ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಬುಧವಾರ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು.
ಇಜೇರಿ ಮತ್ತು ಯಡ್ರಾಮಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಅಲ್ಲಿನ ಎಲ್ಲಾ ಇಲಾಖೆಗಳಿಗೆ ಭೇಟಿ ಮಾಡಿ ಅಲ್ಲಿನ ಸಮಸ್ಯೆ ಬಗ್ಗೆ ರೈತರ ಜೊತೆ ಮತ್ತು ಹೋರಾಟಗಾರರ ಜೊತೆ ಚರ್ಚೆ ನಡೆಸಿದರು.
ಇಜೇರಿ ಮತ್ತು ಯಡ್ರಾಮಿ ಹೋಬಳಿಯ ಬೆಳೆ ಹಾನಿಯಾದ ಬಗ್ಗೆ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ರೈತ ಸಂಪರ್ಕ ಕೇಂದ್ರ, ನಾಡಕಛೇರಿ ಮತ್ತು ತಹಶೀಲ್ ಕಚೇರಿ, ಅಂಗನವಾಡಿ ಕೇಂದ್ರಗಳ ಮಕ್ಕಳೊಂದಿಗೆ ಮಾತು ಕತೆ ನಡೆಸುವ ಮೂಲಕ ಮಕ್ಕಳೊಂದಿಗೆ ಸಮಯ ಕಳೆಯುವ ವ್ಯವಸ್ಥೆಯ ಬಗ್ಗೆ ತಿಳಿಸುದುಕೊಂಡಿರು.
ನಂತರ ಮಳ್ಳಿ ಸಕ್ಕರೆ ಕಾರ್ಖಾನೆ ಗೆ ಭೇಟಿದ ಜಿಲ್ಲಾಧಿಕಾರಿಗಳಿಗೆ ಎಸಿ ಹಾಗೂ ಯಡ್ರಾಮಿ ತಶೀಲ್ದಾರ್ ಶಶಿಕಲಾ ಪಾದಗಟ್ಟೆ ಮತ್ತು ಎಲ್ಲಾ ಇಲಾಖೆಯ ಸಿಬ್ಬಂದಿಗಳು ಮತ್ತು ಯಡ್ರಾಮಿ ಮತ್ತು ಇಜೇರಿ ಗ್ರಾಮದ ರೈತರು ಮತ್ತು ಸಾರ್ವಜನಿಕರು ಇದ್ದರು.