ಕಾಲುವೆಗೆ ನೀರು ವಿದ್ಯುತ್ ಸಮಸ್ಯೆಗೆ ಬೇಸತ್ತು ರೈತರಿಂದ ರಾಜ್ಯ ಹೆದ್ದಾರಿ ಬಂದ್

0
13

ಸುರಪುರ: ತಾಲೂಕಿನ ವಿವಿಧ ಗ್ರಾಮಗಳ ಕೊನೆ ಭಾಗದ ರೈತರ ಜಮೀನುಗಳಿಗೆ ಕಾಲುವೆಯ ನೀರು ಬರುತ್ತಿಲ್ಲ ಹಾಗೂ ನಿರಂತರವಾಗಿ ವಿದ್ಯುತ್ ಸಮಸ್ಯೆಗೆ ಬೇಸತ್ತ ರೈತರು ಕೃಷ್ಣಾಪುರ ಬಳಿಯಲ್ಲಿ ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆಗೆ ಮುಂದಾದ ಘಟನೆ ನಡೆಯಿತು.

ತಾಲೂಕಿನ ಕೃಷ್ಣಾಪುರ,ಬಿಜಾಸಪುರ,ಮಂಡಗಳ್ಳಿ,ಹೆಮನೂರ,ಶಖಾಪುರ ಸೇರಿದಂತೆ ಅನೇಕ ಗ್ರಾಮಗಳ ನೂರಾರು ರೈತರು ಬೆಳಿಗ್ಗೆಯೇ ಕೃಷ್ಣಾಪುರದ ಕಾಡಾ ಕಚೇರಿಗೆ ಆಗಮಿಸಿ ಅಧಿಕಾರಿಗಳು ಇನ್ನೂ ಬಂದಿಲ್ಲದ ಕಾರಣ ರಸ್ತೆಗೆ ಬಂದು ಪ್ರತಿಭಟನೆಗೆ ಮುಂದಾದರು.ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ಕಿಲೋ ಮೀಟರ್‍ಗಟ್ಟಲೆ ವಾಹನಗಳ ಸಾಲು ನಿಂತು ಪ್ರಯಾಣಿಕರು ಪರದಾಡಿದರು.

Contact Your\'s Advertisement; 9902492681

ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಸುರಪುರ ಠಾಣೆ ಪೊಲೀಸ್ ಇನ್ಸ್ಪೇಕ್ಟರ್ ಆನಂದ ವಾಗಮೊಡೆ ಆಗಮಿಸಿ ಹೋರಾಟಗಾರರ ಮನವೊಲಿಸುವ ಪ್ರಯತ್ನ ಮಾಡಿದರು,ಸಮಾಧಾನಗೊಳ್ಳದ ರೈತರು ಸರಕಾರದ ವಿರುದ್ಧ ಘೋಷಣೆಗಳ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಒಂದು ಹಂತದಲ್ಲಿ ವಿಷದ ಬಾಟಲಿ ಹಿಡಿದು ಬಂದಿದ್ದ ರೈತರು ಬಾಟಲಿ ಕೈಗೆತ್ತಿಕೊಂಡಿದ್ದು ನೋಡಿ ಪೊಲೀಸರು ಆತಂಕಗೊಂಡರು,ನಂತರ ವಿಷದ ಬಾಟಲಿಯನ್ನು ಕಿತ್ತುಕೊಂಡರು.

ನಂತರ ಸ್ಥಳಕ್ಕೆ ತಹಸಿಲ್ದಾರ್ ಕೆ.ವಿಜಯಕುಮಾರ್ ಆಗಮಿಸಿ ರೈತರ ಮನವಿ ಆಲಿಸಿ,ವಿದ್ಯುತ್ ಸರಿಯಾಗಿ ನೀಡಲು ಕ್ರಮ ಕೈಗೊಳ್ಳಲು ತಿಳಿಸುತ್ತೇನೆ,ಮತ್ತು ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ಬರಲು ಗೇಟ್‍ಗಳಲ್ಲಿ ಪೊಲೀಸರ ನಿಯೋಜಿಸಿ ನೀರು ಹರಿಸುವಂತೆ ಕ್ರಮ ಕೈಗೊಳ್ಳುವುದಾಗಿ ಭರಸವೆ ನೀಡಿದ ನಂತರ ಮನವಿ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಬಸವರಾಜ ಪಡಕೋಟೆ,ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಶಾಂತರಡ್ಡಿ ಪಾಟೀಲ್ ಬಿಜಾಸಪುರ,ಮಲ್ಕಣ್ಣ ಚಿಂತಿ,ಕರವೇ ಪ್ರವೀಣಶೆಟ್ಟಿ ಬಣದ ತಾಲೂಕು ಅಧ್ಯಕ್ಷ ನಿಂಗಪ್ಪ ನಾಯಕ, ಶಿವರುದ್ರ ಉಳ್ಳಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here