ನಟರಾಜ ಹುಳಿಯಾರ ಕ್ಷಮೆಯಾಚಿಸಲು ಆಗ್ರಹ

0
22

ಕಲಬುರಗಿ: ಮಾಕ್ರ್ಸ್‍ವಾದ ಇಲ್ಲದೆ ಅಂಬೇಡ್ಕರ್ ವಾದವಿಲ್ಲ ಎಂದು ಹೇಳಿರುವ ನಟರಾಜ ಹುಳಿಯಾರ ಅವರು ಚರ್ಚೆ ಮೂಲಕ ಸಾಬೀತು ಮಾಡಬೇಕು ಅಥವಾ ಕ್ಷಮೆ ಕೇಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಆಗ್ರಹಿಸಿದರು.

ಇತ್ತೀಚೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್‍ನಲ್ಲಿ ನಡೆದ ಜೈ ಪ್ರಕಾಶ ನಾರಾಯಣ ಅವರ 122ನೇ ಜನ್ಮದಿನ ಹಾಗೂ ಜೆ.ಪಿ.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುವಾಗ ನಟರಾಜ ಹುಳಿಯಾರ ಈ ಮಾತುಗಳನ್ನು ಹೇಳಿದ್ದಾರೆ. ಮಾಕ್ರ್ಸ್‍ವಾದ ಶ್ರೇಷ್ಠ ಎನ್ನುವ ಧಾಟಿಯಲ್ಲಿ ಮಾತನಾಡಿದ್ದಾರೆ. ಮಾಕ್ರ್ಸ್‍ವಾದ ಶ್ರೇಷ್ಠ ಎಂದು ಹೇಳಿದರೇ ನಮ್ಮ ತಕರಾರಿಲ್ಲ ಆದರೆ ಮಾಕ್ರ್ಸ್‍ವಾದ ಇಲ್ಲದೆ ಅಂಬೇಡ್ಕರ್ ವಾದವಿಲ್ಲ ಎಂದು ಹೇಳುವುದನ್ನು ದಸಂಸ ಖಂಡಿಸುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಬುದ್ಧನ ಸಮಗ್ರ ಬೋಧನೆಯ ಸಾರವೇ ಸಮಾಜವಾದದಿಂದ ಪ್ರೇರಣೆ ಪಡೆದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಾದವಾಗಿದ್ದು, ಅದರಲ್ಲಿ ಜಾತಿ ರಹಿತ ಸಮಾಜ ಕಟ್ಟುವ ಕನಸು ಕಂಡಿದ್ದರು. ಬಂಡವಾಳವಾದ, ಕಮ್ಯೂನಿಜಂ ಹಾಗೂ ಸಮಾಜವಾದಗಳನ್ನು ಮೂರು ಪರ್ಯಾಯ ಎಂದು ಅಂಬೇಡ್ಕರ್ ಅವರು ಪರಿಗಣಿಸಿದ್ದರು. ಆದ್ದರಿಂದ ಇಂದಿಗೂ ಜಗತ್ತಿನ ಯಾವ ಪ್ರದೇಶದಲ್ಲಿ ಕಾರ್ಮಿಕ ಹೋರಟ ನಡೆದರೆ ಅಲ್ಲಿ ಅಂಬೇಡ್ಕರ್ ವಾದ ನೆನೆಯಲಾಗುತ್ತದೆ. ಇದರಂತೆ ಮಹಿಳೆಯರ, ರೈತರ, ಯುವಜನತೆ ಹಾಗೂ ಪ್ರಜಾಪ್ರಭುತ್ವದ ಉಳಿವಿನ ಹೋರಾಟದಲ್ಲಿ ಅಂಬೇಡ್ಕರ್ ವಾದ ಇರುತ್ತದೆ ಎಂದು ಹೇಳಿದ ಅವರು, ಇದೆಲ್ಲವರನ್ನು ಅರಿಯದೆ ನಟರಾಜ ಹುಳಿಯಾರ ಅವರು ತಮ್ಮ ವಾದವನ್ನು ಹೇಳಿದ್ದಾರೆ. ಇದರ ಬಗ್ಗೆ ಚರ್ಚೆ ನಡೆಸಲು ನಾವು ಬಹಿರಂಗ ಸಭೆ ಆಯೋಜಿಸುತ್ತೇವೆ ಬಂದು ಭಾಗವಹಿಸಬಹುದು ಅಥವಾ ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ, ಜಿಲ್ಲ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಖನ್ನಾಘಿ, ಜಿಲ್ಲಾ ಖಜಾಂಚಿ ಸೂರ್ಯಕಾಂತ ಆಜಾದಪೂರ, ನಗರ ಸಂಚಾಲಕ ಶಿವಕುಮಾರ ಕೊರಳ್ಳಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here