ ಕೇರ್ ಆಸ್ಪತ್ರೆಯ ನಿರ್ದೇಶಕ ಕರಣ್ ಸುಬೇದಾರ್ ಹೇಳಿದರು.

ಕಲಬುರಗಿ ನಗರ ಪೊಲೀಸ್ ಇಲಾಖೆ ಮತ್ತು ಸುಬೇದಾರ್ ಕೇರ್ ಆಸ್ಪತ್ರೆ ಸಹಯೋಗದಲ್ಲಿ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾ ಭವನದಲ್ಲಿ ಇಂದು ಮದ್ಯಾಹ್ನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಆಯೋಜಿಸಿದ್ದ ಒತ್ತಡ ರಹಿತ ಮನಸ್ಸು ರೋಗ ರಹಿತ ದೇಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಬೇದಾರ್ ಕೇರ್ ಆಸ್ಪತ್ರೆಯ ನಿರ್ದೇಶಕ ಕರಣ್ ಸುಬೇದಾರ್, ಮಾನಸಿಕ ಆರೋಗ್ಯ ಮನಸ್ಸಿನ ಒತ್ತಡ ನಿರ್ವಹಣೆ ಕೌಶಲ್ಯ ಹಾಗೂ ವೈಜ್ಞಾನಿಕ ತಿಳುವಳಿಕೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಅಗತ್ಯವಿದೆ. ಪೊಲೀಸ್ ಸಿಬ್ಬಂದಿಗಳು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದರೆ ಸಮಾಜದ ಹಿತ ಕಾಪಾಡಲು ಹೆಚ್ಚು ಶಕ್ತಿ ಸಿಗಲಿದೆ ಎಂದರು.

Contact Your\'s Advertisement; 9902492681

ನಂತರ ಕಾರ್ಯಾಗಾರ ನಡೆಸಿಕೊಟ್ಟ ಬೆಂಗಳೂರಿನ ಮನೋತಜ್ಞ ಹ್ಯಾಪಿನೆಸ್ ಇಂಜಿನಿಯರ್ ಭುಜಬಲಿ ಬೋಗಾರ್ ಮಾತನಾಡಿ, ವೃತ್ತಿಯಲ್ಲಿ ಇರುವಾಗಲೇ ಮನಸಿನ ಆರೋಗ್ಯದ ಬಗ್ಗೆ ಕಾಳಜಿ ಮುಂಜಾಗ್ರತೆ ವಹಿಸಬೇಕು. ದೇಹದ ಆರೋಗ್ಯ ಸದೃಢ ಮನಸಿನ ಮೇಲೆ ಆಧಾರಿತವಾಗಿರುತ್ತದೆ.

ಮನಸ್ಸು ಒತ್ತಡಕ್ಕೆ ಒಳಗಾದರೆ ದೇಹ ರೋಗಕ್ಕೆ ಅಹ್ವಾನ ನೀಡಿದಂತಾಗುತ್ತದೆ.ಸಾಕಾರಾತ್ಮಕ ಆಲೋಚನಾ ಕ್ರಮಗಳ ಬಗ್ಗೆ ಜಾಗೃತಿ ಹೊಂದಿದರೆ ಬಿಪಿ, ಮಧುಮೇಹ, ರಕ್ತದೋತ್ತಡ, ಕ್ಯಾನ್ಸರ್,ಹೃದಯ ಸಂಬಂದಿ ರೋಗಗಳನ್ನು ನಮ್ಮ ಹಾಗೂ ನಮ್ಮ ಕುಟುಂಬದವರ ಸುತ್ತ ಮುತ್ತ ಸುಳಿಯದಂತೆ ನೋಡಿಕೊಳ್ಳಬಹುದು.ಮಾಡುವ ಕೆಲಸವನ್ನು ಇಷ್ಟಪಟ್ಟು ಮಾಡಿದರೆ ಆ ಕೆಲಸ ಎಷ್ಟೇ ಕಷ್ಟಕರವಾಗಿದ್ದರೂ ಅದರಲ್ಲಿ ಆನಂದ ಸಿಗುತ್ತದೆ.ನಾವು ಮಾಡುವ ಕೆಲಸದಲ್ಲಿ ನಮಗೆ ನಿರಾಸಕ್ತಿ ದುಃಖ ಉಂಟಾದರೆ ಅದರಿಂದ ಅನಾರೋಗ್ಯಕ್ಕೆ ನಾವೇ ಅಹ್ವಾನ ನೀಡಿದಂತಾಗುತ್ತದೆ.

ಸಾಕಾರಾತ್ಮಕ ಆಲೋಚನೆಗಳು, ಸದ್ಭಾವನ ಮನೋಭಾವದ ಧೋರಣೆಗಳು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮನೋತಜ್ಞ ಭುಜಬಲಿ ಬೋಗಾರ್ ವೈಜ್ಞಾನಿಕ ಉದಾಹರಣೆ ಬಳಸಿಕೊಂಡು ಮನ ಮುಟ್ಟುವಂತೆ ವಿವರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಎ ಸಿ ಪಿ ಸುಧಾ ಆದಿ, ಇನ್ಸ್ಪೆಕ್ಟರ್ ಸಂತೋಷ, ರಾಘವೇಂದ್ರ, ಸೇರಿದಂತೆ ನೂರಾರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here