ಸುರಪುರ: ಕಲ್ಯಾಣ ಕನಾಟಕ ಉತ್ಸವ ಆಚರಣೆ

0
18

ಸುರಪುರ:ತಾಲೂಕು ಆಡಳಿತ ದಿಂದ ನಗರದ ಸರ್ದಾರ ವಲ್ಲಭ ಬಾಯ್ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಯಿತು.

ಮೊದಲಿಗೆ ಸರ್ದಾರ್ ವಲ್ಲಭ ಬಾಯ್ ಪಟೇಲರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಡಾ:ಬಿ.ಆರ್ ಅಂಬೇಡ್ಕರ್,ಮಹಾತ್ಮ ಗಾಂಧಿಯವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು ನಂತರ ತಹಸಿಲ್ದಾರ್ ವಿಜಯಕುಮಾರ ಕೆ ಧ್ವಜಾರೋಹಣ ನೆರವೇರಿಸಿದರು.

Contact Your\'s Advertisement; 9902492681

ನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಸ.ಬಾ.ಪ್ರೌಢಶಾಲೆ ಉಪ ಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರ ಮಾತನಾಡಿ,ಇಂದು ನಾವೆಲ್ಲರು ಕಲ್ಯಾಣ ಕರ್ನಾಟಕ ಉತ್ಸವವಾಗಿ ಆಚರಣೆ ಮಾಡುತ್ತಿರುವ ಈ ದಿನದ ಇತಿಹಾಸ ತುಂಬಾ ರೋಚಕವಾಗಿದೆ,ಭಾರತ 1947ರ ಅಗಸ್ಟ್ 15ಕ್ಕೆ ಸ್ವಾತಂತ್ರ್ಯವಾದರೆ ನಮ್ಮ ಅಂದಿನ ಹೈದರಾಬಾದ ಕರ್ನಾಟಕ ಪ್ರದೇಶ ದೇಶದ ಸ್ವಾತಂತ್ರ್ಯ ನಂತರದ 1 ವರ್ಷ 1 ತಿಂಗಳ ಎರಡು ದಿನಗಳ ನಂತರ ಸ್ವಾತಂತ್ರ್ಯ ಸಿಕ್ಕಿದೆ,ಅಂದು ಹೈದರಬಾದಿನ ನಿಜಾಮರು ಮತ್ತು ರಜಾಕಾರರ ದಬ್ಬಾಳಿಕೆಯಿಂದ ನಮ್ಮ ಭಾಗ ಸ್ವಾತಂತ್ರ್ಯವಿಲ್ಲದೆ ನಿತ್ಯವು ಜನರು ಯಾತನೆಯಲ್ಲಿ ಬದುಕುವ ಸ್ಥಿತಿಯಿತ್ತು,ಮಹಿಳೆಯರ ಮೇಲೆ ಅತ್ಯಾಚಾರ,ಕೊಲೆಗಳು ಕೂಡ ನಿತ್ಯ ನಡೆಯುತ್ತಿರುವಾದ ದೇಶದ ಮೊದಲ ಗೃಹಮಂತ್ರಿಯಾಗಿದ್ದ ಸರ್ದಾರ ವಲ್ಲಭ ಬಾಯ್ ಪಟೇಲ್ ಅವರು ತೆಗೆದುಕೊಂಡ ದಿಟ್ಟ ನಿರ್ಧಾರ ದಿಂದ ಜೊತೆಗೆ ಡಾ. ಬಿ.ಆರ್ ಅಂಬೇಡ್ಕರ್ ಅವರ ಯುಕ್ತಿಯಿಂದಾಗಿ ನಿಜಾಮರನ್ನು ಬಗ್ಗು ಬಡಿದು ನಮ್ಮ ಭಾಗ ಸ್ವಾತಂತ್ರ್ಯಗೊಂಡಿದೆ,ಅಂದಿನಿಂದ ಹೈದರಾಬಾದ ಕರ್ನಾಟಕ ವಿಮೋಚನಾ ದಿನವನ್ನಾಗಿ
ಆಚರಿಸುತ್ತಿರುವಾಗ, 2019ರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರು ಇದನ್ನು ಕಲ್ಯಾಣ ಕರ್ನಾಟಕ ಎಂದು ಕರೆದು ಈ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವವನ್ನಾಗಿ ಆಚರಿಸಿದ್ದು ಅಂದಿನಿಂದ ಈ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ವಿಜಯಕುಮಾರ ಕೆ ಮಾತನಾಡಿ,ನಾವೆಲ್ಲರು ಅಂದಿನ ಮಹನಿಯರುಗಳ ಹೋರಾಟದ ಫಲವಾಗಿ ದೊರೆತ ಸ್ವಾತಂತ್ರ್ಯ ದಿಂದ ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನು ಆಚರಿಸುತ್ತಿದ್ದೇವೆ,ಇದರ ಜೊತೆಗೆ ಈ ಭಾಗದ ಅಭಿವೃಧ್ಧಿಗಾಗಿ ಜಾರಿಗೊಳಿಸಲಾಗಿರುವ ಕಲಂ 371(ಜೆ) ಮೂಲಕ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲಾಗಿದ್ದು,ಎಲ್ಲರು ಇದರ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದ ವೇದಿಕೆ ಮೇಲೆ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್,ಕ್ಷೇತ್ರಶಿಕ್ಷಣಾಧಿಕಾರಿ ವಸಂತಕುಮಾರ ಶಾಬಾದಕರ್,ಪಿ.ಎಸ್.ಈ ಹಣಮಂತ್ರಾಯ ಸಿದ್ದಾಪುರ ಇದ್ದರು.ಕಾರ್ಯಕ್ರಮದಲ್ಲಿ ಮುಖಂಡರಾದ ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ,ವೇಣುಗೋಪಾಲ ನಾಯಕ ಜೇವರ್ಗಿ,ಎಸ್.ಪಿ ಕಾಲೇಜ್ ಪ್ರಾಂಶುಪಾಲ ಎಮ್.ಡಿ ವಾರಿಸ್,ಉಸ್ತಾದ ವಜಾಹತ್ ಹುಸೇನ್ ಸೇರಿದಂತೆ ಅನೇಕ ಮುಖಂಡರು,ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಗೃಹರಕ್ಷಕದಳ,ಎನ್.ಸಿ.ಸಿ ಕೆಡೆಟ್‍ಗಳು ಭಾಗವಹಿಸಿದ್ದರು,ಶಿಕ್ಷಕ ಲಕ್ಷ್ಮಣ ನಾಯಕ ನಿರೂಪಿಸಿದರು,ಪಂಡೀತ ನಿಂಬೂರ ಸ್ವಾಗತಿಸಿದರು,ಬಿ.ಆರ್.ಪಿ ಖಾದರ ಪಟೇಲ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here