ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ತಿರಂಗ ಯಾತ್ರೆ

0
55

ಶಹಾಬಾದ : ಕಲ್ಯಾಣ ಕರ್ನಾಟಕ ಉತ್ಸವ ಮತ್ತು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿಯವರ ಜನ್ಮದಿನದ ಅಂಗವಾಗಿ ರವಿವಾರ ನಗರ ಬಿಜೆಪಿ ಕಾರ್ಯಕರ್ತರು ಶ್ರೀ ರಾಮ ಚೌಕದಿಂದ ಪಕ್ಷದ ಕಾರ್ಯಾಲಯದವರೆಗೆ ತಿರಂಗಾ ಯಾತ್ರೆ ನಡೆಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಚಂದ್ರಕಾಂತ ಗೊಬ್ಬೂರಕರ್ ಮಾತನಾಡಿ, . ಮಹಾನ್ ನಾಯಕರ ತ್ಯಾಗ ಬಲಿದಾನಗಳ ಫಲವಾಗಿ ಹೈದ್ರಬಾದ ಕರ್ನಾಟಕ ಪ್ರದೇಶ ನಿಜಾಮಶಾಹಿ ಕಪಿ ಮುಷ್ಠಿಯಿಂದ ಬಿಡುಗಡೆಗೊಂಡಿತು, ಹೋರಾಟ ಮಾಡಿದ ನಾಯಕರ ರಾಷ್ಟ್ರ ಪ್ರೇಮ ನಮ್ಮೆಲ್ಲರ ಬದುಕಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.

ಬಿಜೆಪಿ ಕಲಬುರಗಿ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಶರ್ಮಾ ಧ್ವಜಾರೋಹಣ ಮಾಡಿದರು.

Contact Your\'s Advertisement; 9902492681

ಪಕ್ಷದ ಉಪಾಧ್ಯಕ್ಷರಾದ ಶಶಿಕಲಾ ಸಜ್ಜನ, ಬಸವರಾಜ ತರನಳ್ಲಿ, ಮಹಾದೇವ ಗೊಬ್ಬೂರಕರ, ಪ್ರಧಾನ ಕಾರ್ಯದರ್ಶಿ ಸದಾನಂದ ಕುಂಬಾರ, ಶಂಕರ ಬಗಾಡೆ, ರತ್ನಾ ಬಿರಾದಾರ, ಪದ್ಮಾ ಕಟಕೆ, ಮ.ಮೊ.ಅಧ್ಯಕ್ಷರಾದ ಜಯಶ್ರೀ ಸೂಡಿ, ಕನಕಪ್ಪ ದಂಡಗುಲಕರ, ನಾಗರಾಜ ಮೆಲಗಿರಿ, ಭಾನುದಾಸ ತುರೆ, ಬಸವರಾಜ ಬಿರಾದಾರ, ನಿಂಗಣ್ಣ ಹುಳಗೊಳಕರ, ಅಶೋಕ ಕಟ್ಟಿ, ಸೂರ್ಯಕಾಂತ ವಾರದ, ರಾಜು ದಂಡಗುಲಕರ, ಯಲ್ಲಪ್ಪ ದಂಡಗುಲಕರ, ರಾಜು ಕೊಬಾಳ, ಸಂಜಯ ವಿಟಕರ್, ಅಮರ ಕೊರೆ, ನಾರಾಯಣ ಕಂದಕೂರ, ಶ್ರೀ ನಿವಾಸ ದೇವಕರ, ಮಂಜುನಾಥ ದೊಡ್ಡಮನಿ, ಜಗದೇವ ಸುಬೆದಾರ, ಮೊಹನ ಗಂಟ್ಲಿ ದತ್ತಾತ್ರೇಯ ಘಂಟಿ, ರಾಮು ಕುಸಾಳೆ, ಶಿವಶರಣಪ್ಪ ಸುಬೆದಾರ, ಮೊಹನ ತಳವಾರ, ಮೊಹನ ಗಂಟ್ಲಿ, ಯಲ್ಲಪ್ಪ ಜಾಲಳ್ಳಿ, ಅಶೋಕ ಟೇಲರ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಸಿದ್ರಾಮ ಕುಸಾಳೆ ಸ್ವಾಗತಿಸಿ ನಿರೂಪಿಸಿದರು,ಸಂದೀಪ ಹದನೂರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here