ವಾಡಿ: ಪಟ್ಟಣದಲ್ಲಿನ ಹದಗೆಟ್ಟ ಪರಿಸರ ನೈರ್ಮಲ್ಯದ ಕುರಿತು ಪುರಸಭೆ ಮುಖ್ಯ ಅಧಿಕಾರಿಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ ನೀರು ಶುದ್ದಿಕರಣಗೊಳ್ಳದೆ ಅಶುದ್ಧ ನೀರು ಪೂರೈಕೆ ಆಗುತ್ತಿದೆ, ಬೀದಿಗಳಲ್ಲಿ,ಚರಂಡಿಗಳಲ್ಲಿ ಕಸ ಜಮಾವಣೆ ಆಗುತ್ತಿದೆ, ಬೀದಿಗಳಲ್ಲಿ ನಾಯಿಗಳ, ಹಂದಿಗಳ ಕಾಟ ಹೆಚ್ಚಾಗಿದೆ,ವಾಹನಗಳ ಓಡಾಟದ ಸಮಸ್ಯೆ ಬಗ್ಗೆ, ಜನ ಸಂದಣಿ ಬಗ್ಗೆ,,ರಾತ್ರಿ ಯಲ್ಲಿ ಬೀದಿ ದೀಪಗಳ ಸಮಸ್ಯೆಗಳ ಬಗ್ಗೆ ಇನ್ನೂ ಹಲವಾರು ಸಮಸ್ಯೆಗಳ ಜೊತೆಗೆ ವಾಡಿ ಪಟ್ಟಣದ ಶುಚಿತ್ವ ಮತ್ತು ಅಭಿವೃದ್ಧಿ ಬಗ್ಗೆ ಸಾಕಷ್ಟು ಬಾರಿ ತಮ್ಮ ಕಚೇರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸುಮಾರು ಸಲ ಮನವಿ ಸಲ್ಲಿಸಿದ್ದರೂ ಯಾವುದೇ ರೀತಿಯ ಕಾರ್ಯಗತ ವಾಗುತ್ತಿಲ್ಲ, ಇಲ್ಲಿ ನಿಮ್ಮ ಪಟ್ಟಣದ,ಕರ್ತವ್ಯದ ಬಗೆಗಿನ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ, ಒಂದು ವಾರದೊಳಗೆ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದಲ್ಲಿ ಪಕ್ಷದ ಕಾರ್ಯಕರ್ತರು ವಾಡಿ ನಾಗರಿಕರೊಂದಿಗೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು, ಆದಷ್ಟು ಬೇಗ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ,ತಾಲ್ಲೂಕ ಉಪಾಧ್ಯಕ್ಷ ವೀರಣ್ಣ ಯಾರಿ, ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜೀರೋಳ್ಳಿ, ರಾಮಚಂದ್ರ ರಡ್ಡಿ, ಭೀಮರಾವ ದೊರೆ, ಮಾಜಿ ಪುರಸಭೆ ಸದಸ್ಯ ರವಿ ನಾಯಕ,ಸತೀಶ್ ಸಾವಳಗಿ,ದೌಲತರಾವ ಚಿತ್ತಾಪುರಕರ್,ಹೀರಾ ನಾಯಕ, ಅಯ್ಯಣ್ಣ ದಂಡೋತಿ,ಸಿದ್ದು ಕಲ್ಲಶೆಟ್ಟಿ,