ಬಸವಾದಿ ಶರಣರು ವರ್ಗ-ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಿದರು: ಸಾಹಿತಿ ಡಾ. ಪ್ರಭು

0
72

ಕಲಬುರಗಿ: ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಆರಾಧನಾ ಪಿಯು ಕಾಲೇಜಿನ ಸಭಾಂಗಣದಲ್ಲಿಂದು  ‘ವಚನ ಸಾಹಿತ್ಯ ಮತ್ತು ಮಾನವ ಹಕ್ಕುಗಳು’ ಕುರಿತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಹಿರಿಯ ಸಾಹಿತಿ ಡಾ.ಪ್ರಭು ಖಾನಾಪುರೆ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಾದಿ ಶರಣರು ವರ್ಗ-ಜಾತಿ ರಹಿತ ಸಮಾಜವನ್ನು ನಿರ್ಮಾಣಕ್ಕೆ ಮುಂದಾದರು.  ಶರಣರ ತತ್ವಗಳನ್ನು  ಇಂದು ನಾವೆಲ್ಲರೂ ಪಾಲಿಸಬೇಕು. ಅಂದಾಗ ಮಾತ್ರ ಈ ಸಮಾಜದಲ್ಲಿ ಶಾಂತಿಯನ್ನು ನೆಲೆಸಲಿಕ್ಕೆ ಸಾಧ್ಯವಾಗುತ್ತದೆ ಎಂದರು.

Contact Your\'s Advertisement; 9902492681

ಕಾಲೇಜಿನ ಪ್ರಾಚಾರ್ಯ ಚೇತನಕುಮಾರ ಗಾಂಗಜೀ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ.ಕುಪೇಂದ್ರ ಪಾಟೀಲ, ಪರಿಷತ್ತಿನ ಪ್ರಮುಖರಾದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಡಾ.ಶರಣಬಸಪ್ಪ ವಡ್ಡನಕೇರಿ, ಬಸವರಾಜ ಜನಕಟ್ಟಿ, ಶಿವಾನಂದ ಮಠಪತಿ, ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಪ್ರಾಧ್ಯಾಪಕ ಕಾಶಿನಾಥ ವೇದಿಕೆ ಮೇಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here