ಕಲಬುರಗಿ; ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ವ್ಯಾಪ್ತಿಯ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕರ್ನಾಟಕ ಸರ್ಕಾರದ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿರವರು ಕನೆಕ್ಟ್ ಕೆವಿಕೆ ಕಲಬುರಗಿ ಮೊಬೈಲ್ ತಂತ್ರಜ್ಞಾನವನ್ನು ಉದ್ಘಾಟಿಸಿದರು.
ರೈತರು ತಮ್ಮ ಸ್ಮಾರ್ಟ ಪೋನ್ ಮೂಲಕ ಕೆವಿಕೆಯಲ್ಲಿರುವ ಕೃಷಿ ಮಾಹಿತಿಯ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಿವಿಧ ಕೃಷಿ ಸಂಬಂಧಿತ ತಾಂತ್ರಜ್ಞಾನವನ್ನು ಪಡೆದುಕೊಳ್ಳಬಹುದಾಗಿದೆ.ಅಲ್ಲಂ ಪ್ರಭು ಪಾಟೀಲ್, ಶಾಸಕರು, ದಕ್ಷಿಣ, ಆಳಂದ ಶಾಸಕರಾದ ಬಿ.ಆರ್. ಪಾಟೀಲ್, ಡಾ. ಎಂ. ಹನುಮಂತಪ್ಪ, ಕುಲಪತಿಗಳು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಡಾ. ಎಸ್.ಬಿ. ಗೌಡಪ್ಪಾ, ವಿಸ್ತರಣಾ ನಿರ್ದೇಶಕರು, ಮಲ್ಲಿಕಾರ್ಜುನ ಡಿ. ವ್ಯವಸ್ಥಾಪನ ಮಂಡಳಿಯ ಸದಸ್ಯರು ಕೃ.ವಿ.ವಿ. ರಾಯಚೂರು, ಡಾ. ಎಂ.ಎಂ. ಧನೋಜಿ, ಡೀನ್(ಕೃಷಿ) ಕೃಷಿ ಮಹಾವಿದ್ಯಾಲಯ, ಡಾ. ರಾಜು ಜಿ. ತೆಗ್ಗಳ್ಳಿ, ಮುಖ್ಯಸ್ಥರು, ಕೆವಿಕೆ, ಡಾ. ಸಿದ್ರಾಮಪ್ಪಾ ಪಾಟೀಲ್, ದಂಗಾಪೂರ್, ಅದ್ಯಕ್ಷರು ಕೃಷಿಕ ಸಮಾಜ, ಬೆಂಗಳೂರು ಕೃಷಿ ನಿರ್ದೇಶಕ, ಜಿ.ಟಿ ಪುತ್ರ, ಆಪರ ಕೃಷಿ ನಿರ್ದೇಶಕ ವೆಂಕಟರಾಮ್ ರೆಡ್ಡಿ, ಆಂಧೋನಿಯ ಇಮಿನ್ಯೂಯಲ್, ಜೀಯಾಉಲ್ಲಾ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯ ಕೃಷಿ ಅಧಿಕಾರಿಗಳು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸಮದ್ ಪಟೇಲ್, ಜಿಲ್ಲೆಯ ವಿವಿಧ ಪ್ರಗತಿಪರ ರೈತರು, ರೈತ ಮಹಿಳೆಯರು, ಆವರಣದ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ, ಕೃಷಿ ವಿದ್ಯಾರ್ಥಿಗಳು, ವಿವಿಧ ಸ್ವಸಹಾಯ ಸಂಘಗಳು, ಕೃಷಿ ವಸ್ತು ಪ್ರದರ್ಶನ ಮತ್ತು ಕನೆಕ್ಟ್ ಕೆವಿಕೆಯ ಸಮಾರಂಭದಲ್ಲಿ ಭಾಗವಹಿಸಿದರು.