ಕಲಬುರಗಿ: ಜಿಲ್ಲೆಯಲ್ಲಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು, ಈ ರೌಡಿಗಳ ವಿರುದ್ಧ ಜನಸಾಮಾನ್ಯರು ದೂರು ನೀಡಲು ಹೋದರೆ ಪೊಲೀಸರು ಎ್ಐಆರ್ ಮಾಡುತ್ತಿಲ್ಲ. ಕೂಡಲೇ ಈ ವ್ಯವಸ್ಥೆ ಬದಲಾಗಬೇಕು. ಎಲ್ಲ ಪೊಲೀಸ್ ಠಾಣೆಗಳಲ್ಲಿ ಪೊಲೀಸರು ಜನಸಾಮಾನ್ಯರು ನೀಡುವ ಎ್ಐಆರ್ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಹೈದ್ರಾಬಾದ್ ಕರ್ನಾಟಕ ಭೋವಿ ಜನಸೇವಾ ಸಂಘದ ಅಧ್ಯಕ್ಷ ಭಗವಾನ ಭೋವಿ ಎಂದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರು ಸಚಿವರ, ಶಾಸಕರ ಮತ್ತು ಇತರ ಜನಪ್ರತಿನಿಧಿಗಳ ಪ್ರಭಾವದಿಂದಾಗಿ ರೌಡಿಗಳ ವಿರುದ್ಧ ಎ್ಐಆರ್ ದಾಖಲಿಸಿಕೊಳ್ಳುತ್ತಿಲ್ಲ. ಕಾಂಗ್ರೆಸ್ ಬೆಂಬಲಿತ ರೌಡಿಗಳನ್ನು ಬಂಧಿಬೇಕಾದರೆ ಬಿಜೆಪಿಯವರು ಹೋರಾಟ ಮಾಡಬೇಕು. ಒಂದು ವೇಳೆ ಕಾಂಗ್ರೆಸ್‌ನವರು ಹೋರಾಟ ಮಾಡಿದರೆ ಬಿಜೆಪಿ ಬೆಂಬಲಿತ ರೌಡಿಗಳನ್ನು ಬಂಧಿಸಿ ಎ್ಐಆರ್ ಪ್ರಕರಣ ದಾಖಲಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಜನಸಾಮಾನ್ಯರು ನೀಡುವ ದೂರು ದಾಖಲಿಸಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲ ಪೊಲೀಸರಿಗೆ ನಿರ್ದೇಶನ ನೀಡಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಅಥವಾ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದತ್ತು ಭೋವಿ, ಭೀಮಶಾ ಪಟ್ಟೇದಾರ, ಅಣ್ಣಾರಾವ ವೈಜಾಪುರೆ, ತುಕಾರಾಮ ಭೋವಿ, ದ್ಯಾವಪ್ಪ ಜಮಾದಾರ, ಸುಭಾಷ ಭೋವಿ ಇತರರಿದ್ದರು.