40ನೇ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಂಸ್ಥಾಪನಾ ದಿನ

0
10

ಕಲಬುರಗಿ: ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಸಂಸ್ಥಾಪನಾ ದಿನಾಚರಣೆಯನ್ನು ಮತ್ತು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ “ಸಂವಿಧಾನ ಪೀಠಿಕೆ ಓದು” ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು.

ಜಿಲ್ಲಾ ಮಹಿಳಾ ಅಧ್ಯಕ್ಷರಾದ ಲತಾ ರಾಠೋಡ್ ಅವರು ಧ್ವಜಾರೋಹಣ ನೆರವೇರಿಸಿ ಮಹಿಳಾ ಕಾಂಗ್ರೆಸ್ ಸಂಸ್ಥಾಪನ ದಿನದ ಬಗ್ಗೆ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರೇ ಇರುವ ಮಹಿಳೆಯರಿಗಾಗಿ ಪ್ರತ್ಯೇಕ ಮಹಿಳಾ ಘಟಕವನ್ನು ಕಳೆದ 39 ವರ್ಷಗಳ ಹಿಂದೆ ಸ್ಥಾಪಿಸಲಾಯಿತು.

Contact Your\'s Advertisement; 9902492681

ಹಾಗಾಗಿ ಮಹಿಳಾ ಕಾಂಗ್ರೆಸ್ ಸಂಸ್ಥಾಪನಾ ದಿನವೆಂದು ಆಚರಿಸುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆ, ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಇದ್ದಷ್ಟು ಪ್ರತಿನಿತ್ಯ ಬಹುಶಃ ಬೇರೆ ರಾಜಕೀಯ ಪಕ್ಷದಲ್ಲಿ ಇಲ್ಲ.ಭಾರತದ ಮೊದಲ ಮಹಿಳಾ ಪ್ರಧಾನಿ ದಿ. ಇಂದಿರಾಗಾಂಧಿ ನಮ್ಮ ದೇಶದ ಹೆಮ್ಮೆ, ಬಡತನ, ನಿರುದ್ಯೋಗ ನಿವಾರಣೆಗೆ ಶ್ರಮಿಸಿದ ಧೀಮಂತ ಮಹಿಳೆ, ಶ್ರೀಮತಿ ಇಂದಿರಾಗಾಂಧಿ ಅವರು ದೇಶಕ್ಕಾಗಿ ತಮ್ಮ ಪ್ರಾಣ ಕೊಟ್ಟು ಧೀರ ಮಹಿಳೆ. ಅಂತಹ ಮಹಾನ ಮಹಿಳೆ ಕಾಂಗ್ರೆಸ್ ಪಕ್ಷದ ಜೀವಾಳವಾಗಿದೆ. ನಂತರ ಬಂದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯಜೀಯವರು ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿದರು.

ಪಂಚಾಯತಿರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗಾಗಿ 30ರಷ್ಟು ಸ್ಥಾನಮಾನ ಕಲ್ಪಿಸಿದರು. ಪರಿಣಾಮ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ,ಪೌರ ಪಂಚಾಯಿತಿಗಳಲ್ಲಿ ಶೇಕಡಾ 33 ರಷ್ಟು ಮಹಿಳೆಯರು ಅಧಿಕಾರದಲ್ಲಿದ್ದಾರೆ.

ಇನ್ನು ಶ್ರೀಮತಿ ಸೋನಿಯಾ ಗಾಂಧೀಜಿ ಅವರು ಪಕ್ಷಕ್ಕೆ ಮಾಡಿದ ತ್ಯಾಗ ನಾವ್ಯಾರು ಮರೆಯುವಂತಿದಿಲ್ಲ. ತಮಗೆ ಪ್ರಧಾನಿ ಹುದ್ದೆ ಒಲಿದುಬಂದರು ಸಹ ಭಾರತದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರನ್ನು ಎರಡುಬಾರಿಗೆ ಪ್ರಧಾನಿ ಮಾಡಿದರು. ಅವರ ಆರ್ಥಿಕ ನಿರ್ವಹಣೆ ಭಾರತದ ಸುಭದ್ರತೆಗೆ ಅಡಿಪಾಯ ಆಯಿತು. ಭಾರತಕ್ಕೆ ಮಹಿಳಾ ರಾಷ್ಟ್ರಪತಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಶ್ರೀಮತಿ ಪ್ರತಿಭಾ ಪಾಟೀಲ್ ಅವರು ರಾಷ್ಟ್ರಪತಿ ಆಗಿದ್ದು ನಮ್ಮ ಹಾಗೂ ಪಕ್ಷದ ಹೆಮ್ಮೆ.

ಈಗಲೂ ಪಕ್ಷದ ಸಾರಥ್ಯವನ್ನು ಶ್ರೀಮತಿ ಸೋನಿಯಾಗಾಂಧಿ ಅವರು ಹೊಂದಿದ್ದಾರೆ. ಮಹಾಮಾರಿ ಕರೋನಾ ದೇಶವನ್ನು ನರಕೋಪಕ್ಕೆ ತಳ್ಳಿದೆ. ನಿರುದ್ಯೋಗ, ಬಡತನ,ಹಸಿವು ಹೆಚ್ಚಿದೆ. ಆರ್ಥಿಕ ಬಿಕ್ಕಟ್ಟು ಬಿಗಡಾಯಿಸಿದೆ. ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ವಿಫಲವಾಗಿದೆ. ದೇಶವನ್ನು ರಕ್ಷಿಸುವುದು ಕೇವಲ ಕಾಂಗ್ರೆಸ್ ಮಾತ್ರ. ಎಲ್ಲ ಸಮುದಾಯದವರನ್ನು ಒಟ್ಟಾಗಿ, ಒಂದಾಗಿ ತೆಗೆದುಕೊಂಡು ಹೋಗುವ ಏಕಮೇವ ಪಕ್ಷ ಕಾಂಗ್ರೆಸ್ ಆಗಿದೆ.

ಅದಕ್ಕೆ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ 5 ಗ್ಯಾರೆಂಟಿ ಯೋಜನೆತರಲಾಯಿತು. ಮಹಿಳೆಯರು ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಕಾಂಗ್ರೆಸ್ ಪಕ್ಷ ಪುನಶ್ಚೇತನ ಮಾಡಿ ಮತ್ತೆ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾತ್ರ ದೇಶ ಅಪಾಯದಿಂದ ಪಾರಾಗಿ ಸಮೃದ್ಧ ರಾಷ್ಟ್ರ ಆಗಲಿದೆ. ದೇಶದ ಸಂಕಷ್ಟ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಪಕ್ಷ ಪರಿಹಾರ ಕಾರ್ಯಗಳಲ್ಲಿ ತೊಡಗಿದೆ.ಮಹಿಳೆಯರು ಜನಪರ ಕಾರ್ಯಗಳಲ್ಲಿ ತೊಡಗಿ ಪಕ್ಷ ಮರಳಿ ಅಧಿಕಾರಕ್ಕೆ ತರುವ ಅವಕಾಶ ಇದೆ.ಮಹಿಳಾ ಘಟಕದ ಸಂಸ್ಥಾಪನಾ ದಿನದಂದು ನಾವು ಸಂಕಲ್ಪ ತೊಟ್ಟು ಕಾಂಗ್ರೆಸ್ ಸಾಮ್ರಾಜ್ಯ ಕೇಂದ್ರ ಸರ್ಕಾರ ಮೂರು ಸ್ಥಾಪಿಸೋನ ಎಂದರು.

ಹಿರಿಯ ಕಾಂಗ್ರೆಸ್ ಮಹಿಳೆಯರು, ಬ್ಲಾಕ್ ಅಧ್ಯಕ್ಷರು, ಸೇವಾದಳ ಮಹಿಳೆ ಸದಸ್ಯರು, ಸಮಿತಿಯ ಉಪಾಧ್ಯಕ್ಷರು ಮಹಾನಗರ ಪಾಲಿಕೆ ಸದಸ್ಯರು, ಕಾರ್ಯಕಾರಿ ಸಮಿತಿಯ ಸದಸ್ಯರು, ಕಾಂಗ್ರೆಸ್ ಪಕ್ಷದ ಮಹಿಳೆಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here