ಕಲಬುರಗಿ: ಮನುಷ್ಯ ಆಧ್ಯಾತ್ಮಿಕತೆ ಬೆಳೆಸಿಕೊಳ್ಳಲು ಸತ್ಸಂಗ ಅಳವಡಿಸಿಕೊಳ್ಳಬೇಕು ಎಂದು ಶ್ರೀನಿವಾಸ ಸರಡಗಿ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ರೇವಣಸಿದ್ಧ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಜಯನಗರ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಇಂದು ನಡೆದ ಒಂದು ತಿಂಗಳ ಶಿವ ಧರ್ಮ ಪ್ರವಚನ ಮಹಾ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು ಎಂಥಾ ಪರಿಸ್ಥಿತಿ ಎದುರಾದರೂ ಧರ್ಮದ ಹಾದಿಯಲ್ಲಿ ನಡೆಯಬೇಕು.ಲೋಕದೊಡೆಯ ಪರಮಾತ್ಮನನ್ನು ನೆನೆದರೆ ಕಷ್ಟ ದೂರವಾಗುತ್ತದೆ.ಪ್ರವಚನ, ಪುರಾಣಗಳು ಕೇಳುವುದರಿಂದ ಮನಸ್ಸಿಗೆ ಶಾಂತಿ,ನೆಮ್ಮದಿ ದೊರೆಯುತ್ತದೆ.ಇಂಥಹ ಧಾರ್ಮಿಕ ಕಾರ್ಯಕ್ರಮಗಳು ಎಲ್ಲೆಡೆ ನಡೆಯಲಿ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೋರಾಟಗಾರ ಲಕ್ಷ್ಮಣ ದಸ್ತಿ ಅವರು ಮಾತನಾಡಿ ಕಲ್ಯಾಣ ಕರ್ನಾಟಕ ಶರಣರು ನಡೆದಾಡಿದ ಪುಣ್ಯ ಭೂಮಿ.ಸರಳ ಬದುಕು ಅವರದಾಗಿತ್ತು.ಈ ಭಾಗದ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿ ಬೇಕು ಎಂದರು.ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಾತನಾಡಿ ಒಂದು ತಿಂಗಳ ನಿರಂತರ ಪ್ರವಚನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಮಾಜಮುಖಿ ಕೆಲಸಗಳಲ್ಲಿ ಟ್ರಸ್ಟ್ ತೊಡಗಲಿದೆ ಎಂದು ಅವರು ಹೇಳಿದರು.
ಇದಕ್ಕೂ ಮೊದಲು ಮಾಜಿ ಕೆಕೆ ಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು.ನಂತರ ಮೆರವಣಿಗೆಗೆ ನಡೆಯಿತು.
ಉದ್ಯಮಿ ಯುವ ಮುಖಂಡ ಸಂತೋಷ ಬಿಲಗುಂದಿ, ಶರಣಬಸಪ್ಪ ಅಲ್ಲಮಪ್ರಭು ಪಾಟೀಲ್,ಕೆ.ಎಸ್.ವಾಲಿ, ರೇವಣಸಿದ್ದಪ್ಪ ಭೋಗಶೆಟ್ಟಿ,ಟ್ರಸ್ಟ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ ಇದ್ದರು.
ಪತ್ರಕರ್ತ ಪ್ರಭುಲಿಂಗ ನಿಲೂರೆ,ಚಿಂತಕ ಡಾ.ಬಸವರಾಜ ಕುಮ್ನೂರ,ಪತ್ರಿಕಾ ಛಾಯಾಗ್ರಾಹಕರಾದ ಅರುಣ ಕುಲಕರ್ಣಿ, ರಾಜಕುಮಾರ್ ಉದನೂರ,ಸಮಾಜ ಸೇವಕ ವಿಶ್ವನಾಥ ಪಾಟೀಲ ಗೌನಳ್ಳಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಸ್ವಾಗತಿಸಿದರು.ಉಪಾಧ್ಯಕ್ಷ ವಿರೇಶ ದಂಡೋತಿ ವಂದಿಸಿದರು,ಜಿ.ಜಿ.ವಣಿಕ್ಯಾಳ ನಿರೂಪಿಸಿದರು.
ಸಿದ್ಧಲಿಂಗ ಗುಬ್ಬಿ, ಬಸವರಾಜ ಮಾಗಿ, ಶಿವಪುತ್ರಪ್ಪ ಮರಡಿ, ಬಂಡಪ್ಪ ಕೇಸೂರ, ನಾಗರಾಜ ಖೂಬಾ,ಎಂ.ಡಿ.ಮಠಪತಿ, ಭೀಮಾಶಂಕರ ಶೆಟ್ಟಿ, ಎಸ್.ಡಿ.ಸೇಡಂಕರ, ಬಸವರಾಜ ಪುರ್ಮಾ, ಸುನೀಲ್ ಬಿಡಪ್ಪ, ಶಿವಕುಮಾರ ಪಾಟೀಲ್, ಚಂದ್ರಕಾಂತ ತುಪ್ಪದ, ಮಲ್ಲಯ್ಯ ಸ್ವಾಮಿ ಬೀದಿಮನಿ, ಮನೋಹರ ಬಡಶೇಷಿ, ಮಲ್ಲಯ್ಯ ಗಂಗಾಧರಮಠ,ಗುರು ಮುಕ್ರಂಬಿ , ಪ್ರಶಾಂತ ತಂಬೂರಿ,ಮಹಿಳಾ ಸದಸ್ಯರಾದ ಅನುರಾಧ ಕುಮಾರಸ್ವಾಮಿ,ಅನಿತಾ ನವಣಿ, ಸುಷ್ಮಾ ಮಾಗಿ, ಸುರೇಖಾ ಬಾಲಕೊಂದೆ, ವಿಜಯಾ ದಂಡೋತಿ, ಗೀತಾ ಸಿರಗಾಪೂರ, ಲತಾ ತುಪ್ಪದ ಸೇರಿದಂತೆ ಬೇರೆ ಬೇರೆ ಬಡಾವಣೆಯ ನೂರಾರು ಮಹಿಳೆಯರು, ಹಿರಿಯರು ಭಾಗವಹಿಸಿದ್ದರು.