ಕಲಬುರಗಿ: ಮಾಜಿ ಸಂಸದ, ಎಚ್ಕೆಇ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಜಿ.ಜವಳಿ ಅವರ ಪತ್ನಿ ಲಲಿತಾ ಜವಳಿ (೭೬) ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.
ಮೃತರು ಪತಿ ಬಿ.ಜಿ.ಜವಳಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು, ಒಬ್ಬ ಸಹೋದರಿ, ಸಹೋದರ ಮಾಜಿ ಶಾಸಕ ಕೈಲಾಸನಾಥ ಪಾಟೀಲ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಲಲಿತಾ ಅವರು ಮಾಜಿ ಸಿಎಂ ದಿವಂಗತ ವೀರೇಂದ್ರ ಪಾಟೀಲ್ ಅವರ ಸುಪುತ್ರಿಯಾಗಿದ್ದರು. ಮೃತರ ಅಂತ್ಯಕ್ರಿಯೆ ಶುಕ್ರವಾರ ನಾಳೆ ಮಧ್ಯಾಹ್ನ ೨ ಗಂಟೆಗೆ ಕಲಬುರಗಿ ತಾಲೂಕಿನ ಪಟ್ಟಣದ ಟೋಲ್ ಫ್ಲಾಜ್ ಬಳಿಯಲ್ಲಿರುವ ಜವಳಿ ಫಾರ್ಮನಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.