ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ತಿರಸ್ಕರಿಸಿ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಸಿಎಂಗೆ ಮನವಿ

0
19

ಕಲಬುರಗಿ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ತಿರಸ್ಕರಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಡಾ.ಬಾಬು ಜಗಜೀವನರಾಮ ಅಭಿವೃದ್ಧಿ ಮತ್ತು ಹೋರಾಟ ಸಮಿತಿ ಪದಾಧಿಕಾರಿಗಳು ಸಿಎಂ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸುಮಾರು ವರ್ಷಗಳಿಂದ ನೆನೆಗುದಿ ಬಿದ್ದಂತಹ ಈ ವರದಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಶಿಫಾರಸ್ಸು ಮಾಡಬೇಕೆಂದು, ಕಲ್ಯಾಣ ಇಲಾಖೆಗೆ ಸರ್ಕಾರ ನೀಡುವ ಎಸ್.ಸಿ.ಪಿ. ಟಿ.ಎಸ್.ಪಿ. ಅನುದಾನವನ್ನು ಬೇರೆ ಇಲಾಖೆಗಾಗಲಿ ಅಥವಾ ಸರ್ಕಾರದ ಬೇರೆ ಯೋಜನೆಗಳಿಗಾಗಲಿ ನೀಡಿದ್ದೇ ಆದರೆ ನಮ್ಮ ಸಮಿತಿ ಖಂಡಿಸುತ್ತದೆ. ಎಸ್.ಸಿ.ಪಿ. ಟಿ.ಎಸ್.ಪಿ. ಅನುದಾನ ಪರಿಶಿಷ್ಠ ಜಾತಿ ಜನಾಂಗದವರಿಗೆ ಸಮಾಜ ಕಲ್ಯಾಣ ಇಲಾಖೆ ಬಳಕೆ ಮಾಡಬೇಕು, ಕರ್ನಾಟಕ ರಾಜ್ಯಾದಂಥ ಸುಮಾರು ಮೂರು-ನಾಲ್ಕು ವರ್ಷಗಳಿಂದ ಪರಿಶಿಷ್ಟ ಜಾತಿ ಜನಾಂಗದ ಸ್ಮಶಾನ ಭೂಮಿ ಅಭಿವೃದ್ಧಿ ಪಡಿಸಲು ಅನುದಾನ ಬಿಡುಗಡೆ ಆಗಿರುವುದಿಲ್ಲ.

Contact Your\'s Advertisement; 9902492681

ಅದೇ ರೀತಿ ಸುಮಾರು ಜಿಲ್ಲೆಗಳಲ್ಲಿ ಹಳ್ಳಿಗಳಲ್ಲಿ ಸುಮಾರು ತಾಲ್ಲೂಕುಗಳಲ್ಲಿ, ಸುಮಾರು ನಗರಗಳಲ್ಲಿ ಪರಿಶಿಷ್ಟ ಜಾತಿ ಜನಾಂಗದವರಿಗೆ ಶವ ಸಂಸ್ಕಾರ ಮಾಡಲು ಜಮೀನು ಖರೀದಿಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ನಿಗದಿಪಡಿಸಬೇಕು. ಅದೇ ರೀತಿ, ಪರಿಶಿಷ್ಠ ಜಾತಿ ಜನಾಂಗದ ರಾಜ್ಯಾದ್ಯಂತ ಸಮುದಾಯ ಭವನ ಕಟ್ಟಡ ಮಾಡುವ ಸಲುವಾಗಿ ಸುಮಾರು ಕಡೆ ಸ್ಥಳ ಲಭ್ಯವಿರುವುದಿಲ್ಲ. ಖಾಸಗಿ ಸ್ಥಳ ಖರೀದಿಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ನಿಗದಿಪಡಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಏಕೆಂದರೆ, ಕಾಂಗ್ರೇಸ್ ಪಕ್ಷವೆಂದರೆ ದಲಿತರ ಪರವಾಗಿ, ಬಡವರ ಪರವಾಗಿ, ಅಲ್ಪಸಂಖ್ಯಾತರ ಪರವಾಗಿ, ಹಿಂದುಳಿದವರ ಪರವಾಗಿ ಇರುವಂತಹ ಪಕ್ಷ. ಈ ಎಲ್ಲಾ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯಾದ್ಯಂತ ರೈತರ ಸಾಲ ಮನ್ನಾ ಮಾಡಬೇಕು. ಬೆಳೆಯ ತಕ್ಕ ಹಾಗೆ ಮಳೆ ಆಗಲಾರದೇ ಎಲ್ಲಾ ಬೆಳೆಗಳು ಹಾನಿ ಆಗಿರುವ ರೈತರಿಗೆ ರಾಜ್ಯ ಸರ್ಕಾರದಿಂದ ಹಾಗೂ ಕೇಂದ್ರ ಸಕಾರದಿಂದ ತಾವು ಸೂಕ್ತ ಪರಿಹಾರ ಒದಗಿಸಿಕೊಡಬೇಕು, ಕರ್ನಾಟಕ ರಾಜ್ಯ ಸರ್ಕಾರಕ್ಕೆ ವಿಶೇಷವಾಗಿ ಮನವಿ ಮಾಡಿಕೊಳ್ಳುವುದೇನೆಂದರೆ, ದಿನಾಂಕ ಏಪ್ರಿಲ್ 5 ರಂದು ಹಸಿರು ಕ್ರಾಮತಿ ಹರಿಕಾರ ಭಾರತ ದೇಶದ ಉಪ ಪ್ರಧಾನ ಮಂತ್ರಿ ಆಗಿದ್ದ ಶೋಷಿತರಿಗೆ ರಾಜಕೀಯ ಮೂಲಕ ಹತ್ತಾರು ಯೋಜನೆಗಳನ್ನು ರೂಪಿಸಿ ಸವಲತ್ತು ಮಾಡಿಕೊಟ್ಟಂತಹ ಡಾ: ಬಾಬು ಜಗಜೀವನರಾಮ್’ ಅವರ ಜಯಂತ್ಯೋತ್ಸವದ ದಿನದಂದು ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಬೇಕು

ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಸಮಾಜ ಕಲ್ಯಾಣ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ, ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಹಾಗೂ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ, ಡಾ: ಬಾಬು ಜಗಜೀವನರಾಮ್ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನಿಗದಿಪಡಿಸಿದರೆ, ನುಡಿದಂತೆಯೇ ನಡೆದಂತೆ ಆಗುತ್ತದೆ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅದೇ ರೀತಿ, ಈ ಮೂರು ನಿಗಮಗಳ ಅರ್ಜಿಯನ್ನು ಆನ್‍ಲೈನ್ ಸುವಿಧಾ ಪೆÇೀರ್ಟಲ್‍ನಲ್ಲಿ ಅರ್ಜಿಗಳು ಹಾಕುವುದನ್ನು ರದ್ದುಪಡಿಸಿ, ಆಯಾ ನಿಗಮಗಳಲ್ಲಿ ಬರವಣಿಗೆ ಮೂಲಕ ಆಫ್‍ಲೈನ್ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು, ಡಾ: ಬಾಬು ಜಗಜೀವನರಾಮ್ ಅವರ ಜೀವನಚರಿತ್ರೆಯನ್ನು ಸರ್ಕಾರದ ಪಠ್ಯ ಪುಸ್ತಕಗಳಲ್ಲಿ ರಾಜ್ಯ ಸರ್ಕಾರ ಪ್ರಕಟಿಸಬೇಕೆಂದು ಆಗ್ರಹಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಜಿಲ್ಲಾ ಸರ್ಕಾರಿ ಆಸ್ಪತ್ರೆ ಜಿಮ್ಸ್ ಜಯದೇವ ಹೃದಯ ಭಾಗ, ಕಿದ್ವಾಯಿ ಕ್ಯಾನ್ಸರ್, ಆಸ್ಪತ್ರೆ, ಎನ್.ಐ.ಸಿ.ಯು ಮಕ್ಕಳ ಘಟಕ ಇ.ಎಸ್.ಐ.ಸಿ, ಆಸ್ಪತ್ರೆ ಈ ಎಲ್ಲಾ ಆಸ್ಪತ್ರೆಗಳಲ್ಲಿ ಬಡ-ರೋಗಿಗಳಿಗೆ ಸರಿಯಾಗಿ ವೈದ್ಯರ ನಿರ್ಲಕ್ಷತನ ಹೆಚ್ಚಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಈ ಎಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛತೆ ಇರುವುದಿಲ್ಲ. ಸಿಬ್ಬಂದಿಗಳು ಕೂಡ ಸರಿಯಾಗಿ ಕೆಲಸ ಮಾಡುವುದು ಕಾಣಿಸುತ್ತಿಲ್ಲ. ಈ ಎಲ್ಲಾ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಮತ್ತು ಐ.ಸಿ.ಯು. ಬೆಡ್‍ಗಳು ಮತ್ತು ಗರ್ಭೀಣಿಯರಿಗೆ ಹಾಸಿಗೆಗಳು, ರಕ್ತ ಪರೀಕ್ಷೆ ಘಟಕಗಳನ್ನು ಹೆಚ್ಚಿಸಬೇಕು. ಕ್ಷ-ಕಿರಣ ಘಟಕಗಳನ್ನು ಹೆಚ್ಚಿಸಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಸೌಕರ್ಯ ಒದಗಿಸಬೇಕು ಎಂದು ತಮ್ಮಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಲ್ಲಿ ಕೂಡ ಮನವಿ ಮಾಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳಾದ ತಮ್ಮಲ್ಲಿ ಹಾಗೂ ಸಮಾಜ ಕಲ್ಯಾಣ ಸಚಿವರಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಕುಡ ಮನವಿ ಮಾಡಿಕೊಳ್ಳುವುದೇನೆಂದರೆ, ಕಲಬುರಗಿ ನಗರದಲ್ಲಿ ಭವ್ಯವಾದ ಬಾಬುಜಿ ಅವರ ಭವನ ನಿರ್ಮಾಣ ಕಾಮಗಾರಿ ಆರ್ಧದಲ್ಲಿ ನಿಂತಿರುತ್ತದೆ. ಹಾಗಾಗಿ ಪೂರ್ಣಗೊಳಿಸಲು 4 ಕೋಟಿ 50 ಲಕ್ಷ ರೂಪಾಯಿ ಮಂಜೂರು ಮಾಡಿ ಅನುದಾನ ಮಂಜೂರು ಮಾಡಿ ಅನುದಾನ ಬಿಡುಗಡೆ ಮಾಡಬೇಕು.

ರಾಜ್ಯ ಸಕಾರದಲ್ಲಿ ವಿಶೇಷವಾಗಿ ಮನವಿ ಮಾಡಿಕೊಳ್ಳುವುದೇನೆಂದರೆ ತಮ್ಮ ಸರ್ಕಾರದಲ್ಲೇ ಸಚಿವರಾದ ಡಿ. ಸುಧಾಕರ ಅವರು ದಲಿತರ ಆಸ್ತಿ ಲೂಟಿ ಮಾಡುವುದು, ದಲಿತರಿಗೆ ಜೀವ ಬೆದರಿಕೆ ಹಾಕುವುದು, ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಿರುವ ಡಿ. ಸುಧಾಕರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ತಮ್ಮ ಸಮಿತಿ ವತಿಯಿಂದ ಕೇಳಿಕೊಳ್ಳುತ್ತೇನೆ. ಯಾವುದೇ ಪಕ್ಷದ ಶಾಸಕರಾಗಲಿ ಸಚಿವರಾಗಲಿ, ಸಂಸದರಾಗಲಿ ದಲಿತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸುಮಾರು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಕಾಂಗ್ರೇಸ್ ಪಕ್ಷವೇ ನಮ್ಮ ಉಸಿರು, ಸರ್ವಸ್ವ ಎಂದು ತಿಳಿದುಕೊಂಡು 30-40 ವರ್ಷಗಳಿಂದ ಮಾದಿಗ ಸಮಾಜದವರು ಪಕ್ಷಕ್ಕಾಗಿ ಸಕ್ರೀಯವಾಗಿ, ನಿರಂತರವಾಗಿ ಚುಟವಟಿಕೆಯಲ್ಲಿದ್ದರೂ ಕೂಡ ಜೀವಂತ ಇದ್ದು, ಸತ್ತಂತೆ ಆಗಿದೆ. ವಿಧಾನ ಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾದಿಗರಿಗೆ ಟಿಕೇಟು ನೀಡದೆ ಕಡೆಗಣಿಸಿದ್ದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಈಗಲಾದರೂ ಎಚ್ಚೆತ್ತುಕೊಂಡು ಮಾದಿಗ ಸಮಾಜದ ಪಕ್ಷಕ್ಕಾಗಿ ಸಕ್ರೀಯವಾಗಿ ದುಡಿದವರಿಗೆ ರಾಜ್ಯ ಮಟ್ಟದ ನಿಗಮ ಮಂಡಳಿಯ ಅಧ್ಯಕ್ಷರುಗಳಾಗಿ ಹಾಗೂ ರಾಜ್ಯ ಮಟ್ಟದಲ್ಲಿ ನಾಮನಿರ್ದೇಶನ ಸದಸ್ಯರಾಗಿ ನೇಮಕ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ. ಪಕ್ಷಕ್ಕಾಗಿ ದುಡಿದವರಿಗೆ ಮತ್ತೆ ಮರು ಜೀವ ತುಂಬಿದಂತೆ ಆಗುತ್ತದೆ ಮತ್ತು ಪಕ್ಷವು ಕೂಡ ಬಲಿಷ್ಠವಾದಂತೆ ಆಗುತ್ತದೆ ಎಂದು ಮನವಿ ಮಾಡಿದ್ದಾರೆ

ಜಿಲ್ಲಾಧ್ಯಕ್ಷ ರಾಜು ಎಸ್. ಕಟ್ಟಿಮನಿ, ಮಾದಿಗ ಸಮಾಜದ ಹಿರಿಯ ಮುಖಂಡ ಶ್ರೀಮಂತ ಭಂಡಾರಿ, ಪ್ರಕಾಶ ಮಾಳಗೆ, ಸಚೀನ್, ಆರ್. ಕಟ್ಟಿಮನಿ, ಚಂದಪ್ಪ ಎಲ್. ಕಟ್ಟಿಮನಿ ಸೆರಿದಂತೆ ಸಮಾಜದ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here