29ಕ್ಕೆ ಕರ್ನಾಟಕ ಬಂದ್ ಗೆ ಬೆಂಬಲಿಸಿ ಉತ್ತರ ಕರ್ನಾಟಕ 13 ಜಿಲ್ಲೆಗಳಲ್ಲಿ ಪ್ರತಿಭಟನೆ: ಶರಣು ಗದ್ದುಗೆ

0
25

ಕಲಬುರಗಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಸೆಪ್ಟೆಂಬರ 29 ರಂದು ಕರ್ನಾಟಕ ಬಂದಗೆ ಕರೆ ನೀಡಿರುವ ಕನ್ನಡಪರ ಸಂಘಟನೆಗಳ ಒಕ್ಕೂಟದ ಹೋರಾಟಕ್ಕೆ ಕರವೇ(ಪ್ರವೀಣ ಶೆಟ್ಟಿ) ವತಿಯಿಂದ ಕರವೇ ಉತ್ತರ ಕರ್ನಾಟಕ ಆದ್ಯಂತ ಎಲ್ಲಾ 13 ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಿಂದ ಸಂಪೂರ್ಣವಾಗಿ ಕರವೇ ಬೆಂಬಲ ನೀಡಲಿದೆ ಎಂದು ಕರವೇ ಉತ್ತರ ಕರ್ನಾಟಕ ಅದ್ಯಕ್ಷರಾದ ಶರಣು ಬಿ ಗದ್ದುಗೆ ಅವರು ತಿಳಿಸಿದ್ದಾರೆ.

ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯ ಸಹಿಸುವುದಿಲ್ಲ.ಕೃಷ್ಣ, ಭೀಮೆ,ತುಂಗಾ,ಯಾವ ನದಿಗಳು ಇರಲಿ ರಕ್ಷಣೆ ನಮ್ಮದಾಗಿದೆ. ಕಾವೇರಿ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿ ಬಾರಿಯೂ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು,ಈ ಸಂಬಂಧ ಸೆಪ್ಟೆಂಬರ 29 ರ ಕರ್ನಾಟಕ ಬಂದಗೆ ನಮ್ಮ ಸಂಪೂರ್ಣ ಬೆಂಬಲವಿದೆ.ಆ ದಿನ ಎಲ್ಲಾ 13 ಜಿಲ್ಲೆಗಳಲ್ಲಿ ಬಂದ್ ಗೆ ಬೆಂಬಲ ನೀಡಿ ಪ್ರತಿಭಟನೆ ನಡೆಸಿ ಕಾರ್ಯಕರ್ತರು ಮನವಿ ಸಲ್ಲಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಗದ್ದುಗೆ ತಿಳಿಸಿದ್ದಾರೆ.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here