ಸುರಪುರ:ತಾಲೂಕಿನ ಪೇಠ ಅಮ್ಮಾಪುರ ಗ್ರಾಮದ ಸಗರ ನಾಡು ಅನುದಾನಿತ ಪ್ರಾಥಮಿಕ ಶಾಲೆಯ ಮಕ್ಕಳು ವಾಲಿಬಾಲ್ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಯಾದಗಿರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ವಾಲಿಬಾಲ್‍ನಲ್ಲಿ ಪ್ರಥಮ ಸ್ಥಾನ ಪಡೆದು ವಿಭಾವ ಮಟ್ಟಕ್ಕೆ ಆಯ್ಕೆಯಾಗಿದ್ದರು,ಅದರಂತೆ ಬುಧವಾರ ಬೀದರ್‍ನಲ್ಲಿ ನಡೆದ ವಿಭಾಗ ಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ದ್ವೀತಿಯ ಸ್ಥಾನ ಪಡೆಯುವ ಮೂಲಕ ಉತ್ತಮ ಪ್ರದರ್ಶನ ನೀಡಿದರು.ಉತ್ತಮವಾಗಿ ಸಾಮಥ್ರ್ಯ ಪ್ರದರ್ಶಿಸಿದ ತಂಡದಲ್ಲಿಯ 5 ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಂಡದಲ್ಲಿದ್ದ ಮಕ್ಕಳಾದ ಆಂಜನೇಯ,ಸಿದ್ದಲಿಂಗ,ಮಹೇಶ್,ಕರೆಪ್ಪ ಹಾಗೂ ವಿರೇಶ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದು ಕ್ರೀಡಾ ತರಬೇತುದಾರ ಹಾಗೂ ಶಾಲೆಯ ದೈಹಿಕ ಶಿಕ್ಷಕ ಮೌನೇಶ ಗುತ್ತೇದಾರ ಅವರ ಮಾರ್ಗದರ್ಶನದಲ್ಲಿ ಮಕ್ಕಳು ನಿರಂತರ ಅಭ್ಯಾಸದಲ್ಲಿ ತೊಡಗಿ ಸಾಧನೆ ಮಾಡಿದ್ದು,ಮಕ್ಕಳ ಸಾಧನೆಗೆ ಹಾಗೂ ತರಬೇತುದಾರ ಮೌನೇಶ ಗುತ್ತೇದಾರ ಅವರಿಗೆ ಇಡೀ ಗ್ರಾಮದ ಜನತೆ ಹಾಗೂ ತಾಲೂಕಿನ ದೈಹಿಕ ಶಿಕ್ಷಕರ ಸಂಘ ಅಭಿನಂಧನೆ ಸಲ್ಲಿಸಿದ್ದಾರೆ.