ಕಲಬುರಗಿ; ನಮ್ಮಲ್ಲಿ ಬರುವ ಪ್ರತಿ ಆಲೋಚನೆಯೂ ಒಬ್ಬರಿಗೆ ಬೆಳಕು ಕೊಡುವಂತದು ಇರಬೇಕೆ ಹೊರತು ಮತ್ತೊಬ್ಬರನ್ನು ಕತ್ತಲ ಕೋಣೆಗೆ ತಳ್ಳುವ ತರಹ ಇರಬಾರದು, ಉತ್ತಮ ಆಲೋಚನೆಯೊಂದಿಗೆ ನೆಮ್ಮದಿ ಜೀವನ ನಮ್ಮದಾಗಬೇಕೆಂದು ಖ್ಯಾತ ಮಾನಸಿಕ ತಜ್ಞರಾದ ಡಾ. ಅಮೂಲ ಪತಂಗೆ ಹೇಳಿದರು.
ಶುಕ್ರವಾರ ನಗರದ ರಾಜಾಪುರ ಬಡಾವಣೆಯ ಪ್ರಶಾಂತ ನಗರದಲ್ಲಿರುವ ಅಮರಕಲಾ ಸ್ಟುಡಿಯೋ ಮತ್ತು ಇವೆಂಟ್ ಮ್ಯಾನೇಜ್ಮೆಂಟ್ ಸಭಾಂಗಣದಲ್ಲಿ ಅಮರಕಲಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಪ್ರೈಮ್ 5d ಸರ್ದಾರ ವಲ್ಲಭಭಾಯಿ ಪಟೇಲ ಸೊಸೈಟಿ, ಕಾಮದೇನು ಸ್ವಾಸ್ಥ್ಯ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿರುವ “ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಮನುಷ್ಯ ರೋಗ ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಿಬೇಕೆಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಗಳಾದ ಬೆಂಗಳೂರಿನ ಖ್ಯಾತ ವೈದ್ಯರದ ಡಾ. ಬಾಲಕೃಷ್ಣ ರೆಡ್ಡಿ ಮಾತನಾಡುತ್ತಾ ಭಾರತೀಯ ಸಾಂಪ್ರದಾಯಿಕ ಚಿಕಿತ್ಸೆ ಪದ್ಧತಿಯ ಬಗ್ಗೆ ಹೇಳುತ್ತಾ ಹಿತ್ತಲ ಗಿಡ ಮದ್ದಲ್ಲ ಎಂದು ಕೆಲವು ಜನ ಹೇಳಿದರೆ ಆ ಗಿಡಮೂಲಿಕೆಗಳಲ್ಲಿಯೆ ಅದ್ಭುತವಾದ ರೋಗನಿರೋಧಕ ಶಕ್ತಿ ಅಡಗಿದೆ. ವಿದೇಶಿ ಪದ್ಧತಿಯ ಚಿಕಿತ್ಸೆಗಿಂತ ಸ್ವದೇಶಿ ಪದ್ಧತಿಯ ಚಿಕಿತ್ಸೆ ಶ್ರೇಷ್ಠ. ಈ ಚಿಕಿತ್ಸೆಯಿಂದ ಶರೀರಕ್ಕೆ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಎಂದು ಹೇಳುವ ಮೂಲಕ ಜನ ಜಾಗೃತಿ ಮೂಡಿಸಿದರು. ಮುಖ್ಯ ಅತಿಥಿಗಳಾಗಿ ಜನಪರ ಹೋರಾಟಗಾರ, ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ, ಪ್ರಸಾದ ಎ ತಿಗಡಿಕರ, ಡಾ. ಸುಭಾಷ ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ಅಮರಪ್ರಿಯ ಹಿರೇಮಠ ವಹಿಸಿದ್ದರು. ಬೆಂಗಳೂರು ಹಾಗೂ ಕಲ್ಬುರ್ಗಿಯ ಖ್ಯಾತ ವೈದ್ಯರಿಂದ ಭಾರತೀಯ ಸಾಂಪ್ರದಾಯಿಕ ಚಿಕಿತ್ಸೆ ಪದ್ಧತಿ ಫಾರ್ಮ್ ರಿಪ್ಲೆಕ್ಸ್ ಲಜಿ ಗಿಡಮೂಲಿಕೆಗಳ ಔಷಧಿ ಚಿಕಿತ್ಸೆ ಬಗ್ಗೆ ಸಾರ್ವಜನಿಕರು ಉಪಯೋಗ ಪಡೆದುಕೊಂಡರು. ಶ್ವೇತಾ ದೇಸಾಯಿ ಪ್ರಾರ್ಥಿಸಿದರು. ದಯಾನಂದ ಹಿರೇಮಠ ನಿರೂಪಿಸಿದರು. ಬಾಬುರಾವ ಪಾಟೀಲ ಚಿತಕೋಟ ವಂದಿಸಿದರು. ಕಾರ್ಯಕ್ರಮದಲ್ಲಿ ರತ್ನಕಲಾ ಹಿರೇಮಠ, ಪೂಜಾ ಹಿರೇಮಠ, ಗುರುಬಸಪ್ಪ ಪಾಟೀಲ, ಕಲಾವತಿ ಶಿವರೆಡ್ಡಿ, ಎನ್ ಎಸ ಕುಕ್ಕುಂದಾ, ಸಿದ್ದಣ್ಣ ಹಳಕಟ್ಟಿ ಸೇರಿದಂತೆ ಅನೇಕ ಜನ ಭಾಗವಹಿಸಿದರು.