ಕಲಬುರಗಿ: ಬಹುಜನ ಹೋರಾಟ ಸಮಿತಿ ಜಿಲ್ಲಾ ಸಮಿತಿಯ ವತಿಯಿಂದ ನಗರದ ಕನ್ನಡ ಭವನದಲ್ಲಿ ಮಾನ್ಯವರ ದಾದಾ ಸಾಹೇಬ್ ಕಾನ್ಸಿರಾಮ್ ರವರ 17 ನೇ ಪುಣ್ಯ ಸ್ಮರಣೆ ಅಂಗವಾಗಿ ಆಚರಣೆ ಮಾಡಲಾಗಿದೆ.
ವಿಭಾಗೀಯ ಅಧ್ಯಕ್ಷ ವಿಜಯಕುಮಾರ್ ಅಂಕಲಗಿ, ಜಿಲ್ಲಾ ಅಧ್ಯಕ್ಷ ರವಿ ಆರ್.ಕೋರಿ, ಉಪಾಧ್ಯಕ್ಷ ಅಂಬಾರಾಯ ದಸ್ತಾಪೂರ, ಪ್ರಧಾನ ಕಾರ್ಯದರ್ಶಿ ಮೀಲಿಂದ ಕಣಮಸ ಸೇರಿದಂತೆ ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.