ದೇಸಾಯಿ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ

0
21

ಕಲಬುರಗಿ: ನಗರದ ಎಮ್ ಎನ್ ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಯಿತು. ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಶಿವಶರಣಪ್ಪ ಪೂಜಾರಿ ಅವರು ಮಾತನಾಡಿ ಪ್ರಪಂಚದ ಎಲ್ಲಾ ರಾಷ್ಟ್ರಗಳು ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡು ತನ್ನ ಜನತೆಗೆ ಉತ್ತಮವಾದ ಆಡಳಿತವನ್ನು ನೀಡುವುದರ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕು. ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಚುನಾವಣೆಗಳ ಮೂಲಕ ತಮ್ಮ ನಿಷ್ಟಾಂವಂತ ಅಭ್ಯರ್ಥಿಗಳ ಚುನಾಯಿಸಿದಾಗ ಪ್ರಜಾಪ್ರಭುತ್ವವನ್ನು ಕಾಪಾಡಲು ಸಾಧ್ಯವಾಗುತ್ತದೆ ಒಂದುವೇಳೆ ಭ್ರಷ್ಟ ರಾಜಕಾರಣಿಗಳನ್ನು ಆಯ್ಕೆ ಮಾಡಿದರೆ ನಮ್ಮ ಬದುಕು ಕತ್ತಲೆಯಲ್ಲಿ ಕಳೆಯುವಂತಾಗುತ್ತದೆ.

ಇಂದು ದೇಶವು ಒಂದು ಚುನಾವಣೆಯಲ್ಲಿ ನಮ್ಮ ಪ್ರತಿನಿಧಿಗಳನ್ನು ಭ್ರಷ್ಟಾಚಾರ ರಹಿತ ವ್ಯಕ್ತಿಯನ್ನು ಆರಿಸುವುದರ ಮೂಲಕ ಒಂದು ಸುಭದ್ರವಾಗಿ ಆಡಳಿತ ನಡೆಸುವಂತಹ ಸರ್ಕಾರವನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು ಇಂದು ನಮ್ಮ ದೇಶದ ನಾಗರಿಕರು ಅತಿ ಹೆಚ್ಚು ಪ್ರಮಾಣದಲ್ಲಿ ಮತ ಚಲಾವಣೆಯನ್ನು ಮಾಡುವಂತ ದೇಶವಾಗಿದೆ. ಸುಮಾರು 93 ಕೋಟಿ ಐವತ್ತು ಲಕ್ಷ ಮತದಾರರು ತಮ್ಮ ಮತ ಹಕ್ಕನ್ನು ಚಲಾಯಿಸುವುದರ ಮೂಲಕ ತಮ್ಮ ಅಭ್ಯರ್ಥಿಗಳ ಆಯ್ಕೆಗೆ ಮತದಾರರು ಚುನಾವಣೆಯಲ್ಲಿ ಭಾಗವಹಿಸುವರು.

Contact Your\'s Advertisement; 9902492681

ಇಲ್ಲಿ ಒಂದು ಚುನಾವಣಾ ವ್ಯವಸ್ಥೆಯು ಉತ್ತಮವಾದ ರೀತಿಯಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುವುದರ ಮೂಲಕ ನಿಷ್ಟಾವಂತ ರಾಜಕೀಯ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯು ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಉತ್ತಮವಾದ ಒಂದು ವಿಧಾನವಾಗಿದೆ ಅದರಲ್ಲೂ ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ವಿಶ್ವಕ್ಕೆ ಒಂದು ಕೊಡುಗೆ ಎಂದು ಅವರು ಹೇಳಿದರು. ಒಂದು ದೇಶವು ಸಂವಿಧಾನಬದ್ಧವಾಗಿ ಸಾಗಿದಾಗ ಮಾತ್ರ ನಾವು ಸುಭದ್ರವಾಗಿರಲು ಸಾಧ್ಯವೆಂದು ಉಪನ್ಯಾಸ ನೀಡಿದರು.

ಪ್ರಜಾಪ್ರಭುತ್ವದಲ್ಲಿ ಜನರು ನೆಮ್ಮದಿಯಾಗಿರಲು ಪ್ರಮುಖ ಕೊಡುಗೆ ನಮ್ಮ ಸಂವಿಧಾನದಲ್ಲಿ ನೀಡಿದ ಮೂಲಭೂತ ಹಕ್ಕುಗಳು ಪ್ರಮುಖ ಕಾರಣವೆಂದು ವಿ.ಎಮ್. ಹಿರೇಮಠ ಹೇಳಿದರು.

ಕೇವಲ ನಾವು ಮೂಲಭೂತ ಹಕ್ಕುಗಳು ಮಾತ್ರ ಪಾಲಿಸುವುದಲ್ಲ ಅವುಗಳ ಜೊತೆಯಲ್ಲಿ ಮೂಲಭೂತ ಕರ್ತವ್ಯಗಳು ಕೂಡಾ ನಾವು ಪಾಲನೆ ಮಾಡಬೇಕು ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ಒಂದು ಅರ್ಥ ಬರುವುದು. ಕಾನೂನುಗಳು ಉಲ್ಲಂಘನೆ ಮಾಡದೆ ಒಂದು ದೇಶದಲ್ಲಿ ಸತ್ಪ್ರಜೆಗಳಾಗಿ ನಾವು ಬದುಕುವುದರ ಮೂಲಕ ದೇಶಕ್ಕೆ ಮಾದರಿ ಪ್ರಜೆಗಳಾಗಬೇಕು ಎಂದು ಹೇಳಿದರು.

ನಮಗೆ ಡಾ. ಬಿ. ಆರ್. ಅಂಬೇಡ್ಕರ್ ಅವರು ನೀಡಿದ ಈ ಸಂವಿಧಾನದ ವಿಧಿಗಳು ನಾವು ಚಾಚೂ ತಪ್ಪದೆ ಪಾಲಿಸಬೇಕು ಹಾಗೂ ಈ ತತ್ವದಡಿಯಲ್ಲಿ ಬದುಕುವುದರ ಮೂಲಕ ದೇಶದಲ್ಲಿ ಉತ್ತಮ ಪ್ರಜೆಗಳಾಗಿ ಇರಲು ಸಾಧ್ಯವೆಂದು ಹೇಳಿದರು.

ಸಮಾರಂಭದಲ್ಲಿ ಪ್ರಾಂಶುಪಾಲ ಸಂದೀಪ ದೇಸಾಯಿ ಅಧ್ಯಕ್ಷತೆ ವಹಿಸಿದರು. ವಾಣಿಜ್ಯ ವಿಭಾಗದ ಹಿರಿಯ ಪ್ರಾಧ್ಯಾಪಕ ಪೆÇ್ರ. ವಿ.ಎಮ್.ಹಿರೇಮಠ್, ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮಹೇಶ ಎಮ್ ತೆಗ್ಗೆಳ್ಳಿ, ಪ್ರಾಧ್ಯಾಪಕರಾದ ಕು. ಪ್ರಿಯಾಂಕ ಕರಣಿಕ, ಕು. ಅನ್ನಪೂರ್ಣ, ಕು.ಸಂಧ್ಯಾರಾಣಿ, ಎನ್.ಎಸ್.ಎಸ್.ಅಧಿಕಾರಿ ಮಂಜುನಾಥ ಬನ್ನೂರ, ಸಿಬ್ಬಂಧಿ ವರ್ಗಗದವರಾದ ನಿಲಕಂಠ, ಅನ್ನಪೂರ್ಣ ಪಾಸಾರ್, ರಾಧಿಕಾ, ಶಿಲ್ಪಾ, ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾದ ಶಿವಶರಣಪ್ಪ ಪೂಜಾರಿ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಸಾಮೂಹಿಕವಾಗಿ ಬೋಧಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರು. ವಿದ್ಯಾರ್ಥಿನಿ ಸುಷ್ಮಾ, ರೋಹನ ಪ್ರಜಾಪ್ರಭುತ್ವದ ಕುರಿತು ತಮ್ಮ ಅನಿಸಿಕೆಗಳನ್ನು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here