ಸುರಪುರ: ನಗರದ ಪ್ರತಿನಿಧಿ ವೆಂಕಟೇಶ್ವರ ದೇವಸ್ಥಾನದಲ್ಲಿ ಅಧಿಕ ಮತ್ತು ಶ್ರಾವಣ ಮಾಸದ ಅಂಗವಾಗಿ ಮಂಡಳಿ ಸದಸ್ಯರು ಪ್ರತಿನಿತ್ಯ ಸಲ್ಲಿಸಿದ ಹಾಡಿನ ಸೇವೆಯ ಮಂಗಳ ಕಾರ್ಯಕ್ರಮ ನಡೆಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ವೇಣುಗೋಪಾಲ ಭಜನಾ ಮಂಡಳಿಯ ಅಧ್ಯಕ್ಷೆ ರಾಧಾಬಾಯಿ ಜೋಷಿ ಮಾತನಾಡಿ,ವಾದಿರಾಜರು ರಚಿಸಿರುವ ಲಕ್ಷ್ಮೀ ಸೋಬಾನ ಹಾಡು ಪ್ರತಿ ನಿತ್ಯ ಹಾಡುವುದರಿಂದ ಜೀವನ ಸಾರ್ಥಕತೆ ಪಡೆದುಕೊಳ್ಳುತ್ತದೆ ಲಕ್ಷ್ಮೀಯ ಬಗ್ಗೆ ವೈವಿಧ್ಯಮಯವಾಗಿ 4 ಸಾಲುಗಳುಳ್ಳ 112 ನುಡಿಗಳ ಹಾಡಿನ ಸಾಹಿತ್ಯ ಅಮೋಘವಾಗಿದೆ. ಸೋಬಾನ ಹಾಡು ಹಾಡಲು ಶ್ರಾವಣ ಮಾಸ ಶ್ರೇಷ್ಠ, ನಿತ್ಯವೂ ಹಾಡಬಹುದು ಎಂದರು.
ಹಾಡಿನಿಂದ ಕಷ್ಟಗಳು ಪರಿಹಾರವಾಗುತ್ತವೆ. ಮನೆಯಲ್ಲಿ ಮಂಗಳ ಕಾರ್ಯ ನಡೆಯುತ್ತವೆ. ಜೀವನದಲ್ಲಿ ನೆಮ್ಮದಿ ಮನೆ ಮಾಡುತ್ತದೆ. ಲಕ್ಷ್ಮೀಯ ಕೃಪಾಕಟಾಕ್ಷ ಉಂಟಾಗಿ ಸಮೃದ್ಧಿ ಉಂಟಾಗುತ್ತದೆ ಎಂದರು.
ಈಚೆಗೆ ರಂಗಂಪೇಟೆಯಲ್ಲಿ ನಡೆದ ರಾಘವೇಂದ್ರಸ್ವಾಮಿಗಳ ಆರಾಧನೆ ಮತ್ತು ನಿರಂತರ ಭಗವಂತನ ಸೇವೆ ಮಾಡುತ್ತಿರುವ ಭಜನಾ ಮಂಡಳಿಯ ಸದಸ್ಯರನ್ನು ಗುರುರಾಜ ಕುಲಕರ್ಣಿ ಚಾಮನಾಳ ಮತ್ತು ವನಜಾ ದಂಪತಿ ಸತ್ಕರಿಸಿದರು.
ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಲಕ್ಷ್ಮೀಯ ಭಾವಚಿತ್ರಕ್ಕೆ ಹೂಮಾಲೆ ಹಾಕಿ, ಕರ್ಪೂರ ಬೆಳಗಿ ಭಜನಾ ಮಂಡಳಿಯ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು.
ಉಪಾಧ್ಯಕ್ಷೆ ಉಷಾ ಕುಲಕರ್ಣಿ, ಕಾರ್ಯದರ್ಶಿ ವಿಜಯಲಕ್ಷ್ಮೀ ಜೋಷಿ, ಸದಸ್ಯರಾದ ದೇವಕ್ಕಿ ಹೆಮನೂರ, ಉಜ್ವಲಾಭಟ್ಟ, ಅಂಜನಾ ಉಳ್ಳೆಸುಗೂರ, ವಿನೋದಾ ಭಟ್ಟ, ರಂಗೂಬಾಯಿ ಜಾಗೀರದಾರ, ರಾಧಾ ದೇವಡಿ, ರೇಖಾ ಕುಲಕರ್ಣಿ, ವಾಣಿ ಕುಲಕರ್ಣಿ, ಕೆ. ಮಂಜುಳಾ, ಸುರೇಖಾ ನಾಗರಾಳ, ಸುನಂದಾ ದೇಶಪಾಂಡೆ, ವಿಜಯಲಕ್ಷ್ಮೀ ಶಾಂತಪುರ, ರಾಘಮ್ಮ ಕುಲಕರ್ಣಿ, ರಾಜಲಕ್ಷ್ಮೀ ಅರಳಹಳ್ಳಿ, ಶಾರದಾ ಹಗರಟಗಿ, ಸುಮಾ ಹಳ್ಳದ, ಚೈತ್ರಾ ಅರಳಹಳ್ಳಿ, ಸಾವಿತ್ರಿ ಜೋಷಿ, ರಾಧಿಕಾ ಜೋಷಿ, ಪದ್ಮಾ ಸುಗೂರ, ಕಾಮಾಕ್ಷಿ ಜೋಷಿ, ಮಹಾಲಕ್ಷ್ಮೀ, ರಾಧಾ ಹಳಿಜೋಳ ಭಾಗವಹಿಸಿದ್ದರು.