ಸುರಪುರ: ನಗರದಲ್ಲಿರುವ ಕಾರ್ಮಿಕ ಇಲಾಖೆಯ ನಿರೀಕ್ಷಕರ ಕಚೇರಿಯಲ್ಲಿ ಕೆಲವರು ಕಾರ್ಮಿಕ ಬಂಧು ಎಂದು ಹೇಳಿಕೊಂಡು ಕಟ್ಟಡ ಕಾರ್ಮಿಕರ ಬಳಿ ಅಕ್ರಮ ಎಸಗುತ್ತಿದ್ದಾರೆ.ಆದ್ದರಿಂದ ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಮುಖಂಡರು ಕಾರ್ಮಿಕ ನಿರೀಕ್ಷಕರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಕಾರ್ಮಿಕ ಬಂಧು ಹುದ್ದೆಯನ್ನು ಸರಕಾರ ಈಗಾಗಲೇ ರದ್ದುಗೊಳಿಸಿದೆ,ಆದರೆ ಇಂದಿಗೂ ಕೆಲವರು ತಮ್ಮ ಕಚೇರಿಯಲ್ಲಿ ಇದ್ದುಕೊಂಡು ಕಾರ್ಮಿಕ ಬಂಧು ಎಂದು ಹೇಳಿಕೊಂಡು ಅಮಾಯಕ ಕಟ್ಟಡ ಕಾರ್ಮಿಕರಿಂದ ಹಣ ಪಡೆಯುತ್ತಿರುವ ಕುರಿತು ದೂರುಗಳು ಕೇಳಿ ಬಂದಿವೆ.ಆದ್ದರಿಂದ ಕೂಡಲೇ ಅಂತವರಿಗೆ ಕಡಿವಾಣ ಹಾಕಬೇಕು,ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಕಾರ್ಮಿಕ ನಿರೀಕ್ಷಕ ವಿಜಯೇಂದ್ರ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ದೇವಿಂದ್ರಪ್ಪ ಗುಡಾಳಕೇರಿ,ಉಪಾಧ್ಯಕ್ಷ ಮರೆಪ್ಪ ದೇಸಾಯಿ,ಅಬ್ದುಲ್‍ರೌಫ್ ತಾಳಿಕೋಟಿ,ತಿಮ್ಮಯ್ಯ ದೇವಿಕೇರಿ,ಮಹಿಬೂಬಸಾಬ್ ಖಾನಾಪುರ,ಮರೆಪ್ಪ ಸತ್ಯಂಪೇಟೆ,ರಂಗಪ್ಪರೆಡ್ಡಿ ದೇವಿಕೇರಿ,ಮೌನುದ್ದಿನ್ ರುಕ್ಮಾಪುರ,ಹಣಮಂತ ವಡ್ಡರ,ಭೀಮಣ್ಣ,ಬಸವರಾಜ ಮೇದಾಗಲ್ಲಿ ಸೇರಿದಂತೆ ಅನೇಕರಿದ್ದರು.