ಕಲಬುರಗಿ: ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಾಮನೂರು ಶಿವಂಶಂಕರಪ್ಪನವರ ಹೇಳಿಕೆಗೆ ಕಾಂಗ್ರೆಸ್ ಹೈಕಮಾಂಡ್ ಸ್ಪಂದಿಸಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ವೀರಶೈವ ಲಿಂಗಾಯತ ಮಹಾಸಭಾ ಕಲಬುರಗಿ ಜಿಲ್ಲಾ ಯುವ ಘಟಕದ ಗೌರವಾಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ ಆಗ್ರಹಿಸಿದರು.
ಶಾಮನೂರ ಅವರಂಥ ಹಿರಿಯರ ಮಾತನ್ನು ನಿರ್ಲಕ್ಷಿಸಿದರೆ ಅವರ ಧ್ವನಿ ಅಡಗಿಸಲು ಹೊರಟರೆ ಮಠಾದೀಶರು ಲಿಂಗಾಯತ ಸಮಾಜ ಶಾಮನೂರು ಧ್ವನಿಗೆ ಧ್ವನಿ ಕೂಡಿಸಬೆಕಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಧಿಕಾರಿಗಳನ್ನು ಜಾತಿ ಆಧಾರದ ಮೆಲೆ ಹುದ್ದೆ ನೀಡಬಾರದು ಆದರೆ ಯೋಗ್ಯತೆ ಇದ್ದರೂ ಲಿಂಗಾಯತ ಅನ್ನುವ ಕಾರಣದಿಂದ ದೂರವಿಡುವುದು ಯಾವ ನ್ಯಾಯ? ಇದು ಮುಂದುವರಿಯಬಾರದು ಎಂದು ಅವರು ಎಚ್ಚರಿಸಿದರು.
ಜಗದಿಶ ಶೆಟ್ಟರ, ಲಕ್ಷಣ ಸವದಿ ಅವರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಮಹಾಸಬೆಯ ಜವಾಬ್ದಾರಿ ಸ್ಥಾನದಲ್ಲಿದ್ದ ನನಗೆ ಲಿಂಗಾಯತ ಮುಖಂಡರಿಗಾದ ಅನ್ಯಾಯ ಖಂಡಿಸಿ ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಆದರೆ ಇಲ್ಲಿ ಇಡೀ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗುವುದು ನೋಡಿ ಕೇಳಿ ಸುಮ್ಮನೆ ಕೂಡಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಮನೂರು ಹೆಳಿಕೆಯನ್ನು ಪರಿಗಣಿಸಿ ಲಿಂಗಾಯತ ಅಧಿಕಾರಿಗಳಿಗೆ ನ್ಯಾಯ ಒದಗಿಸಬೆಕು ಅಲ್ಲದೆ ಕಲಬುರಗಿ ಜಿಲ್ಲೆಯಲ್ಲೆ ಹಲವಾರು ಐಎಎಸ್ ಐಪಿಎಸ್ ಹುದ್ದೆಗಳಿದ್ದರು ಒಬ್ಬರು ಲಿಂಗಾಯತರಿಲ್ಲಾ ಅದು ಹೋಗಲಿ ಸಿಪಿಐ ಪಿಎಸ್ಐ ಕೂಡಾ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಇದು ಅನ್ಯಾಯದ ಪರಮಾವಧಿಯಾಗಿದೆ. ಇದೆ ಮುಂದುವರೆದರೆ ಕಾಂಗ್ರೇಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಅಖೀಲ ಬಾರತ ವೀರಶೈವ ಲಿಂಗಾಯತ ಮಹಾಸಬಾ ಕಲಬುರಗಿ ಯುವಘಟಕ ಬಸವಕಲ್ಯಾಣದಿಂದ ಬೆಂಗಳೂರುವರೆಗೆ ಸಮಾಜ ಜಾಗೃತಿ ಪಾದಯಾತ್ರೆ ಮಾಡಬೆಕಾಗುತ್ತದೆ ಎಂದು ತಿಳಿಸಿದರು.
ಶ್ರೀನಿವಾಸ ಸರಡಗಿ ಮಹಾಲಕ್ಮೀ ಶಕ್ತಿ ಪೀಠದ ಡಾ. ಅಪ್ಪಾರಾವ ದೇವಿಮುತ್ಯಾ ಮಾತನಾಡಿ, ಈ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿರುವ ಶಾಮನೂರು ಶಿವಶಂಕರಪ್ಪನವರು ದೃಢ ನಿರ್ಧಾರದಿಂದ ಲಿಂಗಾಯತ ಅದಿಕಾರಿಗಳ ಪರವಾಗಿ ದ್ವನಿ ಎತ್ತಿದ್ದಾರೆ ಅವರ ದ್ವನಿಗೆ ದ್ವನಿ ಗೂಡಿಸಬೆಕಾದದ್ಜು ಮಠಾದೀಶರ ಲಿಂಗಾಯತ ಸಮಾಜದ ಮುಖಂಡರ ಕರ್ತವ್ಯ ಹಿಂದೆಯೂ ಕೂಡಾ ಯಡಿಯುರಪ್ಪನವರಿಗೆ ಅನ್ಯಾಯ ಆಗುತ್ತದೆ ಎಂದಾಗ ನಾಡಿನ ಮಠಾದೀಶರೆಲ್ಲರು ಒಂದು ಬಾರಿ ಅಲ್ಲಾ ಹಲವಾರು ಬಾರಿ ಅವರ ಪರ ನಿಂತಿದ್ದೇವೆ ಎಂದರು.
ಈಗ ಶಾಮನೂರು ಮತ್ತು ಲಿಂಗಾಯತ ಅದಿಕಾರಿಗಳ ಪರ ನಿಲ್ಲಬೆಕಾದದ್ದು ನಮ್ಮ ಕರ್ತವ್ಯ ಶಾಮನೂರು ಹೆಳಿಕೆಗೆ ಸರ್ಕಾರ ಮತ್ತು ಹೈಕಮಾಂಡ್ ಸ್ಪಂದಿಸಬೆಕು ನಿರ್ಲಕ್ಷ್ಯ ಮಾಡಬಾರದು ಎಂದು ಶ್ರೀಗಳು ತಿಳಿಸಿದರು. ವೀರಭದ್ರ ಶಿವಾಚಾರ್ಯರು ಶರಣಯ್ಯಾ ಸ್ವಾಮಿ ಹಿರೆಮಠ ನೀಲೂರ ಇದ್ದರು.