ಕಲಬುರಗಿ: ಚಿತ್ತಾಪುರ ತಾಲೂಕಿನ ಹಲಕರ್ಟಾ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರ ಅವರ ಭಾವಚಿತ್ರಕ್ಕೆ ಅವಮಾನ ಮಾಡಿದ ಘಟನೆಯನ್ನು ರಾಷ್ಟ್ರೀಯ ಬಸವದಳ ಅಕ್ಕನಾಗಲಾಂಬಿಕ ಮಹಿಳಾ ಗಣ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಮಹಿಳಾ ಗಣದ ಸದಸ್ಯರು ಘಟನೆಯಿಂದ ಬಸವಾಭಿಮಾನಿಗಳಿಗೆ ಅಪಾರ ನೋವಾಗಿದ್ದು, ಸಮಸಮಾಜ ನಿರ್ಮಾಣದ ಕನಸು ಹೊತ್ತು ಕ್ರಾಂತಿ ಮಾಡಿದ ಕ್ರಾಂತಿ ಪುರುಷನ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ಬಸವನ ನಾಡಿಗೆ ಮಾಡಿದ ಅವಮಾನವಾಗಿದೆ. ಈ ಕೂಡಲೇ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಜಿಲ್ಲೆಯಲ್ಲಿರುವ ಬಸವಣ್ಣನವರ ಪ್ರತಿಮೆಗಳಿಗೆ ಹಾಗೂ ಭಾವಚಿತ್ರಗಳಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದ ಸದಸ್ಯರು ಬಸವಣ್ಣನವರ ವಚನಗಳನ್ನು ಹಾಗೂ ಅವರ ನಡೆಸಿದ ಹೋರಾಟದ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವ ಸಲುವಾಗಿ ಸರ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಗದೇವಿ ಚಟ್ಟಿ ,ಜ್ಯೋತಿ ಕಟಾಳೆ, ಸಂಗೀತಾ ಉಳ್ಳಾಗಡ್ಡಿ, ಬಸವಶ್ರೀ ಕಟಾಳೆ,ದೀಪಾಲಿ ಬಿರಾದರ,ಶಾಂತಾ ವಾಲಿ,ಕವಿತಾ ಲೊಡ್ಡಣ , ಶರಣರಾದ ಪ್ರಶಾಂತ ಕಟಾಳೆ ,ವೀರಣ್ಣ ಲೊಡ್ಡಣ ಸೇರಿದಂತೆ ರಾಷ್ಟ್ರೀಯ ಬಸವದಳ ಅಕ್ಕನಾಗಲಾಂಬಿಕಾ ಮಹಿಳಾ ಗಣದ ಶರಣರೆಯರು ಉಪಸ್ಥಿತರಿದ್ದರು.