8 ಜನರಿಗೆ ಬಡ್ತಿ ನೀಡಿರುವ ಖಂಡಿಸಿ ಭಾರತೀಯ ಯುವ ಸೈನ್ಯಯ ನೇತೃತ್ವದಲ್ಲಿ ಸಿಎಂಗೆ ಮನವಿ

0
15

ಕಲಬುರಗಿ: ಗ್ರೂಪ್-ಡಿ ಹುದೆಯಿಂದ ಗ್ರೂಪ್-ಸಿ ಹುದ್ದೆಗೆ ಮುಂಬಡ್ತಿಯನ್ನು ಯಾವ ಆಧಾರದ ಮೇಲೆ 8 ಜನರಿಗೆ ಬಡ್ತಿ ನೀಡಿರುವ ಖಂಡಿಸಿ ಭಾರತೀಯ ಯುವ ಸೈನ್ಯಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಚಿಂಚನಸೂರ ನೇತೃತ್ವದಲ್ಲಿ ಸಿಎಂ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ಅವರು ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಸುಮಾರು 1994 ರಿಂದ ಒಟ್ಟು 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಡಿ ಸಿಬ್ಬಂದಿಯವರು ಅವರಿಗೆ ಯಾವುದೇ ಮುಂಬಡ್ತಿಯನ್ನು ನೀಡಿರುವುದಿಲ್ಲ ಆದರೆ 2014, 2015, 2016 ರಲ್ಲಿ ಗ್ರೂಪ್-ಡಿ ಹುದ್ದೆಗೆ ನೇಮಕವಾಗಿರುವ 08 ಜನರಿಗೆ ಮುಂಬಡ್ತಿಯನ್ನು ನೀಡಿರುತ್ತಾರೆ (ಪ್ರತಿಯನ್ನು ಲಗತ್ತಿಸಿದೆ) ಅದಲ್ಲದೇ 1994 ರಿಂದ ಪ್ರಸ್ತುತ. ಇಲ್ಲಿಯ ವರೆಗೆ ಕಾಯ್ಕರ್ವಹಿಸಿರುವ ಸಿಪಾಯಿ ಯವರಿಗೆ ಬಡ್ತಿ ನೀಡದೇ ಅನ್ಯಾಯವನ್ನು ಮಾಡಿರುತ್ತಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

Contact Your\'s Advertisement; 9902492681

ಜಿಲ್ಲಾಧಿಕಾರಿಗಳು ಬಡ್ತಿ ನೀಡಿದ್ದು ಎಲ್ಲಾ ಮಾಹಿತಿ ಅಲ್ಲಿಯ ಲಭ್ಯವಿದೆಂದು ತಿಳಿಸಿರುತ್ತಾರೆ. ತದನಂತರ ಡಿಯುಡಿಸಿ ಕಛೇರಿಗೆ ಭೇಟಿ ನೀಡಿದ ನಂತರ ಪಾಅಕೆಯಲ್ಲಿ ಮಾಹಿತಿ ಇದೇ ಎಂದು ಸುಮಾರು 03 ತಿಂಗಳನಿಂದ ಯಾವುದೇ ದಾಕಲಾತಿಯನ್ನು ನೀಡದೇ ಅನಾವಶ್ಯಕವಾಗಿ ಕಾಲಹರಣ ಮತ್ತು ವಿಳಂಭ ಮಾಡುತ್ತಿರುವ ಪಾಲಿಕೆಯ ಸಿಬ್ಬಂದಿ ಶಾಖೆಯ ಅಧಿಕಾರಿಗಳು / ಸಿಬ್ಬಂದಿ ವರ್ಗದವರ ಮೇಲೆ ಶಿಸ್ತು ಕ್ರಮ ತೆಗೆದುಕೊಂಡು ಸದರಿ ಮುಂಬಡ್ತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು 2016 ರಲ್ಲಿ ಗ್ರೂಪ್-ಡಿ ಹುದ್ದೆಯಿಂದ ಗ್ರೂಪಡ್-ಸಿ ಹುದ್ದೆಗೆ ಬಡ್ತಿ ಹೊಂದಿದ 08 ಜನರ ಕಡತವನ್ನು ಮನಃ ಪರಿಶೀಲಿಸಿ ಅನ್ಯಾಯವಾಗಿ ಬಡ್ತಿಯನ್ನು ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿರುವ 08 ಜನರು ಸರಕಾರಕ್ಕೆ ಹಾಗೂ ಪಾಲಿಕೆಯ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುತ್ತಾರೆ ಎಂದು ತಿಳಿಸಿದ್ದೃಎ.

ಆದ್ದರಿಂದ ಪ್ರಸ್ತುತ 2016 ರಿಂದ ಇಲ್ಲಿಯ ವರೆಗೆ ತೆಗೆದುಕೊಂಡಿರುವ ವೇತನವನ್ನು ಪಾಲಿಕೆಗೆ ಹಿಂದಿರುಗಿಸಲು ಸದರಿ 1994 ರಿಂದ ಇಲ್ಲಿಯ ವರೆಗೆ ಕಾರ್ಯನಿರ್ವಹಿಸುತ್ತಿರುವ ಸಿಪಾಯಿ ಸಿಬ್ಬಂದಿಯವರಿಗೆ ಬಡ್ತಿ ಕೋಡಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here