ಕಲಬುರಗಿ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ್ಣ) ಜಿಲ್ಲಾಧ್ಯಕ್ಷ ಮಾನಸಿಂಗ್ ಆರ್. ಚವ್ಹಾಣ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಕರ್ನಾಟಕ ಸರ್ಕಾರ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿಲಾಯಿತು.
ಮಾನಸಿಂಗ್ ಆರ್. ಚವ್ಹಾಣ ಮಾತನಾಡಿ ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮುನಿಸಿನಿಂದ ಕಾವೇರಿ ಕಣಿವೆ ಬತ್ತಿರುವ ಕರ್ನಾಟಕದ ಜಲವಾಸ್ತವವನ್ನು ನಿರ್ಲಕ್ಷಿಸಿ ತಮಿಳುನಾಡಿಗೆ ನೀರು ಬಿಡುತ್ತಿರುವ ಕಾವೇರಿ ನಿಯಂತ್ರಣ ಸಮಿತಿ ಹಾಗೂ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರಗಳಿಂದ ದಿನನಿತ್ಯ 5000ಕ್ಯೂಸೆಕ್ ನೀರು ಬಿಡುತ್ತಿರುವುದರಿಂದ ರಾಜ್ಯದ ರೈತರಿಗೆ ತುಂಬಾ ತೋಂದರೆಯಾಗುತ್ತಿದೆ.
ಕಾವೇರಿ ನಿಯಂತ್ರಣ ಸಮಿತಿ ಮತ್ತು ನಿರ್ವಹಣಾ ಪ್ರಾಧಿಕಾರದಲ್ಲಿ ಕೃಷಿ,ಜಲ ತಜ್ಞರಿದ್ದೂ ಅವರಿಗೆ ವಾಸ್ತವ ಪರಿಸ್ಥೆಗಳ ಅರಿವಿದ್ದರೂ ನೀರು ಹಂಚಿಕೆ ಸಂಬಂಧ ಸೂಕ್ತ ತೀರ್ಮಾನಗಳನ್ನು ತೆಗೆದುಕೊಂಡಿರುವುದಿಲ್ಲ. ಹೀಗಾಗಿ ನೀರಿನ ಪ್ರಮಾಣ ಏರಿಸಬೇಕೆಂಬ ತಮಿಳುನಾಡಿನ ವಾದವನ್ನು ಒಪ್ಪಲಾಗುವುದಿಲ್ಲ. ನೀರು ಹಂಚಿಕೆ ಕುರಿತು ಗಣಿತದ ಲೆಕ್ಕಗಳನ್ನು ಹೇಳುವ ಸಂಕಷ್ಟ ಪರಿಸ್ಥಿತಿ ಅರಿತು ಪ್ರಮಾಣ ನಿರ್ಧಾರ ಮಾಡಲಾಗಿದೆ ಎನ್ನುವ ಸುಪ್ರೀಂಕೋರ್ಟ ತಿಳಿಸಿರುವ ಪ್ರಯುಕ್ತ ನೀರು ಹಂಚಿಕೆ ಪ್ರಮಾಣ ಹಿಗ್ಗಿಸಬೇಕೆಂಬ ತಮಿಳುನಾಡು ವಾದದ ಅಂಶಗಳನ್ನು ಆಧ್ಯತೆಗೆ ತೆಗೆದುಕೊಳ್ಳದ ನ್ಯಾಯಪೀಠವು ಕರ್ನಾಟಕಕ್ಕೆ ಅನ್ಯಾಯವೆಸಗಿರುತ್ತದೆ. ಏಕೆಂದರೆ ನಮ್ಮ ರಾಜ್ಯದಲ್ಲಿ ಈಗಾಗಳ ಭರಪರಿಸ್ಥಿತಿ ಇರುವುದು ನಮ್ಮ ಕರ್ನಾಟಕ ರಾಜ್ಯಸರ್ಕಾರಕ್ಕೆ ಮನವರಿಕೆ. ಇದ್ದರು ಸಹ ನೀರನ್ನು ತಮೀಳುನಾಡಿಗೆ ಮಾಡಿ ತಪ್ಪು ಮಾಡಿದೆ.
ಈ ವಿಷಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿರುತ್ತದೆ. ಆದ ಕಾರಣ ಯಾವುದೇ ಪರಿಸ್ಥಿತಿಯಲ್ಲೂ ತಮೀಳುನಾಡಿಗೆ ನೀರು ಬಿಡಲು ಆಗುವಿದಿಲ್ಲ. ನಮ್ಮ ಹೋರಾಟವನ್ನು ದಿಕ್ಕರಿಸಿ ರಾಜ್ಯ ಸರ್ಕಾರವು ನೀರು ಬಿಡುಗಡೆ ಮಾಡಿದ್ದೆ ಆದಲ್ಲಿ ಮುಂದಿನ ದಿನಮಾನಗಳಲ್ಲಿ ಸಂಪೂರ್ಣ ಕರ್ನಾಟಕ ಬಂದ್ ಮಾಡುವ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಮನವಿಪತ್ರವಾಗಿರುತ್ತದೆ. ಎಂದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ ರವರು ಸುಪ್ರೀಂಕೋರ್ಟಿನ ಆದೇಶವನ್ನು ರಾಜ್ಯದ ರೈತರ ‘ಹಿತಶಕ್ತಿ ದೃಷ್ಟಿಯಿಂದ ದಿಕ್ಕಿರಿಸಿ ತಮೀಳುನಾಡಿಗೆ ನೀರನ್ನು ಬಿಡುಗಡ ಮಾಡದೇ ಕನ್ನಡಿಗರ ದಿಟ್ಟತನವನ್ನು ಮರದು. ಕನ್ನಡದ ರೈತರ ಮತ್ತು ಕನ್ನಡದ ಜಲ ನೆಲದ ಕುರಿತು ದಿಟ್ಟತನವನ್ನು ತೋರಿದ ಮಹಾನ್ ವ್ಯಕ್ತಿಗಳಾಗಿದ್ದರು. ಇವರಂತೆ ಈಗಿನ ರಾಜ್ಯ ಸರ್ಕಾರವು ಇಂತಹ ನಿರ್ಧಾರನವು ಕೈಗೊಳ್ಳುವುದರಲ್ಲಿ ತಪ್ಪೇನಿದೆ ಎಂದು ತಿಳಿಸಲು ಇಚ್ಛಿಸುತ್ತೇವೆ.
ಆದ ಕಾರಣ ತಮೀಳುನಾಡಿಗೆ ದಿನನಿತ್ಯ ಬಿಡುಗಡೆ ಮಾಡುತ್ತಿರುವ 5000 ಕ್ಯೂಸೆಕ್ ನೀರನ್ನು ಬಿಡುತ್ತಾ ಹೋದರೆ ಕರ್ನಾಟಕದ ರಾಜ್ಯದ ರೈತರಿಗೆ ಸಂಕಷ್ಟ ಎದುರಾಗುವ ಪರಿಸ್ಥಿತಿ ಇರುತ್ತದೆ. ನಮ್ಮ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ತಮಿಳುನಾಡಿಗೆ ಬಿಡುತ್ತಿರುವ ನೀರಿನ ಮಟ್ಟವನ್ನು ಕಡಿಮೆಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸುನೀಲ ಚವ್ಹಾಣ, ಮಂಜುನಾಥ ಯಾದಗಿರ, ಗೌಸ್ ಶೇಖ, ರವಿ ವಾಲಿಕರ, ಮಹೇಶ, ಸಿದ್ದು, ವಿಜಯಕುಮಾರ, ಬಸವರಾಜ ಸೇರಿದಂತೆ ಇತರರು ಇದ್ದರು.