ಶಹಾಬಾದ: ಮಿಸೈಲ್ ಮ್ಯಾನ ಎಂದೇ ಖ್ಯಾತರಾಗಿದ್ದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಹುದ್ದೆಗೆ ಏರಿದರೂ ಜನಸಾಮನ್ಯರ ಜೊತೆ ಬೆರೆತು ಮಕ್ಕಳೊಂದಿಗೆ ಬೆರೆತು ಮಾತನಾಡುತ್ತಿದ್ದ ಅಬ್ದುಲ್ ಕಲಾಂ ಅವರ ಸರಳ ಬದುಕು ನಮಗೆಲ್ಲರಿಗೂ ಮಾದರಿ ಎಂದು ನಗರಸಭೆಯ ಸದಸ್ಯ ಡಾ.ಅಹಮದ್ ಪಟೇಲ್ ಹೇಳಿದರು.
ಅವರು ನಗರದ ಆಯೋಜಿಸಲಾದ ಅಬ್ದುಲ್ ಕಲಾಂ ಅವರ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿದ್ಯಾರ್ಥಿಗಳ ಅಚ್ಚುಮೆಚ್ಚಾಗಿದ ಅವರು, ಎಲ್ಲೇ ಹೋದರೂ ಯುವಜನರ ಜತೆ ಸಂವಾದದಲ್ಲಿ ತೊಡಗಿರುತ್ತಿದ್ದರು. ಅವರು ಜೀವನ ಯಾತ್ರೆ ಕೂಡ ಪಾಠದಲ್ಲೇ ಅಂತ್ಯವಾಯಿತು. ರಾಮೇಶ್ವರದ ಬಡ ಕುಟುಂಬದಲ್ಲಿ ಹುಟ್ಟಿದ ಕಲಾಂ, ದಿನ ಪತ್ರಿಕೆ ಹಂಚುತ್ತಲೇ ತಮ್ಮ ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡರು. ದೇಶಕ್ಕೂ ಹೊಸ ಕನಸುಗಳನ್ನು ಕೊಟ್ಟರು. ಅದನ್ನು ನನಸು ಮಾಡುವುದಕ್ಕೆ ದುಡಿದರು. ಬಾಹ್ಯಾಕಾಶ ಎಂಜಿನಿಯರಿಂಗ್‍ದಲ್ಲಿ ಡಾಕ್ಟರೆಟ್ ಪದವಿ ಗಳಿಸಿದರು. ಡಿಆರ್‍ಡಿಒ ಮತ್ತು ಇಸ್ರೋದಲ್ಲಿ ಹಿರಿಯ ವಿಜ್ಞಾನಿಯಾಗಿ ಕೆಲಸ ಮಾಡಿದರು.
ಇಡೀ ವಿಶ್ವವೇ ಭಾರತದತ್ತ ಬೆರಗುಕಣ್ಣುಗಳಿಂದ ನೋಡುವಂತಹ ಸಾಧನೆ ಮಾಡಿದರು ಎಂದರುಲ್ಮುಖಂಡರಾದ ನಿಂಗಣ್ಣ ಸಂಗಾವಿಕರ್ ಹಾಗೂ ಫಜಲ್ ಪಟೇಲ್ ಮಾತನಾಡಿ, ಭಾರತದ ಅತ್ಯುನ್ನತ ನಾಗರಿಕ ಗೌರವಾದ ‘ಭಾರತ ರತ್ನ’ ಪ್ರಶಸ್ತಿಗೆ ಅವರು ಪಾತ್ರರಾಗಿದ್ದರು. ಇದಲ್ಲದೆ ಪದ್ಮ ಭೂಷಣ ಕೂಡ ಅವರಿಗೆ ಒಲಿದು ಬಂದಿತ್ತು. ಬ್ರಹ್ಮಚಾರಿಯಾಗಿದ್ದ ಅವರು, ತಮ್ಮ ಇಡೀ ಜೀವನವನ್ನು ಅಧ್ಯಯನ, ಸಂಶೋಧನೆ, ಬಾಹ್ಯಾಕಾಶ ಕಾರ್ಯಕ್ರಗಳ ಯೋಜನೆಗಳಿಗೆ ಮೀಸಲಿಟ್ಟರು.
ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದ ಕಲಾಂ ಅವರು 2020 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮಾಡಬೇಕು ಎಂಬುದು ಅವರ ಕನಸಾಗಿತ್ತು. ಈ ದೇಶಕ್ಕೆ ಕಲಾಂ ಅವರ ಕೊಡುಗೆ ಅನನ್ಯ ಎಂದು ಹೇಳಿದರು.
ಮುಖಂಡ ಅನ್ವರ್ ಪಾಶಾ ಮಾತನಾಡಿ, ಈ ದೇಶಕ್ಕೆ ಸಲ್ಲಿಸಿದ್ದ ಕಲಾಂ ಅವರ ಸೇವೆಯನ್ನು ಗುರುತಿಸಿ ಪದ್ಮಭೂಷಣ, ಪದ್ಮವಿಭೂಷಣ, ಭಾರತ ರತ್ನ ನೀಡಿ ಗೌರವಿಸಲಾಗಿದೆ. ಅಂತಹ ಮೇರು ವ್ಯಕ್ತಿತ್ವದ ವ್ಯಕ್ತಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆದರ್ಶ ಬದುಕು ನಮಗೆ ಸ್ಪೂರ್ತಿ ಎಂದು ಹೇಳಿದರು. ಇಮ್ರಾನ್, ಮಹ್ಮದ್ ಅಜರೋದ್ದಿನ್, ಸಾಹೇಬ ಸೇರಿದಂತೆ ಇತರರು ಇದ್ದರು.