ಶಹಾಬಾದ: ನಾಡಿನ ಹೆಸರಾಂತ ಆಹಾರ ತಜ್ಞರು, ಪ್ರಗತಿ ಪರಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರಾದ ಕೆ.ಸಿ. ರಘು ಅವರ ನಿಧನಕ್ಕೆ ಎಐಡಿವೈಓ ಕರ್ನಾಟಕ ರಾಜ್ಯ ಸಮಿತಿಯ ತೀವ್ರ ಸಂತಾಪವನ್ನು ಸೂಚಿಸಿದೆ.
ಸಮಾಜದಲ್ಲಿನ ಸಮಕಾಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಡಾ. ಕೆಸಿ ರಘು ಅವರು ಬಡವರ, ದುಡಿಯುವ ವರ್ಗದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದರು. ದೇಶದ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ ಹಾಗೆ ಸರ್ಕಾರಗಳ ಆರ್ಥಿಕ ನೀತಿಗಳ ಬಗ್ಗೆ ಸ್ಪಷ್ಟ ಮತ್ತು ವಸ್ತು ನಿಷ್ಠ ವಿಶ್ಲೇಷಣೆಯನ್ನು ನೀಡುತ್ತಿದ್ದ ಅವರು ಪ್ರಜಾತಾಂತ್ರಿಕ ಮತ್ತು ಧರ್ಮ ನಿರಪೇಕ್ಷ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದ ರೀತಿ ಅನನ್ಯವಾಗಿತ್ತು.
ಎಐಡಿವೈಓ ಸಂಘಟನೆಯ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಮಾಜದಲ್ಲಿನ ಅನ್ಯಾಯಗಳ ವಿರುದ್ಧ ಹೋರಾಡಲು ಯುವಜನರನ್ನು ಪ್ರೇರೇಪಿಸುತ್ತಿದ್ದರು. ಅವರ ನಿಧನವು ಪ್ರಗತಿಪರ ಹೋರಾಟಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದಿದ್ದಾರೆ.
ಶರಣಪ್ಪ ಉದ್ಬಾಳ ರಾಜ್ಯಾಧ್ಯಕ್ಷರು, ಸಿದ್ದಲಿಂಗ ಬಾಗೇವಾಡಿ ರಾಜ್ಯ ಕಾರ್ಯದರ್ಶಿ, ರಮೇಶ ದೇವಕರ್ ಎಐಡಿವೈಓ ಕಾರ್ಯದರ್ಶಿಗಳು ಸಂತಾಪ ಸೂಚಿಸಿದ್ದಾರೆ.