ಮೇಯರ್ ವಿಶಾಲ ದರ್ಗಿ ಅಧ್ಯಕ್ಷತೆಯಲ್ಲಿ ಪಾಲಿಕೆ ಸಭೆ

0
34

ಕಲಬುರಗಿ: ಪೂಜ್ಯ ಮಹಾಪೌರರಾದ ವಿಶಾಲ ದರ್ಗಿ ಅವರ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆ ಸಭಾಗಂಣದಲ್ಲಿ ಕಂದಾಯ ಶಾಖೆ, ನೈರ್ಮಲಿಕರಣ ಶಾಖೆ ಹಾಗೂ ಲೆಕ್ಕ ಶಾಖೆಯ ತುರ್ತು ಸಭೆಯನ್ನು ಕರೆದಿದ್ದು, ಸದರಿ ಸಭೆಯಲ್ಲಿ ಪಾಲಿಕೆಯ ಆಸ್ತಿ ತೆರಿಗೆ ಸಂಗ್ರಹಣೆ ಕುಂಠಿತಗೊಂಡಿರುವ ಕಾರಣ ಪಾಲಿಕೆಯ ನೈರ್ಮಲಿಕರಣ ವಾಹನಗಳಿಗೆ ಡಿಸೆಲ್ ಪೂರಕೆಯಾಗದೇ ಇದ್ದುದರಿಂದ ಸ್ಚಚ್ಛತಾ ವಾಹನಗಳ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೇ ಪಾಲಿಕೆಯ ಖಜಾನೆಯು ಬರಿದಾಗಿದ್ದರಿಂದ ಸ್ಚಚ್ಛತಾ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸುಮಾರು ಎರಡು ತಿಂಗಳಿನಿಂದ ಸಂಬಳವನ್ನು ನೀಡರುವುದಿಲ್ಲ. ಹೀಗಾಗಿ ಕೂಡಲೇ ಎಲ್ಲ 55 ವಾರ್ಡ್ ಗಳಲ್ಲಿ ಆಸ್ತಿ ತೆರಿಗೆ ವಸೂಲಾತಿ, ಉದ್ದಿಮೆ ಪರವಾನಿಗೆ, ಜಾಹಿರಾತು ಕ್ಯಾಂಪ್‍ಗಳನ್ನು ಆಯಾ ವಾರ್ಡ್ ಸದಸ್ಯರ ಸಹಯೋಗದೊಂದಿಗೆ ಏರ್ಪಡಿಸಿ ಸ್ಥಳದಲ್ಲಿಯೇ ಆಸ್ತಿ ತೆರಿಗೆ ವಸೂಲಾತಿಯನ್ನು ಸಮರೋಪಾದಿಯಲ್ಲಿ ಮಾಡುವಂತೆ ಆದೇಶಿಸಿದರು.

Contact Your\'s Advertisement; 9902492681

ಈದ ಮಿಲಾದ್ ಹಬ್ಬ ಇರುವ ಪ್ರಯುಕ್ತ ಎಲ್ಲಾ ವಾಹನಗಳು ಸ್ವಚ್ಛತಾ ಕೆಲಸದಲ್ಲಿ ಕಾರ್ಯ ನಿರ್ವಹಿಸಬೇಕೆಂದು ಪರಿಸರ ಅಭಿಯಂತರರಿಗೆ ಆದೇಶಿಸಿದರು. ಅಲ್ಲದೇ ಇನ್ನೂ 15 ದಿನದಲ್ಲಿ ದಸರಾ ಹಬ್ಬ ಬರುವ ಹಿನ್ನಲೆಯಲ್ಲಿ ನಗರದಾದ್ಯಂತ ಸಂಪೂರ್ಣ ಸ್ವಚ್ಛತಾ ಕಾರ್ಯ ಸೂಸ್ಥಿಯಲ್ಲಿರಬೆಕೇಂದು ಸೂಚಿಸಿದರು.

ಪಾಲಿಕೆಯ ತೆರಿಗೆ ವಸೂಲಾತಿ ಮುಂಬರುವ 15 ದಿನಗಳಲ್ಲಿ ರೂ. 15 ಕೋಟಿಯಿಂದ ರೂ.20 ಕೋಟಿವರೆಗೆ ಸಂಗ್ರಹಿಸುವಂತೆ ಆದೇಶಿಸಿದರು. ಸದರಿ ಸಭೆಯಲ್ಲಿ ಉಪ ಆಯುಕ್ತರು (ಕಂದಾಯ) ಹಾಗೂ ಕಂದಾಯ ಶಾಖೆಯ ಅಧಿಕಾರಿ/ಸಿಬ್ಬಂದಿಗಳು, ಮುಖ್ಯಲೆಕ್ಕಾಧಿಕಾರಿಗಳು ಹಾಗೂ ಲೆಕ್ಕ ಶಾಖೆಯ ಅಧಿಕಾರಿ/ಸಿಬ್ಬಂದಿಗಳು ಮತ್ತು ಎಲ್ಲಾ ನೈರ್ಮಲ್ಯ ನಿರೀಕ್ಷಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here