ಕಲಬುರಗಿ: ಶೌರ್ಯ ಜಾಗರಣಾ ರಥಯಾತ್ರೆ ನಿಮಿತ್ತ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮಹಾನಗರ ಉತ್ತರ ಕರ್ನಾಟಕ ವತಿಯಿಂದ ಅ. 13ರಂದು (ಶುಕ್ರವಾರ) ಯುವಕರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಗೋ ಸೇವಾ ಪ್ರಮುಖ ಶೇಷಾದ್ರಿ ಕುಲಕರ್ಣಿ ತಿಳಿಸಿದರು.
ಶೌರ್ಯ ಜಾಗರಣಾ ರಥಯಾತ್ರೆ ಶುಕ್ರವಾರ ನಗರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ನಗರದ ಹೊರ ವಲಯದಲ್ಲಿರುವ ರಾಮತೀರ್ಥದಿಂದ ಚೌಕ್ ಪೊಲೀಸ್ ಸ್ಟೇಶನ್ ವೃತ್ತದವರೆಗೆ ಬೈಕ್ ರ್ಯಾಲಿ ನಡೆಸಲಾಗುವುದು. ಅಲ್ಲಿಂದ ಸಂಜೆ 6 ಗಂಟೆಗೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಸಮಾವೇಶ ಸ್ಥಳದವರೆಗೆ ಶೋಬಾ ಯಾತ್ರೆ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಾಳಾ ಗುರುಮೂರ್ತಿ ಶಿವಾಚಾರ್ಯರು, ದೇವಪುರ ಸ್ಟೇಶನ್ ಬಬಲಾದನ ಶಿವಮೂರ್ತಿ ಶಿವಾಚಾರ್ಯರು, ಚಿನ್ಮಯಗಿರಿಯ ವೀರಮಹಾಂತ ಶಿವಾಚಾರ್ಯರು, ಮಾಶಾಳ ಮರುಳಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದು, ಸಮಾಜ ಚಿಂತಕ ಆದರ್ಶ ಗೋಖಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ ಪ್ರಂತ ಉಪಾಧ್ಯಕ್ಷ ಲಿಂಗರಾಜಪ್ಪ ಅಪ್ಪ, ಸುಭಾಷ ಕಾಂಬಳೆ, ಸುರೇಶ ಹೇರೂರ, ಲಕ್ಷ್ಮಣರಾವ ಪೊಲೀಸ್ ಪಾಟೀಲ, ಪುಂಡಲೀಕ ದಳವಾಯಿ, ಬಸವರಾಜ ಸುಗೂರ ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದರು.
ರ್ಶರೀಮಂತ ನವಲದಿ, ಅಶ್ವಿನ್ಕುಮಾರ, ಪ್ರಶಾಂತ ಗುಡ್ಡಾ, ಸತೀಶ ಮಾಹು, ಶಿವರಾಜ ಸಂಗೋಳಗಿ ಇತರರಿದ್ದರು.