ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕುಡಾ 33ನೇ ವರ್ಷದ ಪುರಾಣ ಹಾಗೂ ದಸರಾ ಮಹೋತ್ಸವ ಪ್ರಯುಕ್ತ ಜೈ ಭವಾನಿ ಗ್ರಾಮೀಣ ಅಭಿವೃದ್ದಿ ಸೇವಾ ಸಂಘದ ವತಿಯಿಂದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ದಿಗ್ಗಾವಿ ಮಠದ ಶ್ರಿಗಳಿಂದ ಬಹುಮಾನ ವಿತರಿಸಲಾಯಿತು.
ಅ.19 ರಂದು ಗಿರಿಜಾ ಕಲ್ಯಾಣೋತ್ಸವದ ಪ್ರಯುಕ್ತ ಮಹಾಪ್ರಸಾದ ಇರುತ್ತದೆ ಹಾಗೂ ಜೈ ಭವಾನಿ ಗ್ರಾಮೀಣ ಅಭಿವೃದ್ದಿ ಸೇವಾ ಸಂಘದ ವತಿಯಿಂದ ಲಿಂಗೈಕ್ಯ ಶ್ರೀ ವೆ ಮೂ ನಾಗಯ್ಯ ಸ್ವಾಮಿ ಗಣಚಾರಿಮಠ ಅವರ ಸ್ಮರಣರ್ಥ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುತ್ತದೆ. 21 ರಂದು ಸಂಘದ ವತಿಯಿಂದ 501 ಜನ ಮುತ್ತೈದೆಯರಿಗೆ ಉಡಿತುಂಬುವ ಹಾಗೂ ಮಹಾಪ್ರಸಾದ ಸೇವೆ ಜರುಗುತ್ತದೆ.
23 ರಂದು ಪುರಾಣ ಮಹಮಂಗಳ ಹಾಗೂ ದೇವಿಯ ರಥೋತ್ಸವ ಜರುಗಲಿದೆ ಎಂದು ಗಣಾಚಾರಿ ಮಠದ ಗುರುಗಳಾದ ಶ್ರೀ ವೀರೇಶ್ ಸ್ವಾಮಿಜಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಾಗರ್ ಡೆಂಗಿಮಠ ಕಿರಣ್ ಕೊರಬಾ ಗುರು ಹೂಗಾರ್ ಶಾಂತು ಇಟಗಿ ಹರೀಶ್ ವಿಜಾಪುರ ಆಕಾಶ್ ಹೂಗಾರ್ ಮಹೇಶ್ ಮಡಿವಾಳ ನಿಕೀಲ್ ವಾರದ ಪರಮೇಶ್ವರ ಕರದಳ್ಳಿ ಇದ್ದರು.