ಸುರಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟ ದಿಂದ ನಗರದ ಬಸ್ ನಿಲ್ದಾಣದ ಬಳಿಯ ಡಾ:ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ,ತಾಲೂಕಿನ ವಾಗಣಗೇರ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳಲ್ಲಿನ ಉದ್ಯೋಗ ಖಾತ್ರಿ ಕಾಮಗಾರಿಗಳಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆ ನಡೆಸಬೇಕು,ಅರಣ್ಯ ಇಲಾಖೆಯಿಂದ ಮಾಡಿರುವ ಉದ್ಯೋಗ ಖಾತ್ರಿ ಕಾಮಗಾರಿಗಳ ಪರಿಶೀಲನೆ ಮಾಡಬೇಕು,ಉದ್ಯೋಗ ಖಾತ್ರಿ ಯೋಜನೆಯಡಿ ರೇಷ್ಮೆ ಇಲಾಕೆ,ಕೃಷಿ ಇಲಾಖೆ, ಪಂಚಾಯತ್ ರಾಜ್ ಇಲಾಖೆಗಳು 2021 ರಿಂದ 23ರ ವರೆಗೆ ಮಾಡಿರುವ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಬೇಕು,ಸಮಾಜ ಕಲ್ಯಾಣ ಇಲಾಖೆ,ಪರಿಶಿಷ್ಟ ಪಂಗಡಗಳ ಇಲಾಖೆ,ಹಿಂದುಳಿದ ವರ್ಗಗಳ ಇಲಾಖೆಯಿಂದ ಮಂಜೂರಾಗಿರುವ ಸಮುದಾಯ ಭವನಗಳ ನಿರ್ಮಾಣದ ತನಿಖೆ ಮಾಡಬೇಕು.
ತಾಲೂಕಿನಲ್ಲಿ ನಿರ್ಮಿಸಿರುವ ವಾಲ್ಮೀಕಿ ಭವನಗಳನ್ನು ಲ್ಯಾಂಡ್ ಆರ್ಮಿ ಇಲಾಖೆಯವರು ಇನ್ನೂ ನಿರ್ಮಾಣ ಮಾಡಿಲ್ಲ,ಆದರೆ ಅನುದಾನ ಲೂಟಿಯಾಗಿದೆ ತನಿಖೆ ಮಾಡಬೇಕು,ಗ್ರಾಮ ಒನ್,ಕರ್ನಾಟಕ ಒನ್ ಕೇಂದ್ರಗಳಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದು ಕಡಿವಾಣ ಹಾಕಬೇಕು,ಜೆಸ್ಕಾಂ ಇಲಾಖೆ ಉಪ ವಿಭಾಗ ನಿರಂತರ ಜ್ಯೋತಿ,ಭಾಗ್ಯ ಜ್ಯೋತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆಯ ತನಿಖೆ ನಡೆಸಬೇಕು ಮತ್ತು ಮತಕ್ಷೇತ್ರದ ಕೈಗಾರಿಕೆ ಇಲಾಖೆ ವ್ಯಾಪ್ತಿಯ ಪಿ.ಎಮ್.ಇ.ಜಿ.ಪಿ ಇನ್ನಿತರ ಸ್ಕೀಮ್‍ಗಳ ಸಾಲ ನೀಡಿದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದರು.
ನಂತರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಕಚೇರಿ ಕಂದಾಯ ನಿರೀಕ್ಷಕರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಮೌನೇಶ,ಜಿಲ್ಲಾ ಕಾರ್ಯದರ್ಶಿ ದವಲಸಾಬ್,ಜಿಲ್ಲಾ ಕಾರ್ಯಾಧ್ಯಕ್ಷ ರಮೇಶಗೌಡ,ದೇವಪ್ಪ ರತ್ತಾಳ,ನಿಂಗಪ್ಪ ಸೇರಿದಂತೆ ಅನೇಕರಿದ್ದರು.