ಸಿಎಂಗೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದಿಂದ ಮನವಿ ಸಲ್ಲಿಕೆ

0
237

ಕಲಬುರಗಿ; ನಗರಕ್ಕೆ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ, ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ಭೇಟಿಯಾಗಿ,ಆರೋಗ್ಯ ಇಲಾಖೆಯಲ್ಲಿ ಕ್ಷೇತ್ರ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವಗೆ ಎರಡು, ಮೂರು ತಿಂಗಳಿಗೊಮ್ಮೆ ವೇತನ ಪಾವತಿ ಆಗುತ್ತಿದ್ದು ನಮ್ಮ ಜೀವನ ಸಾಗಿಸಲು ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಿ ಹೇಳಿದಾಗ ಮುಖ್ಯಮಂತ್ರಿಗಳು ಈ ಸಮಸ್ಯೆಗೆ ಸಕಾರಾತ್ಮಕ ಸ್ಪಂದನೆ ನೀಡಿದರು ಹಾಗೂ ಆದಷ್ಟು ಬೇಗನೆ ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಆಶ್ವಾಸನೆ ನೀಡಿದರು.

ಇದೇ ಸಂದರ್ಭದಲ್ಲಿ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರು ಹಾಗೂ ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರು ಆದ ಮಾನ್ಯ ಪ್ರಿಯಾಂಕ ಖರ್ಗೆ ಹಾಗೂ ಕೆ. ಕೆ. ಆರ್‌. ಡಿ. ಬಿ ಅಧ್ಯಕ್ಷರಾದ ಮಾನ್ಯ ಡಾ. ಅಜಯ್ ಸಿಂಗ್ ಹಾಗೂ ಶಾಸಕರಾದ ಮಾನ್ಯ ಎಂ. ವೈ. ಪಾಟೀಲ್, ಮಾನ್ಯ ಅಲ್ಲಂಪ್ರಭು ಪಾಟೀಲ್ ಹಾಗೂ ಮಾನ್ಯ ಬಿ. ಆರ್. ಪಾಟೀಲ್ ರವರು ಕೂಡಾ ಸಕಾರಾತ್ಮಕ ಸ್ಪಂದನೆ ನೀಡಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾದ ಅಂಬೂಜ ಎಂ. ಡಿ. ಕಾರ್ಯದರ್ಶಿಯಾದ ಗಂಗಮ್ಮ ಹಿರೇಮಠ ಮತ್ತು ಖಜಾಂಚಿಯಾದ ಜ್ಯೋತಿ ಲಿಂಗಂಪಲ್ಲಿ ಮತ್ತು ಕಲಬುರ್ಗಿ ತಾಲೂಕಿನ ಅಧ್ಯಕ್ಷರಾದ ಜ್ಯೋತಿಶ್ರೀ, ಖಜಾಂಚಿಯಾದ ಚನ್ನಮ್ಮ, ಶಾರದಾ, ಪ್ರೇಮಾ ಹಾಗೂ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here